ಶಿರಾ (ಸೆ.21): ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾದ ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಯಾರಿಗೆ ಟಿಕೇಟ್ ನೀಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ. 

ಶಾಸಕ ಸತ್ಯನಾರಾಯಣ ಮೃತಟ್ಟ ನಂತರ ಮಾಜಿ ಪ್ರಧಾನಿ ದೇವೇಗೌಡ ಅವರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲ ಮೂಡಿದೆ.

ಸತ್ಯನಾರಾಯಣ ಪತ್ನಿ ಅಥವಾ ಮಗನಿಗೆ ಟಿಕೆಟ್ ಕೊಟ್ಟರೆ ಅನುಕಂಪದಿಂದ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ದಿನ ಕಳೆದಂತೆ ಅನುಕಂಪದ ಅಲೆ ಕಡಿಮೆಯಾಗುತ್ತಿದ್ದು, ಯಾರು ಸೂಕ್ತ ಅಭ್ಯರ್ಥಿ ಎನ್ನುವ ಪ್ರಶ್ನೆ ಮೂಡಿದೆ. 

' ಜೋಡೆತ್ತುಗಳ ನಡುವೆ ಮುನಿಸು : ಶಿರಾದಲ್ಲಿ ಬಿಜೆಪಿ ಗೆಲುವು ಕನ್ಫರ್ಮ್' ...

ಶಿರಾ ಜೆಡಿಎಸ್ ಪಕ್ಷದಲ್ಲಿ ಸದ್ಯ ನಾಲ್ವರ ಹೆಸರುಗಳು ಚಾಲ್ತಿಯಲ್ಲಿವೆ.  ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಉಗ್ರೇಶ್, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಸಿ.ಆರ್ ಉಮೇಶ್, ಶಾಸಕ ಸತ್ಯನಾರಾಯಣ  ಪುತ್ರ ಸತ್ಯಪ್ರಕಾಶ್ ಈ ನಾಲ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲುವು ಸಾಧಿಸಬಹುದು ಎಂಬ ಆಲೋಚನೆಯಲ್ಲಿ ಪಕ್ಷದ ವರಿಷ್ಠರು ಯೋಚಿಸುತ್ತಿದ್ದಾರೆ.