ಜೆಡಿಎಸ್‌ಗೆ ಜಾರಕಿಹೊಳಿಗೆ ಆಹ್ವಾನ : ನೊಂದು ದಳ ಬಿಟ್ಟ ಮುಖಂಡ

 ಚುನಾವಣೆ ಹೊಸ್ತಿಲಲ್ಲಿ ಬೇರೆ ಪಕ್ಷದವರನ್ನು ಪಕ್ಷಕ್ಕೆ ಬರಲು ಸ್ವಾಗತ ಕೋರಿದ ಪಕ್ಷದ ವರಿಷ್ಠರ ನಡೆ ಸರಿಯಾದುದಲ್ಲ. ಆ ಕಾರಣಕ್ಕೆ ಜೆ.ಡಿ.ಎಸ್‌. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸ್ಪಷ್ಟಪಡಿಸಿದರು.

JDS Leader Bheemappa Gadada Quits JDS snr

ಮೂಡಲಗಿ (ಡಿ.04): ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅರಭಾವಿ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 49,800 ಮತಗಳನ್ನು ಪಡೆದು ಪರಾಭವಗೊಂಡರೂ ಪಕ್ಷದ ಸಂಘಟನೆಯಲಿದ್ದೇನು. ಆದರೆ, ಚುನಾವಣೆ ಹೊಸ್ತಿಲಲ್ಲಿ ಬೇರೆ ಪಕ್ಷದವರನ್ನು ಪಕ್ಷಕ್ಕೆ ಬರಲು ಸ್ವಾಗತ ಕೋರಿದ ಪಕ್ಷದ ವರಿಷ್ಠರ ನಡೆ ಸರಿಯಾದುದಲ್ಲ. ಆ ಕಾರಣಕ್ಕೆ ಜೆ.ಡಿ.ಎಸ್‌. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸ್ಪಷ್ಟಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ರೀತಿಯ ಮಾನಸಿಕ ಹಿಂಸೆಗಳನ್ನು ನೀಡುತ್ತಿದ್ದರೂ ಅವೆಲ್ಲವುಗಳನ್ನು ಸಹಿಸಿಕೊಂಡು ಜೆಡಿಎಸ್‌ (JDS)  ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿರುವೆ. ಆದರೆ, ಪಕ್ಷದಲ್ಲಿಯೇ ಇತ್ತೀಚಿನ ಬೆಳವಣಿಗೆಗಳನ್ನು ಮಾಧ್ಯಮದಲ್ಲಿಯ ಕೆಲ ಹೇಳಿಕೆಗಳನ್ನು ಗಮನಿಸಿದಾಗ ನನಗೆ ತಡೆಯಲಾರದಷ್ಟು ಮಾನಸಿಕ ಹಿಂಸೆಯಾಗಿದೆ.

ಮೂಡಲಗಿ ಪುರಸಭೆಯಲ್ಲಿ 23 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬಿಜೆಪಿ (BJP) ಅಭ್ಯರ್ಥಿಗಳ ವಿರುದ್ಧ ನಿಲ್ಲಿಸಿದ್ದೇನು. ಅದರಲ್ಲಿ ಜೆಡಿಎಸ್‌ನ 8 ಸದಸ್ಯರು ಆಯ್ಕೆಯಾಗಿದ್ದಾರೆ. ಜೆ.ಡಿ.ಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಸಮಯದಲ್ಲಿ ಜೆ.ಡಿ.ಎಸ್‌. ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡುವುದನ್ನು ಬಿಟ್ಟು ಬಿ.ಜೆ.ಪಿ ಪಕ್ಷದವರನ್ನು ಪುರಸಭೆಗೆ ನಾಮ ನಿರ್ದೇಶನ ಮಾಡಿದ್ದನ್ನು ಗಮನಿಸಿದರೆ ಕುಮಾರ ಸ್ವಾಮಿಯವರುದು ಜಾರಕಿಹೊಳಿಯವರೊಂದಿಗೆ ಹೊಂದಾಣಿಕೆ ರಾಜಕೀಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಎಲ್ಲ ಅಂಶಗಳಿಂದ ಮನನೊಂದು ಮುಖ್ಯವಾಗಿ ಬಾಲಚಂದ್ರ ಜಾರಕಿಹೊಳಿ ಪಕ್ಷಕ್ಕೆ ಬರಲು ಆಹ್ವಾನ ನೀಡುತ್ತಿರುವುದಕ್ಕೆ ನನ್ನ ವಿರೋಧವಿದ್ದು, ಈ ಕಾರಣದಿಂದ ಜೆ.ಡಿ.ಎಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಮದಗುಣಕಿ, ಮಲ್ಲಪ್ಪ ತೇರದಾಳ, ಸಿದ್ದು ಬಳಿಗಾರ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಮುಖಂಡರು ಶಾಸಕ ಕೆ. ಮಹದೇವ್‌ ನೇತೃತ್ವದಲ್ಲಿ ಜೆಡಿಎಸ್‌ ಸೇರ್ಪಡೆ

ಬೆಟ್ಟದಪುರ (.29)  ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಮುರದೂರು ಗ್ರಾಮದ ಕಾಂಗ್ರೆಸ್‌ ಮುಖಂಡರು ಶಾಸಕ ಕೆ. ಮಹದೇವ್‌ ನೇತೃತ್ವದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಶಾಸಕ ಮಹದೇವ್‌ ಅವರು ಗ್ರಾಮದ ಅಭಿವೃದ್ಧಿಗಾಗಿ . 20 ಲಕ್ಷದ ರಸ್ತೆ (Road)  ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿಗಾಗಿ ಶಾಸಕನಾಗಿದ್ದೇನೆ ಹೊರತು ಹಣ ಮಾಡುವ ಉದ್ದೇಶವಿಲ್ಲ. ಕಡು ಬಡತನದಲ್ಲಿ ಹುಟ್ಟಿದ ನನಗೆ ಬಡವರ ಕಷ್ಟಗೊತ್ತು. ಆದ್ದರಿಂದ ಹಣವನ್ನು (money) ಯಾವುದೇ ಸಂದರ್ಭದಲ್ಲಿ ಸಂಪಾದನೆ ಮಾಡಬಹುದು. ಆದರೆ ಬಡವರ ಕಷ್ಟವನ್ನು ತಿಳಿಯುವುದು ಬಹಳ ಕಷ್ಟಎಂದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಕುಮಾರ್‌, ಪಂಚ್ವಳ್ಳಿ ಸಂತೋಷ್‌, ಕೆಂಪಣ್ಣ ಮರದುರು, ಮಹದೇವ್‌, ಸಂತೋಷ್‌ ಹಾಗೂ ಜಿಪಂ ಎಇಇ ಮಲ್ಲಿಕಾರ್ಜುನ್‌ ಇದ್ದರು.

ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ

ಚಿಕ್ಕಬಳ್ಳಾಪುರ  ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡತನವನ್ನ ಹೋಗಲಾಡಿಸಲಾಗಿಲ್ಲ. ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆಯ 10ನೇ ದಿನವಾದ ಭಾನುವಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಮಂಚೇನಹಳ್ಳಿ, ಮುಸ್ಟೂರು, ಗೊಲ್ಲಹಳ್ಳಿ, ಪೆರೇಸಂದ್ರ, ಹೊನೇಗಲ್ಲು, ದಿಬ್ಬೂರು, ನಾಯನಹಳ್ಳಿ ಗ್ರಾಮಗಳಲ್ಲಿ ನಡೆದ ರಥಯಾತ್ರೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದರು.

ಆರೋಗ್ಯ ಲೆಕ್ಕಿಸದೇ ಯಾತ್ರೆ: ಇಂದು ನನ್ನ ಆರೋಗ್ಯವನ್ನು ಲೆಕ್ಕಿಸದೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ನೂರು ದಿನ ಹಮ್ಮಿಕೊಂಡಿದ್ದೇನೆ. ನಿಮಗೆ ನಮ್ಮ ಪಂಚರತ್ನ ಯೋಜನೆ ಬಗ್ಗೆ ತಿಳಿಸಲು ಓಡಾಡುತ್ತಿದ್ದೇನೆ. ಕಳೆದ 10 ದಿನಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆಂದರು. ಸ್ವಾತಂತ್ರ್ಯ ಬಂದ ಬಳಿಕ ಎಷ್ಟೋ ನೇಮಕಾತಿಯಾಗಿಲ್ಲ. ಸರಿಯಾಗಿ ಕಟ್ಟಡ ಕಟ್ಟಿಲ್ಲ. ಎರಡು ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್‌ ಕೊಟ್ಟಿಲ್ಲ. ಈ ಭಾಗದಲ್ಲಿ ಬಸ್‌ ವ್ಯವಸ್ಥೆ ಕೂಡ ಸರಿಯಾಗಿಲ್ಲ. 

ಬಿಜೆಪಿ ಸರ್ಕಾರ ಬಂದಾಗಲೇ ಗಡಿ ಗಲಾಟೆ: ಎಚ್‌.ಡಿ.ಕುಮಾರಸ್ವಾಮಿ

ಹೀಗಿರುವಾಗ ಬಡ ಮಕ್ಕಳು ಶಾಲೆಗೆ ಹೋಗಿ ಕಲಿಯೋದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಇದಕ್ಕಾಗಿ ಪಂಚರತ್ನ ಯೋಜನೆಗೆ 1ಲಕ್ಷ 20 ಸಾವಿರ ಕೋಟಿ ಹಣ ಹೊಂದಿಸಬೇಕಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಹಣ ಪೋಲಾಗಲು ಬಿಡೋದಿಲ್ಲ. ಜನತೆಯ ಸಮಸ್ಯೆ ಆಧಾರದ ಮೇಲೆ, ಜನರಿಗೆ ಅನುಕೂಲ ಆಗಲು ಪ್ರಣಾಳಿಕೆ ತರುತ್ತವೆಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios