ಹಾಸನ (ಮಾ.30):  ನಗರದ ಅಭಿವೃದ್ಧಿ ಬಗ್ಗೆ ಯೋಜನೆ ನಿರ್ವಹಿಸುವ ಹುಡಾ ಮತ್ತು ಹೌಸಿಂಗ್‌ ಬೋರ್ಡ್‌ ಎರಡನ್ನು ಮುಚ್ಚಿಸಿ ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ಕೊಟ್ಟುಬಿಡಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆದ ಹೆಚ್‌.ಡಿ. ರೇವಣ್ಣ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದ ಸುತ್ತ ಹಲವಾರು ಖಾಸಗಿ ಲೇಔಟ್‌ಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದು, ಕೆಲ ಅಧಿ​ಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ತೋಟಗಾರಿಕೆ ಇಲಾಖೆ, ಚೆಸ್ಕಾಂನ ಕೆಲ ಅಧಿ​ಕಾರಿಗಳು, ಅರಣ್ಯ ಇಲಾಖೆ ಅ​ಧಿಕಾರಿಗಳು ಭಾಗಿಗಳಾಗಿದ್ದಾರೆ. ಸರ್ಕಾರದ ಸಂಬಳ ತೆಗೆದುಕೊಳ್ಳುತ್ತಿರುವ ಇವರು ಭೂಗಳ್ಳರ ಜತೆ ಕೈಜೋಡಿಸಿ ರೈತರ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಹಾಗೂ ನಗರಾಭಿವೃದ್ಧಿ ಸಚಿವರಿಗೆ ದೂರು ನೀಡಲಾಗುವುದು ಎಂದರು.

ಸಚಿವರೋರ್ವರ ಖಾತೆ ಬದಲಾವಣೆ :ರೇವಣ್ಣ ಹೊಸ ಬಾಂಬ್ ...

ನಕಲಿ ದಾಖಲೆ ಸೃಷ್ಟಿ: ಉಪ ನೋಂದಣಾಧಿಕಾರಿ ಕಚೇರಿ ಹಾಗೂ ಕೆಲವೆಡೆ ದಾಖಲೆಗಳನ್ನೇ ನಕಲಿ ಮಾಡಲಾಗುತ್ತಿದೆ. ಹಾಗಾಗಿ ಹಾಸನದಲ್ಲಿ ಯಾರ ನಿವೇಶನವನ್ನು ಯಾರ ಹೆಸರಿಗಾದರೂ ರಿಜಿಸ್ಟರ್‌ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ನೀರಿನ ವ್ಯವಸ್ಥೆ, ವಿದ್ಯುತ್‌, ರಸ್ತೆ, ಪಾರ್ಕ್ ಇತರೆ ಯಾವುದನ್ನು ಮಾಡದೆ ಲೇಔಟ್‌ ಮಾಡಲಾಗುತ್ತಿದೆ. ನೂರು ಎಕರೆ ನಿವೇಶನ ಮಾಡಿದರೆ ಶೇ.60 ರಷ್ಟುನಿವೇಶನಗಳು ಇನ್ನುಳಿದ 40 ಭಾಗದಲ್ಲಿ ರಸ್ತೆ ಯಾವುದು ಇಲ್ಲ. ಈ ಕೆಲಸ ಮಾಡಿಕೊಟ್ಟಅಧಿಕಾರಿಗಳಿಗೆ 20 ರಷ್ಟುನಿವೇಶನ ಕೊಡಲಾಗುತ್ತಿದೆ. ಈ ಬಗ್ಗೆ ನನಗೆ ಸಾಕಷ್ಟುದೂರುಗಳು ಬಂದಿವೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸಿಎಂ ಹಾಗೂ ನಗರಅಭಿವೃದ್ಧಿ ಸಚಿವರಿಗೂ ಮತ್ತು ಇಲಾಖಾ ಕಾರ್ಯದರ್ಶಿ ಗಮನಕ್ಕೂ ತರಲಾಗುವುದು ಎಂದರು.

ಹುಡಾ ಇಲ್ಲವೇ ಹೌಸಿಂಗ್‌ಬೋರ್ಡ್‌ನಿಂದ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಖರೀದಿಸಿದ ನಿವೇಶನವನ್ನು 15 ವರ್ಷಗಳ ಕಾಲ ಯಾರು ಮಾರಾಟ ಮಾಡಲು ಅವಕಾಶ ಕೊಡಬಾರದು. ಈ ಕಾನೂನು ಜಾರಿಗೆ ತರಲು ಆಗದಿದ್ದರೆ ಹುಡಾ ಹೌಸಿಂಗ್‌ಬೋರ್ಡ್‌ಗಳನ್ನು ಖಾಸಗಿಯವರಿW ವಹಿಸಿಬಿಡಿ. ಇನ್ನು ಕೈಗಾರಿಕ ಅಭಿವೃದ್ಧಿ ಪ್ರದೇಶದಲ್ಲೂ ಇದೆ ರೀತಿ ಆಗುತ್ತಿದೆ ಎಂದು ದೂರಿದರು.

ಕಟ್ಟಾಯ ಹೋಬಳಿ ಕ್ಷೇತ್ರದ ಪುನರ್‌ ವಿಂಗಡಣೆ ವಿಚಾರದಲ್ಲಿ ಜನಸಂಖ್ಯೆ ಆಧಾರದ ಮೇಲೆ ಹಿಂದೆ ಯಾವ ರೀತಿ ಇತ್ತು ಅದೆ ರೀತಿ ಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಮೊದಲು ದನ-ಕರುಗಳಿಗೆ, ಜನರಿಗೆ ನೀರು ಇಲ್ಲದೆ ಸಾಯುತ್ತಿರುವ ಬಗ್ಗೆ ಗಮನ ಕೊಟ್ಟರೆ ಸಾಕು. ಇನ್ನು ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ. ಈ ಸಮಸ್ಯೆಯನ್ನು ಕೇಳುವವರು ಯಾರು ಎಂದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಕುಟುಕಿದರು. ಹಾಸನ ಜಿಲ್ಲೆಯ ಆಸ್ಪತ್ರೆಗಳ ಕಥೆ ಕೇಳಿದರೆ ಸರಕಾರಿ ಆಸ್ಪತ್ರೆಗೆ ಜನರು ಹೋಗುವುದಿಲ್ಲ. 108 ತುರ್ತು ವಾಹನಗಳನ್ನು ಖಾಸಗಿ ಆಸ್ಪತ್ರೆ ಕಡೆಯೇ ತಿರುಗಿಸುತ್ತಾರೆ. ಮೊದಲು ತಾಲೂಕು ಆಸ್ಪತ್ರೆಗಳಿಗೆ ಹೋಗಬೇಕು. ನಂತರ ಜಿಲ್ಲಾ ಆಸ್ಪತ್ರೆಗೆ ಬರಬೇಕು. ಈ ರೀತಿ ಆಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.