Asianet Suvarna News Asianet Suvarna News

'ಶಾಸಕ ಬೆಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ'

* ತಮ್ಮ ಕ್ಷೇತ್ರ ಸುಧಾ​ರಿ​ಸದ ಬೆಲ್ಲದ ರಾಜ್ಯ ಹೇಗೆ ನಿಭಾ​ಯಿ​ಸು​ತ್ತಾರೆ ?
* ಸುಳ್ಳು ಹೇಳಿ ದೆಹ​ಲಿಗೆ ಹೋಗಿ​ದ್ಯಾಕೆ: ಜೆಡಿ​ಎಸ್‌ ಮುಖಂಡ ಹುಣ​ಸೀ​ಮ​ರದ ಟೀಕೆ
* ರಾಜ​ಕೀ​ಯಕ್ಕೆ ಬಂದು ಹೇಗೆ 700 ಕೋಟಿ ಆಸ್ತಿ ಮಾಡಿ​ದರು?

JDS Leader Gururaj Hunasimarad Talks Over BJP MLA Aravind Bellad grg
Author
Bengaluru, First Published Jun 16, 2021, 8:42 AM IST

ಧಾರ​ವಾ​ಡ(ಜೂ.16): ವಿಧಾನಸೌಧದ ನಾಲ್ಕು ಮೂಲೆಗಳ ಬಗ್ಗೆ ಮಾಹಿತಿ ಇಲ್ಲದ, ವ್ಯಾಪಾರಿ ರಾಜಕಾರಣಿಯಾಗಿರುವ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ ಎಂದು ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಟೀಕಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹುಬ್ಬಳ್ಳಿ-ಧಾರಾವಾಡ ಪಶ್ಚಿಮ ಕ್ಷೇತ್ರವು ಕೋವಿಡ್‌ನಿಂದ ಬಳ​ಲು​ತ್ತಿ​ದ್ದರೆ ನಾನು ಮುಖ್ಯ​ಮಂತ್ರಿ​ ಆಗುತ್ತೇನೆಂದು ದೆಹ​ಲಿಗೆ ಹೋಗಿ​ದ್ದಾರೆ. ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ತಾವು ಸಂಬಂಧಿ​ಕರ ಭೇಟಿಗೆ ಹೋಗಿದ್ದು ಯಾವುದೇ ರಾಜ​ಕೀಯ ನಾಯಕ ಭೇಟಿಗಲ್ಲ ಎಂದು ಸ್ವತಃ ಹೇಳಿಕೆ ನೀಡಿ​ದ್ದಾರೆ. ಹಾಗಾ​ದ​ರೆ, ಬೆಲ್ಲದ ಅವರ ಸಂಬಂಧಿ​ಕರು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರು​ಣ​ಸಿಂಗ್‌ ಹಾಗೂ ಬಿ.ಎಲ್‌. ಸಂತೋಷ ಅವರ ಮನೆ​ಯ​ಲ್ಲಿ​ದ್ದಾ​ರೆಯೇ ? ಎಂದು ಹುಣ​ಸೀ​ಮ​ರದ ಪ್ರಶ್ನಿ​ಸಿ​ದರು.

ಒಂದೂ ದಿನ ಪಕ್ಷ​ಕ್ಕಾಗಿ, ಕ್ಷೇತ್ರದ ಜನ​ರಿಗೆ ಹಾಗೂ ಸಮಾ​ಜದ ಜನ​ರಿಗೆ ದುಡಿ​ಯದ ಬೆಲ್ಲದ ಈಗ ಮುಖ್ಯ​ಮಂತ್ರಿ ಆಗಲು ಹೊರ​ಟಿ​ರು​ವುದು ಹಾಸ್ಯಾ​ಸ್ಪದ. ಸ್ವಯಂ ಘೋಷಿತ ಮುಖ್ಯ​ಮಂತ್ರಿ. ಇದ​ರಿಂದ ಕ್ಷೇತ್ರದ ಅಭಿ​ವೃ​ದ್ಧಿಗೂ ಕಂಟಕ ಎಂದು ಕಟು​ವಾಗಿ ಟೀಕಿ​ಸಿ​ದರು.

BJP VS BJP : ಇಬ್ಬರು ಸಚಿವರ ನಡುವೆ ಪರಸ್ಪರ ವಾಕ್‌ಪ್ರಹಾರ

ಕೋವಿಡ್‌ ಹಿನ್ನೆ​ಲೆ​ಯಲ್ಲಿ ಕ್ಷೇತ್ರದ ಜನರು ತತ್ತ​ರಿಸಿದ್ದಾರೆ. ಸರಿ​ಯಾಗಿ ಲಸಿಕೆ ದೊರೆ​ಯು​ತ್ತಿಲ್ಲ. ಒಂದೂ ಆಸ್ಪ​ತ್ರೆಗೆ ಇವರು ಭೇಟಿ ನೀಡಿ ವೈದ್ಯರ ಕಾರ್ಯ​ವೈ​ಖರ ಪರಿ​ಶೀ​ಲಿ​ಸಿಲ್ಲ. ಹು-ಧಾ ಇನ್ನೂ ಸ್ಮಾರ್ಟ್‌ಸಿಟಿ ಆಗಿಲ್ಲ. ಶೈಕ್ಷ​ಣಿಕ ಅಭಿ​ವೃದ್ಧಿ ಇಲ್ಲ. ತಾವೊಬ್ಬ ಕೈಗಾ​ರಿ​ಕೋ​ದ್ಯಮಿ ಎನ್ನುವ ಬೆಲ್ಲದ ಒಂದೂ ಕಂಪನಿ ತಂದಿಲ್ಲ. ಒಬ್ಬ​ರಿಗೂ ಉದ್ಯೋಗ ಕೊಡಿ​ಸಿಲ್ಲ. ತಮ್ಮ ಮನೆಯ ಎದು​ರಿನ ಟೆಂಡರ್‌ ಶ್ಯೂರ್‌ ರಸ್ತೆ ನಾಲ್ಕು ವರ್ಷ​ಗ​ಳಿಂದ ನನೆ​ಗು​ದಿ​ಗೆ ​ಬಿ​ದ್ದಿದ್ದು ಟೆಂಡರ್‌ ಇಲ್ಲ, ತಮ್ಮ ಕ್ಷೇತ್ರದ ಅಭಿ​ವೃ​ದ್ಧಿಯೇ ಗೊತ್ತಿ​ಲ್ಲದ ಶಾಸಕನನ್ನು ಮುಖ್ಯ​ಮಂತ್ರಿ ಮಾಡಿ​ದರೆ ರಾಜ್ಯದ ಗತಿ ಏನು? ಎಂದು ಹುಣ​ಸೀ​ಮ​ರದ ಪ್ರಶ್ನಿ​ಸಿ​ದರು.

ಜಿಲ್ಲೆ​ಯಲ್ಲಿ ಹಿರಿ​ಯ​ರಾದ ಕೇಂದ್ರ ಸಚಿವ ಪ್ರಹ್ಲಾ​ದ​ ಜೋ​ಶಿ, ಸಚಿವ ಜಗ​ದೀಶ ಶೆಟ್ಟರ್‌ ಇದ್ದಾರೆ. ಅವ​ರನ್ನು ಮೀರಿ ಮುಖ್ಯ​ಮಂತ್ರಿ ಸ್ಥಾನಕ್ಕೆ ಕಣ್ಣಿ​ಟ್ಟಿ​ರು​ವುದು ಸರಿಯಲ್ಲ ಎಂದರು. ಅರ​ವಿಂದ ಬೆಲ್ಲದ ಅವರ ತಂದೆ ಚಂದ್ರ​ಕಾಂತ ಬೆಲ್ಲದ ಮಾರು​ಕ​ಟ್ಟೆ​ಯಲ್ಲಿ ಬಳ್ಳೊಳ್ಳಿ, ಈರುಳ್ಳಿ ಮಾರಾಟ ಮಾಡುವ ವ್ಯಾಪಾ​ರಿ​ಗಳು ಎಂದು ಅವರ ಸಮಾನ ವಯ​ಸ್ಕರು ಹೇಳು​ತ್ತಿ​ದ್ದಾ​ರೆ. ರಾಜ​ಕೀ​ಯಕ್ಕೆ ಬಂದು ಹೇಗೆ 700 ಕೋಟಿ ಆಸ್ತಿ ಮಾಡಿ​ದರು ಎಂಬ ಪ್ರಶ್ನೆ ಎದ್ದಿದೆ. ಅರ​ವಿಂದ ಬೆಲ್ಲದ ಅವ​ರಿಗೆ ವಿಧಾ​ನ​ಸೌ​ಧಧ ನಾಲ್ಕು ಮೂಲೆ​ಗಳ ಬಗ್ಗೆಯೇ ಮಾಹಿತಿ ಇಲ್ಲ. ಅವ​ರೊಬ್ಬ ವ್ಯಾಪಾರಿ ರಾಜ​ಕಾ​ರಣಿ. ಹೀಗಾಗಿ ಮುಖ್ಯ​ಮಂತ್ರಿ ಸ್ಥಾನಕ್ಕೆ ಅವರು ಅರ್ಹ​ರಲ್ಲ ಎಂದು ಹುಣ​ಸೀ​ರ​ಮದ ಪುನ​ರು​ಚ್ಚಿ​ಸಿ​ದ​ರು. ಸುದ್ದಿ​ಗೋ​ಷ್ಠಿ​ಯಲ್ಲಿ ರಾಜು ಅಂಬೋರೆ, ರಮಾ​ನಾಥ ಶಣೈ, ಈರಣ್ಣ ಬಾರ​ಕೇರ, ಶಾಂತ​ವೀರ ಬೆಟ​ಗೇರಿ ಇದ್ದ​ರು.
 

Follow Us:
Download App:
  • android
  • ios