ಬೆಂಗಳೂರು [ಜ.11]:  ಬಿಜೆಪಿಗೆ ಅಧಿಕಾರ ಗಳಿಸುವ ಭ್ರಮೆ, ಹುಚ್ಚು ಇದೆ. ಎಲ್ಲ ಜಾತ್ಯತೀತ ಶಕ್ತಿಗಳು ಒಂದಾದರೆ ಇದನ್ನು ಕೊನೆಗಾಣಿಸಬಹುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದ ಬಾಗಲಕುಂಟೆ ಎಂಇಐ ಮೈದಾನದಲ್ಲಿ ಸಂವಿಧಾನ ಉಳಿಸಿ ಶೀರ್ಷಿಕೆಯಡಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶಕ್ತಿ ಇರಬೇಕು. ಆದರೆ, ಬಿಜೆಪಿಗೆ ರಾಜ್ಯಸಭೆಯಲ್ಲಿ ಕಡಿಮೆ ಶಕ್ತಿ ಇದೆ. ಆದರೂ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದರು.

ಕುಮಾರಸ್ವಾಮಿ ಸ್ಫೋಟಕ ವಿಡಿಯೋ ರಿಲೀಸ್: ಒಂದಲ್ಲ ಎರಡಲ್ಲ 35.

ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಎರಡು ಸಾವಿರ ಮುಸ್ಲಿಮರ ಹತ್ಯೆ ಮಾಡಿಸಿದ್ದರು. ಗೋಧ್ರಾದಲ್ಲಿ ಒಂದು ರೈಲು ಬೋಗಿಗೆ ಬೆಂಕಿ ಇಟ್ಟಿದ್ದರು. ಆಗ ಅವರ ಮೇಲೆ ಪ್ರಕರಣ ದಾಖಲಿಸಬಾರದು ಎಂದಿದ್ದರು. ಈ ಘಟನೆಗೆ ನಾವೆಲ್ಲ ಸಮಾಲೋಚನೆ ಸಹ ಮಾಡಿದ್ದೆವು ಎಂದು ಹೇಳಿದರು.

ಮತ್ತೆ ಮೈತ್ರಿ ಚಿಗುರು? ಮೋದಿ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ..

ಭೂಪಾಲ್‌ನಲ್ಲಿ ಬಿಜೆಪಿಯವರು 19 ಚರ್ಚ್ ಗಳನ್ನು ಒಡೆದಿದ್ದು, ಮಹಿಳೆಯ ಮೇಲೆ ಅತ್ಯಾಚಾರ ಎಸಗಿಸಿದ್ದಾರೆ. ಇದು ತುಂಬಾ ನೋವುಂಟು ಮಾಡಿದೆ. ಇನ್ನು, ಕಾಶ್ಮೀರದಲ್ಲಿ ಯಾಕೆ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಕುಟುಂಬವನ್ನು ಗೃಹಬಂಧನದಲ್ಲಿಡಲಾಗಿದೆ. ನಾನು ಐದು ಬಾರಿ ಕಾಶ್ಮೀರಕ್ಕೆ ಹೋಗಿದ್ದೆ. ಏನು ಆಗಿರಲಿಲ್ಲ. ಆದರೆ, ಅವರನ್ನೆಲ್ಲಾ ಜೈಲಲ್ಲಿ ಇಟ್ಟು ಬಿಜೆಪಿಯವರು ಅಧಿಕಾರ ಮಾಡುತ್ತಿದ್ದಾರೆ. ಈ ಹಿಂದಿನ ಘಟನೆಗಳನ್ನು ಮರೆತು ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗಬೇಕು. ನಾನೇ ಎಲ್ಲರ ಮನೆಗೆ ಹೋಗುತ್ತೇನೆ ಎಂದು ಬಿಜೆಪಿ ವಿರುದ್ಧ ಒಟ್ಟಾಗಿ ಹೋಗುವ ಕರೆ ನೀಡಿದರು.