ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮುಖಂಡ : ಈಶ್ವರಪ್ಪ ಸಾಥ್
ಜೆಡಿಎಸ್ ಮುಖಂಡರೋರ್ವರು ತಮ್ಮ ಮೂಲಕ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜಕೀಯ ಚಟುವಟಿಕೆಗಳು ಬಿರುಸುಗೊಂಡ ಬೆನ್ನಲ್ಲೇ ಪಕ್ಷಾಂತರ ನಡೆದಿದೆ.
ಚಿಕ್ಕಮಗಳೂರು (ಡಿ.07): ತಾಲೂಕು ಜೆಡಿಎಸ್ ಉಪಾಧ್ಯಕ್ಷ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಇತ್ತೀಚೆಗೆ ಬೀರೂರಿನಲ್ಲಿ ನಡೆದ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಸಮ್ಮುಖ ಬಿಜೆಪಿ ಸೇರ್ಪಡೆಯಾದರು. ಸಚಿವರು ಪಕ್ಷದ ಬಾವುಟ ನೀಡುವ ಮೂಲಕ ನೀಲಕಂಠಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಕೋರಿದರು.
ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಮುಖಂಡರಾದ ನೀಲಕಂಠಪ್ಪ ಅವರು ಪಕ್ಷದ ತತ್ವ -ಸಿದ್ಧಾಂತಗಳನ್ನು ಮೆಚ್ಚಿಕೊಂಡು ಜನಸೇವೆ ಮಾಡುವ ಹಿತದೃಷ್ಟಿಯಿಂದ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಸಂತೋಷದಿಂದ ನೀಲಕಂಠಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನೀಲಕಂಠಪ್ಪ ಅವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪಕ್ಷವನ್ನು ಸಂಘಟಿಸಿ, ಜನಸೇವೆ ಮೂಲಕ ಮತ್ತು ತಾವೂ ಬೆಳೆದು ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಲಿ ಎಂದರು.
'ನಿಷ್ಠಾವಂತರನ್ನೂ ಉಳಿಸಿಕೊಳ್ಳದ ದಳಪತಿ : ಈ ಕಾರಣಕ್ಕೆ ಬಿಟ್ಟು ಹೋದರು' ...
ನೀಲಕಂಠಪ್ಪ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠರಾಗಿ ದುಡಿಯುತ್ತಿದ್ದ ತಮ್ಮನ್ನು ಪಕ್ಷವು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಆದಕಾರಣ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಹಿಂದುಳಿದ ತೆಲುಗುಗೌಡ ಸಮಾಜದ ತಮ್ಮನ್ನು ಪಕ್ಷದ ನಾಯಕರು ಅಧಿಕಾರವಿದ್ದಾಗ ತಮ್ಮನ್ನು ಗುರುತಿಸಲಿಲ್ಲ, ಹಿಂದುಳಿದ ವರ್ಗಗಳನ್ನು ಗುರುತಿಸಲಿಲ್ಲ. ಇದರಿಂದಾಗಿ ಬೇಸತ್ತು ಪಕ್ಷ ತೊರೆಯುವ ನಿರ್ಧಾರ ಕೈಗೊಂಡು ಬಿಜೆಪಿ ಸೇರಿದ್ದೇನೆ ಎಂದ ಅವರು, ಶಾಸಕರಾದ ಬೆಳ್ಳಿ ಪ್ರಕಾಶ್ ನಾಯಕತ್ವ ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಅದಕ್ಕಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.