ಪಂಚಮಸಾಲಿಗೆ 2ಎ ಮೀಸಲಾತಿನ ನೀಡಿದ್ರೆ ಬೇರೆ ಸಮಾಜಕ್ಕೆ ನಷ್ಟ: ಕೂಡಲ ಶ್ರೀ ಪ್ರತಿಕ್ರಿಯೆ
ಸಹೋದರ ಸಮಾಜದವರು ವಿರೋಧಿಸುವುದು ಸಲ್ಲ| ಪಂಚಮಸಾಲಿ ಸಮುದಾಯ ರಾಜಕೀಯ ಮೀಸಲಾತಿ ಕೇಳುತ್ತಿಲ್ಲ: ಜಯಮೃತ್ಯುಂಜಯ ಶ್ರೀ| ತುಮಕೂರು ಜಿಲ್ಲೆಯ ಶಿರಾದ ಚಿಕ್ಕನಹಳ್ಳಿಗೆ ಆಗಮಿಸಿದ ಮೀಸಲಾತಿ ಪಾದಯಾತ್ರೆ|
ತುಮಕೂರು(ಫೆ.09): ಪಂಚಮಸಾಲಿ ಸಮುದಾಯ ರಾಜಕೀಯ ಮೀಸಲಾತಿ ಕೇಳುತ್ತಿಲ್ಲ ಹೀಗಾಗಿ ಸಹೋದರ ಸಮಾಜದವರು ವಿರೋಧಿಸುವುದು ಗೊಂದಲ ಹೇಳಿಕೆ ನೀಡುವುದು ಮಾಡಬಾರದು ಎಂದು ಜಯಮೃತ್ಯುಂಜಯ ಶ್ರೀ ತಿಳಿಸಿದ್ದಾರೆ.
ಶಿರಾ ನಗರದಲ್ಲಿ ಮಾತನಾಡಿದ ಶ್ರೀಗಳು, 2ಎ ಮೀಸಲಾತಿ ನೀಡಿದರೆ ಸಣ್ಣ ಪುಟ್ಟ ಸಮಾಜಕ್ಕೆ ನಷ್ಟವಾಗುವುದಿಲ್ಲ ಎಂದ ಅವರು ಪಂಚಮಸಾಲಿ ಸಮಾಜ ಎಲ್ಲರಿಗೂ ಒಳಿತನ್ನು ಮಾಡುತ್ತಲೇ ಬಂದಿದೆ. ಯಾರೂ ತಪ್ಪಾಗಿ ಅರ್ಥಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ತುಮಕೂರಿಗೆ ಆಗಮಿಸಿದ ಪಂಚಮಸಾಲಿ ಪಾದಯಾತ್ರೆ
ಎಲ್ಲರೂ ಒಂದೆಡೆ ಕುಳಿತು ಚರ್ಚೆ ಮಾಡೋಣ ಎಂದ ಅವರು ಶೇ.15 ರಷ್ಟು2ಎ ಮೀಸಲಾತಿಯನ್ನ ಶೇ.30 ಕ್ಕೆ ಏರಿಕೆ ಮಾಡುವಂತೆ ಎಲ್ಲರೂ ಒಟ್ಟಾಗಿ ಒತ್ತಡ ಹೇರೋಣ ಎಂದರು. ಯಾವುದೇ ಜನಾಂಗದ ಮಠಗಳಿಗೆ ಪಂಚಮಸಾಲಿಗಳ ಕೊಡುಗೆ ಬಹಳ ದೊಡ್ಡದಿದೆ ಎಂದ ಅವರು ಮಠಾಧೀಶರು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು ಎಂದರು.
ಮೀಸಲಾತಿಗಾಗಿ ಸರ್ಕಾರವನ್ನು ಆಗ್ರಹ ಮಾಡಿ ಇಲ್ಲದಿದ್ದರೆ ಸುಮ್ಮನೆ ಕುಳಿತುಕೊಂಡು ಆಶೀರ್ವಾದ ಮಾಡಿ ಎಂದ ಅವರು ಗೊಂದಲ ಹೇಳಿಕೆ ಕೊಡುವ ಪ್ರಯತ್ನ ಮಾಡಿದರೆ ನಮ್ಮ ಸಮಾಜದವರು ನಿಮ್ಮ ಬಳಿ ಬರುತ್ತಿದ್ದಾರೆ. ಅವರು ಅಸಮಾಧಾಗೊಳ್ಳುವ ಸಾಧ್ಯತೆ ಇದೆ ಎಂದರು.