ಬೆಸ್ಕಾಂ ವಿರುದ್ಧ ಜೆಡಿಎಸ್ ಮುಖಂಡ ಟಿ.ಚಿದಾನಂದರೆಡ್ಡಿ ಆರೋಪ
ಸುಟ್ಟುಹೋದ ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿ ವಿಳಂಬ, ರಾತ್ರಿ ವೇಳೆ ಪಂಪ್ ಗಳ ವಿದ್ಯುತ್ ಕಡಿತಗೊಳಿಸುವ ಕಾರಣ ಬೆಳೆ ನಷ್ಟ ಹಾಗೂ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಹೊಲಗಳಲ್ಲಿ ಭಯಾಭೀತಿಯಿಂದ ಬದುಕು ಸ್ಥಿತಿ ಉಂಟಾಗಿದೆ ಎಂದು ರೈತ ಮುಖಂಡ ಟಿ.ಚಿದಾನಂದರೆಡ್ಡಿ ಆರೋಪಿಸಿದ್ದಾರೆ.

ಪಾವಗಡ : ಸುಟ್ಟುಹೋದ ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿ ವಿಳಂಬ, ರಾತ್ರಿ ವೇಳೆ ಪಂಪ್ ಗಳ ವಿದ್ಯುತ್ ಕಡಿತಗೊಳಿಸುವ ಕಾರಣ ಬೆಳೆ ನಷ್ಟ ಹಾಗೂ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಹೊಲಗಳಲ್ಲಿ ಭಯಾಭೀತಿಯಿಂದ ಬದುಕು ಸ್ಥಿತಿ ಉಂಟಾಗಿದೆ ಎಂದು ರೈತ ಮುಖಂಡ ಟಿ.ಚಿದಾನಂದರೆಡ್ಡಿ ಆರೋಪಿಸಿದ್ದಾರೆ.
ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಬೆಸ್ಕಾಂ ನಿರ್ವಹಣೆ ಸರಿಯಿಲ್ಲದ ಕಾರಣ ಆನೇಕ ಸಮಸ್ಯೆ ಎದುರಾಗಿದೆ. ರೈತ ಮತ್ತು ಜನಸಾಮಾನ್ಯರು ಅತ್ಯಂತ ಶೋಚನೀಯ ಸ್ಥಿತಿ ಎದುರಿಸುವಂತಾಗಿದೆಯೆಂದು ಅವರು ದೂರಿದ್ದಾರೆ. ಪದೇ ಪದೇ ವಿದ್ಯುತ್ ಕಡಿತಗೊಳಿಸುವ ಕಾರಣ ಗೃಹಬಳಕೆ ಹಾಗೂ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗುತ್ತಿದೆ. ಮಂಗಳವಾಡ ವಿದ್ಯುತ್ ಸರಬರಾಜ್ ಉಪ ಘಟಕದಲ್ಲಿ ವಿದ್ಯುತ್ ನಿರ್ವಹಣೆ ಕೈಗೊಳ್ಳದ ಕಾರಣ ಸಮಸ್ಯೆಗಳು ಎದುರಾಗಿವೆ.
ಆಸರ್ಮಕ ವಿದ್ಯುತ್ ನಿರ್ವಹಣೆಯ ಹಿನ್ನೆಲೆ ಟ್ರಾನ್ಸ್‌ಪಾರ್ಮರ್ ಸುಟ್ಟು ಹೋಗುತ್ತಿದ್ದು, ಸರ್ಕಾರದ ನಿಯಮನುಸಾರ ಶೀಘ್ರ ದುರಸ್ತಿ ಮಾಡಿಕೊಡಬೇಕು. ಟ್ರಾನ್ಸ್ ಪಾರ್ಮರ್ ದುರಸ್ತಿಗೆ ವಿಳಂಬ ಮಾಡುವ ಕಾರಣ ನೀರಾವರಿ ಬೆಳೆಗಳು ನಾಶವಾಗುತ್ತಿವೆ.
ಸುಟ್ಟು ಹೋದ ಟ್ರಾನ್ಸ್ ಪಾರ್ಮರ್ ದುರಸ್ತಿ ವಿಳಂಬ ಮಾಡದಂತೆ ಸರ್ಕಾರ ಕಟ್ಟು ನಿಟ್ಟಿನ ಆದೇಶ ಜಾರಿ ಪಡಿಸಿದೆ. ಆದರೂ, ಮಂಗಳವಾಡ ಬೆಸ್ಕಾಂ ವಿಭಾಗದ ಜೆಇ ಹಾಗೂ ದುರಸ್ತಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಟ್ರಾನ್ಸ್ ಪಾರ್ಮರ್‌ಗಳ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ.
ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಸುಟ್ಟುಹೋದ ಪಂಪ್‌ಸೆಟ್ ಟ್ರಾನ್ಸ್ ಪಾರ್ಮರ್ ದುರಸ್ತಿ ಕಾರ್ಯ ಶೀಘ್ರ ಸಕ್ರಮಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.
ರಾತ್ರಿ ವೇಳೆ ಪಂಪುಸೆಟ್‌ಗಳಿಗೆ ಸಿಂಗಲ್ ಫೇಸ್ ಕರೆಂಟ್ ಸರಬರಾಜ್ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಹಳೇ ಟಿಸಿ ಹಾಗೂ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ರೈತರಿಗೆ ಸಮರ್ಪಕ ವಿದ್ಯುತ್ ಕಲ್ಪಿಸುವ ಮೂಲಕ ಬೆಳೆಗಳ ಸಂರಕ್ಷಣೆಗೆ ಸಹಕರಿಸುವಂತೆ ಶಾಸಕ, ಇಂಧನ ಸಚಿವ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.