ಯತ್ನಾಳ ಬಗ್ಗೆ ಹಗುರವಾಗಿ ಮಾತನಾಡಬಾರದು: ಅರುಣ ಸಿಂಗ್‌ಗೆ ಕೂಡಲ ಶ್ರೀ ಎಚ್ಚರಿಕೆ

ಅರುಣ ಸಿಂಗ್‌ ಅವರಿಗೆ ಕರ್ನಾಟಕದ ಬಗ್ಗೆ ತಿಳಿದಿಲ್ಲ. ಯಾವುದೇ ಕಾರಣಕ್ಕೂ ಅರುಣ ಸಿಂಗ್‌ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ 

Jayamrutunjaya Swamiji React to Arun Singh Statement  grg

ಬೆಳಗಾವಿ(ಅ.19): ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಕಾರ್ಯಕರ್ತರು ಕೂಡ ನಾಯಕರು ಎಂದು ಹೇಳುತ್ತಾರೆ. ಆದರೆ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಅವರಿಗೆ ಕರ್ನಾಟಕದ ಬಗ್ಗೆ ತಿಳಿದಿಲ್ಲ. ಯಾವುದೇ ಕಾರಣಕ್ಕೂ ಅರುಣ ಸಿಂಗ್‌ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಹಗುರವಾಗಿ ಮಾತನಾಡಬಾರದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ನಮ್ಮ ನಾಯಕನಲ್ಲ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜನರಿಗೆ ಬಸನಗೌಡ ಪಾಟೀಲ ಯತ್ನಾಳ ಅವರು ನಾಯಕರಲ್ಲ ಎಂದು ಅರುಣ ಸಿಂಗ್‌ ಹೇಳಿರುವುದು ನಮ್ಮ ಸಮುದಾಯದವರಿಗೆ ನೋವುಂಟಾಗಿದೆ. ಹುಕ್ಕೇರಿಯಲ್ಲಿ ಅ.21 ರಾಜ್ಯಮಟ್ಟದ ಲಿಂಗಾಯತ ಪಂಚಮಸಾಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದ್ದು, ಈ ವೇಳೆ ಇದಕ್ಕೆ ಉತ್ತರ ಕೊಡಲಿದ್ದೇವೆ. ಅರುಣಸಿಂಗ್‌ ಅವರು ಯತ್ನಾಳ ಸೇರಿದಂತೆ ಪಂಚಮಸಾಲಿ ಸಮಾಜದ ನಾಯಕರಿಗೆ ಅವಮಾನಕರ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ನಿರ್ಲಕ್ಷ್ಯ ಮಾಡಲಾಗ್ತಿದ್ಯಾ: ಅರುಣ್‌ ಸಿಂಗ್‌ ಹೇಳಿದ್ದಿಷ್ಟು

ಅ.21ರಂದು ಹುಕ್ಕೇರಿಯಲ್ಲಿ ನಡೆಯುವ ಪಂಚಮಸಾಲಿ ಸಮಾವೇಶದಲ್ಲಿ ಮೀಸಲಾತಿ ನೀಡದ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು. ವಿಧಾನಸೌಧದ ಮುಂಭಾಗದಲ್ಲಿ 25 ಲಕ್ಷ ಪಂಚಮಸಾಲಿ ಸಮಾಜದವರು ಆಗಮಿಸಿ ಸರ್ಕಾರಕ್ಕೆ ಒತ್ತಡ ಹಾಕುವ ಪ್ರಯತ್ನ ಮಾಡಿ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಶಶಿಕಾಂತ ನಾಯಿಕ, ಆರ್‌.ಕೆ.ಪಾಟೀಲ, ದಿನೇಶ ಪಾಟೀಲ, ಗುಂಡು ಪಾಟೀಲ, ಹಣಮಂತ ಕೊಂಗಾಲಿ, ಬಿ.ಐ.ಪಾಟೀಲ, ರಾಜು ಮಗದುಮ ಇನ್ನಿತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios