ಶ್ರೀರಾಮುಲುಗೆ ಹಾರ ಹಾಕಿ ಜೈ ಎಂದ ಜೆಡಿಎಸ್ ಅಭ್ಯರ್ಥಿ ಪತಿ
* ಬಿಜೆಪಿ ಕಾರ್ಯಕ್ರಮವನ್ನೇ ಉಪಯೋಗಿಸಿಕೊಂಡ ಜೆಡಿಎಸ್ ಅಭ್ಯರ್ಥಿ
* ಶ್ರೀರಾಮುಲುಗೆ ಹಾರ ಹಾಕಿದ ಜೆಡಿಎಸ್ ಅಭ್ಯರ್ಥಿಯ ಪತಿ
* ಅನಿರೀಕ್ಷಿತ ಸನ್ನಿವೇಶದಿಂದ ಅವಾಕ್ಕಾದ ಬಿಜೆಪಿ ಕಾರ್ಯಕರ್ತರು
ಧಾರವಾಡ(ಆ.30): ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಬಂದಿದ್ದ ಸಚಿವ ಬಿ.ಶ್ರೀರಾಮುಲು ಅವರಿಗೆ ಜೆಡಿಎಸ್ ಅಭ್ಯರ್ಥಿಯ ಪತಿ ಹಾರ ಹಾಕಿದ ಸಂದರ್ಭ ನಡೆದಿದೆ.
ಶ್ರೀರಾಮುಲು ವಾರ್ಡ್ ಸಂಖ್ಯೆ 25ರ ವ್ಯಾಪ್ತಿಯ ತಡಸಿನಕೊಪ್ಪದಲ್ಲಿ ಮಂಜುಳಾ ಸಾಕರೆ ಪರವಾಗಿ ಮತ ಯಾಚಿಸುತ್ತಿದ್ದರು. ವಾಲ್ಮೀಕಿ ಸಮುದಾಯದವರೇ ಹೆಚ್ಚು ಇರುವ ಈ ಪ್ರದೇಶದಲ್ಲಿ ಅದೇ ಸಮಾಜಕ್ಕೆ ಸೇರಿದ ಜೆಡಿಎಸ್‌ನಿಂದ ಲಕ್ಷ್ಮಿ ಹಿಂಡಸಗೇರಿ ಅವರು ಸ್ಪರ್ಧಿಸಿದ್ದಾರೆ.
'ಸಿದ್ದು-ಡಿಕೆಶಿ ಕೇವಲ ಫೋಟೋ ಫ್ರೆಂಡ್ಸ್: ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕೆ ಪೈಪೋಟಿ'
ಬಿಜೆಪಿ ಕಾರ್ಯಕ್ರಮವನ್ನೇ ಉಪಯೋಗಿಸಿಕೊಂಡ ಜೆಡಿಎಸ್‌ನ ಅಭ್ಯರ್ಥಿ, ಶ್ರೀರಾಮುಲುಗೆ ಹಾರ ಹಾಕಿ ಜೈಕಾರ ಹಾಕಿದರು. ಜತೆಗೆ ವಾಲ್ಮೀಕಿ ಸಮುದಾಯಕ್ಕೂ ಜೈಕಾರ ಹಾಕಿದರು. ಇದಕ್ಕೆ ಅಲ್ಲಿ ಸೇರಿದ್ದ ಜನರೂ ದನಿಗೂಡಿಸಿ ಅವರೂ ಜೈ ಎಂದರು. ಈ ಅನಿರೀಕ್ಷಿತ ಸನ್ನಿವೇಶದಿಂದ ಶ್ರೀರಾಮುಲು ಸೇರಿದಂತೆ ಬಿಜೆಪಿ ಕಾರ್ಯಕರ್ತರೂ ಅವಾಕ್ಕಾದರು.