Asianet Suvarna News Asianet Suvarna News

'ಸೀಡಿ ಹೊರ ಬಂದರೆ ವಿಧಾನ ಸೌಧನೆ ನಡುಗುತ್ತೆ'

ರಾಜ್ಯದಲ್ಲಿ ಸೀಡಿ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಸೀಡಿ ಕೇಸ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಸೀಡಿ ಕೇಸ್ ವಿಧಾನಸೌಧವನ್ನೇ ನಡುಗಿಸುತ್ತೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

JDS Leader Sa Ra Mahesh Talks On CD Case snr
Author
Bengaluru, First Published Mar 29, 2021, 11:54 AM IST

ಕೆ.ಆರ್‌. ನಗರ (ಮಾ.29): ಒಂದು ದಶಕದ ಹಿಂದೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂದು ರಾಜ್ಯದ ಜನರು ಮಾತನಾಡುತ್ತಿದ್ದರು. ಆದರೆ ಈಗ ಸಿಡಿ ಹೊರ ಬಂದರೆ ವಿಧಾನಸೌಧ ನಡುಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಶಾಸಕ ಸಾ.ರಾ. ಮಹೇಶ್‌ ಕುಟುಕಿದರು.

ಪಟ್ಟಣದ 17ನೇ ವಾರ್ಡ್‌ ವ್ಯಾಪ್ತಿಯ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜು ಹಿಂಭಾಗ ಮೇಲ್ಮಟ್ಟದ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ರಾಜಕಾರಣಿಗಳ ವರ್ತನೆಯಿಂದ ಜನರು ಎಲ್ಲಾ ರಾಜಕೀಯ ನಾಯಕರನ್ನು ಮಾತನಾಡಿಸಿ, ಮನೆಗೆ ಕರೆಯಲು ಹಿಂಜರಿಯಬೇಕಾದ ಪರಿಸ್ಥಿತಿ ಬಂದಿದ್ದು ಮತದಾರರು ಸಹ ಸಚ್ಚಾರಿತ್ರ ಉಳ್ಳವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಬೆಳಗಾವಿ: ಸಿಡಿ ಲೇಡಿ ಕುಟುಂಬಸ್ಥರ ಆರೋಪ, ಪ್ರತಿಕ್ರಿಯೆಗೆ ಡಿಕೆಶಿ ನಕಾರ .

ರಾಜಕಾರಣಿಗಳು ಪ್ರಾಮಾಣಿಕರಾಗಿ ಇರದವರೆಗೆ, ಗುತ್ತಿಗೆದಾರರು ಮತ್ತು ಮತದಾರರು ಪ್ರಾಮಾಣಿಕವಾಗಿ ಮತ ಚಲಾಯಿಸದವರೆಗೆ ಚುನಾಯಿತರು ಪ್ರಾಮಾಣಿಕವಾಗಿ ಇರಲು ಹೇಗೆ ಸಾಧ್ಯ ಎಂದು ಪ್ರಸ್ನಿಸಿದರು.

2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮೇಲ್ಮಟ್ಟದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ 5 ಲಕ್ಷ ಲೀಟರ್‌ ನೀರು ಸಂಗ್ರಹಿಸಬಹುದಾಗಿದ್ದು, ಇದರಿಂದ 4 ವಾರ್ಡಿನ 7 ಸಾವಿರ ಮಂದಿಗೆ ಕುಡಿಯುವ ನೀರು ಸರಬರಾಜು ಆಗಲಿದೆ ಎಂದರು.

ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿ ಪುರಸಭೆ ಆಡಳಿತ ಮಂಡಳಿಯವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಶಾಸಕರು ನಮಗೆ ಮತ್ತಷ್ಟುಸಹಕಾರ ಮತ್ತು ಮಾರ್ಗದರ್ಶನ ಮಾಡಬೇಕು. ಪುರಸಭೆಗೆ ಮಂಜೂರಾಗಿದ್ದ 10 ಕೋಟಿ ಅನುದಾನ ವಾಪಸಾಗಿದ್ದು, ಅದನ್ನು ಮತ್ತೆ ಕೊಡಿಸಿಕೊಟ್ಟರೆ 23 ವಾರ್ಡುಗಳ ಸಮಗ್ರ ಅಭಿವೃದ್ದಿನ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಕೋರಿದರು.

Follow Us:
Download App:
  • android
  • ios