Asianet Suvarna News Asianet Suvarna News

'ಮನ್‌​ಮುಲ್‌ ಹಗ​ರ​ಣ ಸಂಬಂಧ ಯಾವ ತನಿಖೆಯಾದರೂ ಮಾಡಿಕೊಳ್ಳಲಿ'

  • ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ
  • ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ
  • ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ  - ಎಚ್‌ ಡಿಕೆ
JDS Leader HD Kumaraswamy Tracts On Manmul Case snr
Author
Bengaluru, First Published Jun 30, 2021, 10:18 AM IST
  • Facebook
  • Twitter
  • Whatsapp

ಮಳವಳ್ಳಿ (ಜೂ.30): ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ. ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ. 

ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಈ ಮೂಲಕ ಮನ್‌ಮುಲ್‌ ಆಡಳಿತ ಮಂಡಳಿ ವಿರುದ್ಧದ ಮಾಜಿ ಸಚಿವ ಚಲುವರಾಯಸ್ವಾಮಿ ಟೀಕೆಗೆ ತಿರುಗೇಟು ನೀಡಿದರು.

ಬಹಿರಂಗ ಹೇಳಿಕೆ ಕೊಡಲಿ : ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

ನೀರು ಮಿಶ್ರಿತ ಹಾಲು ಹಗರಣದ ತನಿಖೆಗೆ ಜೆಡಿಎಸ್‌ ವರಿಷ್ಠರೇ ಅಡ್ಡಿಯಾಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಾಲಿಗೆ ನೀರು ಬೆರೆಸುತ್ತಿರುವುದು 10-15 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. 

ಆದರೆ, ಮಹಾನುಭಾವರೊಬ್ಬರು ಹಾಲಿ ಆಡಳಿತ ಮಂಡಳಿ ಸೂಪರ್‌ಸೀಡ್‌ ಆಗಬೇಕೆನ್ನುತ್ತಿದ್ದಾರೆ. ಅವರ (ಚಲುವರಾಯಸ್ವಾಮಿ) ನಾಯಕತ್ವದಲ್ಲೇ ಸಿಎಂ ಬಳಿ ನಮ್ಮ ಶಾಸಕರು, ಆಡಳಿತ ಮಂಡಳಿಯವರನ್ನು ಕರೆದುಕೊಂಡು ಹೋಗಿ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಹೇಳಿದರು.

Follow Us:
Download App:
  • android
  • ios