Asianet Suvarna News Asianet Suvarna News

ಭದ್ರಾವತಿ : ಜೆಡಿಎಸ್‌ಗೆ ಒಲಿದ ಭರ್ಜರಿ ಜಯ - ಠೇವಣಿ ಕಳೆದುಕೊಂಡ ಬಿಜೆಪಿ

  • ಭದ್ರಾವತಿ ನಗರಸಭೆ 29 ನೇ ವಾರ್ಡ್‌ ಚುನಾವಣಾ ಫಲಿತಾಂಶ ಪ್ರಕಟ
  • ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಕುಮಾರ್ ಗೆ ಭರ್ಜರಿ ಜಯ
JDS candidate wins in  Bhadravathi city corporation  by poll snr
Author
Bengaluru, First Published Sep 6, 2021, 9:54 AM IST

ಭದ್ರಾವತಿ (ಸೆ.06):  ನಗರಸಭೆ 29 ನೇ ವಾರ್ಡ್‌ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಕುಮಾರ್ ಗೆ ಭರ್ಜರಿ ಜಯ ದೊರಕಿದೆ.  

 

450 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಗೆಲುವಿನಿಂದ ಭದ್ರಾವತಿ ನಗರಸಭೆ ಯಲ್ಲಿ ಜೆಡಿಎಸ್ ಸ್ಥಾನ 12 ಕ್ಕೆ ಏರಿಕೆಯಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. 

ಕಾಂಗ್ರೆಸ್‌ಗೆ ಬಾಯ್,JDSಗೆ ಹಾಯ್ ಎಂದ ಮಾಜಿ ಸಂಸದರ ಪುತ್ರ

ಜೆಡಿಎಸ್ ನ ನಾಗರತ್ನಾ ಅನಿಲ್‌ಕುಮಾರ್  1282  ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಲೋಹಿತಾ ನಂಜಪ್ಪ 832 ಮತಗಳನ್ನು ಪಡೆದಿದ್ದಾರೆ.  ಬಿಜೆಪಿಯ ರಮಾ ವೆಂಕಟೇಶ್‌ ಕೇವಲ 70 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಚುನಾವಣೆಯಲ್ಲಿ 16 ನೋಟಾ ಮತಗಳು ಚಲಾವಣೆಯಾಗಿವೆ.

ಒಟ್ಟು 3374 ಮತದಾರರಿದ್ದು ಅದರಲ್ಲಿ 2200 ಮತಗಳು ಚಲಾವಣೆಗೊಂಡಿದ್ದವು.  ಅದರಲ್ಲಿ ಅತ್ಯಧಿಕ ಬಹುಮತ ಪಡೆದ ಜೆಡಿಎಸ್ಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಏಪ್ರಿಲ್‌ನಲ್ಲಿ ನಡೆದ ನಗರಸಭೆ ಚುನಾವಣೆ ವೇಳೆ 29 ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪ್ರಚಾರದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು . ಈ  ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 29 ನೇ ವಾರ್ಡ್ನ ಚುನಾವಣೆ ರದ್ದು ಪಡಿಸಿತ್ತು. 
ಆಯೋಗ  ಮರು ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಲೋಹಿತಾ ನಂಜಪ್ಪ , ಜೆಡಿಎಸ್ ನ ನಾಗರತ್ನಾ ಅನಿಲ್‌ಕುಮಾರ್ , ಬಿಜೆಪಿಯಿಂದ ರಮಾ ವೆಂಕಟೇಶ್‌ ಕಣದಲ್ಲಿ ಸ್ಪರ್ಧೆ ಮಾಡಿದ್ದರು. 

 ಪ್ರಸ್ತುತ ಭದ್ರಾವತಿ ನಗರಸಭೆ 34 ವಾರ್ಡ್‌ಗಳ ಪೈಕಿ ಕಾಂಗ್ರೆಸ್ -18 , ಜೆಡಿಎಸ್‌ - 11 , ಬಿಜೆಪಿ -4 , ಪಕ್ಷೇತರ -1 ಸದಸ್ಯ ಸ್ಥಾನ ಪಡೆದುಕೊಂಡಿದೆ. ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ ಈಗಾಗಲೆ ಅಧಿಕಾರ ನಿರ್ವಹಿಸುತ್ತಿದೆ. 

Follow Us:
Download App:
  • android
  • ios