ಮೈಸೂರು [ಜ.13]: ನಾನು ಹೈ ಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ನನ್ನ ಯಾವುದೇ ಗುಂಪು ಇಲ್ಲ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾಜಿ ಸಚಿವ ಜಿ.ಟಿ.ದೇವೇಗೌಡಗೆ ಟಾಂಗ್ ನೀಡಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಶಾಸಕ ಸಾ ರಾ ಮಹೇಶ್, ಮೇಯರ್ ಆಯ್ಕೆ ಸಂಬಂಧ ಸಭೆ ನಡೆಯುತ್ತಿದ್ದು, ಆದರೆ ಜಿಟಿಡಿ ಗೈರಾಗಿದ್ದಾರೆ. ನಗರಾಧ್ಯಕ್ಷರು ಅವರನ್ನು ಸಭೆಗೆ ಆಹ್ವಾನಿಸಿದ್ದರು ಅವರು ಗೈರಾಗಿದ್ದಾರೆ. ಮೈಸೂರಿಗೆ ಮೇಯರ್ ಯಾರಾಗಬೇಕೆಂದು ಅವರೇ ಸೂಚಿಸಲಿ. ಅವರ ಸಲಹೆ ಪಡೆದುಕೊಂಡೇ ಮೇಯರ್ ಆಯ್ಕೆ ಮಾಡುತ್ತೇವೆ ಎಂದರು. 

ಜಿಟಿಡಿ ಬೆಂಬಲಿಸೋ ವ್ಯಕ್ತಿಗೆ ನನ್ನ ವೋಟ್: ಸಾರಾ ಮಹೇಶ್...

ನಮ್ಮಲ್ಲಿ ಐದು ಜನರು ಮೇಯರ್ ಆಕಾಂಕ್ಷಿಗಳಿದ್ದಾರೆ. ಅವರ ಹಿರಿತನ, ಪಕ್ಷ ಸಂಘಟನೆ ಹಾಗೂ ವಾರ್ಡ್ ಅಭಿವೃದ್ಧಿ ಕೆಲಸ ನೋಡಿ ಮೇಯರ್ ಆಯ್ಕೆ ಮಾಡಲಾಗುತ್ತದೆ.  ಮೇಯರ್ ಆಯ್ಕೆ ನನ್ನೊಬ್ಬನ ತೀರ್ಮಾನವಲ್ಲ. ಎಲ್ಲಾ ಪಾಲಿಕೆ ಸದಸ್ಯರ ತೀರ್ಮಾನ ಎಂದರು. 

ಮೈಸೂರು: ಮೇಯರ್, ಉಪಮೇಯರ್ ಎಲೆಕ್ಷನ್‌ಗೆ ಡೇಟ್ ಫಿಕ್ಸ್‌...

ಇನ್ನು ಈ ಬಾರಿಯೂ ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿಯಲಿದೆ. ಈಗಾಗಲೇ ಕಾಂಗ್ರೆಸಿಗರ ಜೊತೆ ಮಾತನಾಡಿದ್ದು, ಮತ್ತೊಂದು ಬಾರಿ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸುತ್ತೇವೆ. ಬಳಿಕ ವರಿಷ್ಠರಿಗೆ ಈ ಬಗ್ಗೆ ತಿಳಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದರು.