ವಿಜಯಪುರ(ಡಿ.06): ಸಿಎಂ ಬದಲಾವಣೆ ಮಾಡೋದೇ ಆದ್ರೆ ಉತ್ತರ ಕರ್ನಾಟಕದ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ಕೊಡಿ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದ್ದಾರೆ.

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕೇಂದ್ರಕ್ಕೆ ಬಿಟ್ಟದ್ದು, ಅವರು ಏನಾದರು ಮಾಡಲಿ. ಯಡಿಯೂರಪ್ಪ ಬದಲಿಗೆ ಬೇರೆಯವರನ್ನ‌ ಸಿಎಂ ಮಾಡೋದೇ ಆದ್ರೆ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿ. ಪಂಚಮಸಾಲಿ ಸಮುದಾಯದವರನ್ನೇ ಸಿಎಂ ಮಾಡಿ ಎಂದ ಶ್ರೀಗಳು ಆಗ್ರಹಿಸಿದ್ದಾರೆ. 

'ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಇಲ್ಲದಿದ್ರೆ ಡಿ. 23ರಿಂದ ಬೆಂಗಳೂರು ಚಲೋ'

ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಸವಣ್ಣನವರ ಹೆಸರು ಇಡಬೇಕು. ಬಸವಣ್ಣನವರ ಹೆಸರು ಇಟ್ಟರೇ ಬಹಳ ಸೂಕ್ತವಾಗಿರುತ್ತದೆ. ದಲಿತ ಅಭಿವೃದ್ಧಿ ನಿಗಮಕ್ಕೆ ಅಂಬೇಡ್ಕರ್ ಹೆಸರು ಇಡಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ದೇವರಾಜ ಅರಸು ಹೆಸರಿಡಲಾಗಿದೆ. ಹಾಗೆಯೇ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಸವಣ್ಣನವರ ಹೆಸರು ಇಡಬೇಕು ಅಂತ ಸರ್ಕಾರ ಎದುರು ಪ್ರಸ್ತಾಪವನ್ನ ಇಟ್ಟಿರುವೆ ಎಂದು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದ್ದಾರೆ.