'ಬಿಜೆಪಿಗೆ ಬೆಂಬಲ ನೀಡುವ ಸುಳಿವು ಬಿಟ್ಟು ಕೊಟ್ಟ ಜೆಡಿಎಸ್ ನಾಯಕ'

ಇಲ್ಲಿವರೆಗೆ ನಡೆಸಿದ ಸಮೀಕ್ಷೆಗಳು ಇದುವರೆಗೂ ಸರಿಯಾಗಿಲ್ಲ| ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ| ಎಲ್ಲರದೂ ಒಂದೆ ರೀತಿಯಾಗಿ ಬಂದಿಲ್ಲ ಎಂದ ಬಸವರಾಜ್ ಹೊರಟ್ಟಿ| ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವದು ನನ್ನ ನಂಬಿಕೆ| 

JDS Leader Basavaraj Horatti Talks Over BJP, JDS Coalition Government

ಧಾರವಾಡ(ಡಿ.06): ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೆಗೌಡ ಅವರು ಕೂಡಾ ಅದನ್ನೆ ಹೇಳಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.‌

ಶುಕ್ರವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣಾ ಸಮೀಕ್ಷೆ ವಿಚಾರಕ್ಕೆ ಸಹ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿವರೆಗೆ ನಡೆಸಿದ ಸಮೀಕ್ಷೆಗಳು ಇದುವರೆಗೂ ಸರಿಯಾಗಿಲ್ಲ, ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ, ಎಲ್ಲರದೂ ಒಂದೆ ರೀತಿಯಾಗಿ ಬಂದಿಲ್ಲ ಎಂದು ಹೇಳಿದ್ದಾರೆ. ಜನರ ಭಾವನೆಗಳು ಯಾರಿಗೂ ಗೊತ್ತಾಗುವುದಿಲ್ಲ ಆದ್ದರಿಂದ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬುವುದಿಲ್ಲ, ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚುನಾವಣಾ ಫಲಿತಾಂಶದ ನಂತರ ಸರ್ಕಾರದ ವಿಚಾರಕ್ಕೆ ಮಾತನಾಡಿದ ಅವರು, 7 ಸೀಟ್ ಗಳು ಬಂದರೆ ಮಾತ್ರ ಸರ್ಕಾರ ಉಳಿಯುತ್ತೆ ಇಲ್ಲವಾದ್ರೆ ಬೇರೆ ಡೆವಲಪ್‌ಮೆಂಟ್ ನಡೆಯತ್ತೆ. ಜನರಿಗೆ ಸರ್ಕಾರ ಬೀಳಬಾರದು ಎಂಬ ಆಸೆ ಇದೆ ಆ ಹಿನ್ನೆಲೆಯಲ್ಲಿ ಏನಾದ್ರು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೀಳಬಾರದು ಎನ್ನುವ ಮಾತನ್ನು ಕೂಡಾ ದೇವೆಗೌಡರು ನಿನ್ನೆನೆ ಹೇಳಿದ್ದಾರೆ. ಸಿದ್ದರಾಮಯ್ಯನ ಜೊತೆ ಸೇರಿ ಕಾಂಗ್ರೆಸ್ ಜೊತೆ ಕೈ ಜೊಡಿಸುವ ಮನಸ್ಸು ದೇವೆಗೌಡರಿಗೆ ಇಲ್ಲ, ಫಲಿತಾಂಶ ಬಂದ ನಂತರ ಎಲ್ಲಾ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ವಿಚಾರಕ್ಕೆ ಮಾತನಾಡಿದ ಅವರು, ಎನ್‌ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇ ಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನ ಇಟ್ಟುಕೊಳ್ಳಬಾರದು ಎನ್‌ಕೌಂಟರ್ ಮಾಡಿದ್ದು ಸರಿಯಾದ ಕ್ರಮ. ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಒಂದು ತಿಂಗಳಲ್ಲಿ ಮರಣ ದಂಡನೆಯಂತಹ ಬಿಲ್ ಪಾಸ್ ಮಾಡಬೇಕು,ಅಂದಾಗ ಅತ್ಯಾಚಾರಿಗಳಿಗೆ ಎಚ್ಚರಿಕೆ ಮುಟ್ಟುತ್ತದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯ ಸಜ್ಜನ ಅವರ ಮಗ ವಿಶ್ವನಾಥ್ ಸಜ್ಜನ  ಅವರು ನನಗೆ ಪರಿಚಿತರಾಗಿದ್ದಾರೆ. ಸಜ್ಜನ ಅವರು ಎನ್‌ಕೌಂಟರ್ ಮಾಡಿದ್ದು ಒಳ್ಳೆಯ ನಿರ್ಧಾರವಾಗಿದೆ. ಎನ್‌ಕೌಂಟರ್ ವಿರೋಧ ಮಾಡುವುದು ಸರಿಯಲ್ಲ. ಹೆಣ್ಣು ಮಕ್ಕಳಿಗೆ ರೇಪ್ ಮಾಡಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಇದೊಂದು ಹೇಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ಮಾಜಿ ಶಾಸಕ ಕೋನರಡ್ಡಿ ಹೇಳಿಕೆಗೆ ತಿರುಗೇಟು ಹೊರಟ್ಟಿ, ಮುಖ್ಯಮಂತ್ರಿ ಸ್ಥಾನವನ್ನು ನಮಗೆ ಬೇಕು ಅನ್ನೋಕಾಗೊಲ್ಲ, ಯಾರಿಗೆ ಹೆಚ್ಚಿನ ಬಹುಮತ ಬಂದಿರುತ್ತದೆ ಅವರು ಅದನ್ನು ತೀರ್ಮಾನ ಮಾಡುತ್ತಾರೆ. ಹಿಂದೆ ಬಿಜೆಪಿ ಹೊರಗಿಡುವ ಸಲುವಾಗಿ ಜೆಡಿಎಸ್ ಮೈತ್ರಿ ಆಗಿತ್ತು ಎಂದು ತಿಳಿಸಿದ್ದಾರೆ. 

ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿಕೆ ವಿರೋಧ ವ್ಯಕ್ತಪಡಿಸಿದ ಹೊರಟ್ಟಿ, ಈರುಳ್ಳಿ ತಿನ್ನೋಲ್ಲ ಅಂತಾ ಹೇಳಿಕೆ ನೀಡಿರುವ ಕೇಂದ್ರ ಸಚಿವೆ, ತಮ್ಮ ಅಧಿಕಾರ ಇದೆ  ಅಂತಾ ಹಾಗೆ ಹೇಳಿದ್ದಾರೆ. ದೇಶದ ಪರಿಸ್ಥಿತಿ ಸರಿಯಿಲ್ಲ, ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios