ಪಾವಗಡ (ಫೆ.07):  ತಾಲೂಕಿನ ಬ್ಯಾಡನೂರು ಗ್ರಾಪಂ ಅಧ್ಯಕ್ಷ ಸ್ಥಾನ ಜೆಡಿಎಸ್‌ ತೆಕ್ಕೆಗೆ ಬಿದಿದ್ದು, ನೂತನ ಅಧ್ಯಕ್ಷರಾಗಿ ಗುಂಡಾರ್ಲಹಳ್ಳಿ ಶ್ರೀವೇಣಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಬ್ಯಾಡನೂರು ಗ್ರಾಮದ ಅಕ್ಕಮ್ಮ ಆಯ್ಕೆಯಾಗಿದ್ದಾರೆ.

ತಾಲೂಕಿನ ಬ್ಯಾಡನೂರು ಗ್ರಾಪಂನಲ್ಲಿ ಕಾಂಗ್ರೆಸ್‌ ಬೆಂಬಲಿತ 8 ಹಾಗೂ ಜೆಡಿಎಸ್‌ ಬೆಂಬಲಿತ 6 ಮಂದಿ ಸೇರಿ ಒಟ್ಟು 14 ಮಂದಿ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಈ ಸ್ಥಾನಗಳ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 5 ಮಂದಿ ನಾಮಪತ್ರ ಸಲ್ಲಿಸಿದ್ದರು. 

ಜೆಡಿಎಸ್ ತೆಕ್ಕೆಗೆ ಒಲಿಯಿತು ಅಧಿಕಾರ ..

ಆದರೆ, ಚುನಾವಣೆಗೂ ಮುನ್ನ ಬೆಳಗ್ಗೆ 10 ಗಂಟೆಗೆ ಬ್ಯಾಡನೂರು ಗ್ರಾಮದ ನಿವಾಸವೊಂದರಲ್ಲಿ ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು ಹಾಗೂ ಮುಖಂಡ ರವಿ ನೇತೃತ್ವದಲ್ಲಿ ತಮ್ಮ ಬೆಂಬಲಿಗ ಸದಸ್ಯರ ಜತೆ ಸಭೆ ನಡೆಸಿ ಮೊದಲನೇ ಅವಧಿಗೆ ಕಾಂಗ್ರೆಸ್‌ ಬೆಂಬಲಿತ ಬಿ.ದೊಡ್ಡಹಟ್ಟಿದೇವರಾಜ್‌ ಎಂಬುವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಿ ಕೊಡಿ ಎಂದು ಪಕ್ಷ ಬೆಂಬಲಿತ ಸದಸ್ಯರಿಗೆ ಮನವೊಲಿಸಲಾಗಿತ್ತು. 

ಸಭೆಯ ತೀರ್ಮಾನದ ಬಳಿಕ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಕಾಂಗ್ರೆಸ್‌ ಬೆಂಬಲಿತ 8 ಮಂದಿ ಸದಸ್ಯರ ಪೈಕಿ ಮೂರು ಮಂದಿ ಸದಸ್ಯರು 6 ಮಂದಿ ಇದ್ದ ಜೆಡಿಎಸ್‌ ಪರ ಮತ ಚಲಾಯಿಸಿದ್ದ ಹಿನ್ನೆಲೆಯಲ್ಲಿ ಒಟ್ಟು 9 ಮಂದಿ ಸದಸ್ಯರ ಬೆಂಬಲದ ಮೇರೆಗೆ ಜೆಡಿಎಸ್‌ ಬೆಂಬಲಿತ ಸದಸ್ಯೆ ಗುಂಡಾರ್ಲಹಳ್ಳಿ ಶ್ರೀವೇಣಿ ಹಾಗೂ ಉಪಾಧ್ಯಕ್ಷರಾಗಿ ಬ್ಯಾಡನೂರು ಗ್ರಾಮದ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಅಕ್ಕಮ್ಮ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ತಾಲೂಕು ಜೆಡಿಎಸ್‌ ಅಧ್ಯಕ್ಷ ಬಲರಾಮರೆಡ್ಡಿ ತಿಳಿಸಿದ್ದಾರೆ.