Asianet Suvarna News Asianet Suvarna News

ಮತದಾನ ಪ್ರಮಾಣ ಹೆಚ್ಚಿಸಲು ಜಾಥಾ ಆಯೋಜನೆ

ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ತಾಪಂ ಇಒ ಶಶಿಧರ ತಿಳಿಸಿದರು.

Jatha planning to increase voter turnout snr
Author
First Published Mar 20, 2024, 10:19 AM IST

 ಮಧುಗಿರಿ :  ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ತಾಪಂ ಇಒ ಶಶಿಧರ ತಿಳಿಸಿದರು.

ಶಾಲಾ ಮಕ್ಕಳು, ಅಂಗನವಾಡಿ, ಆಶಾ, ಎಎನ್‌ಎಂಗಳು ಸಿಎಚ್‌ಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ಮಾತನಾಡಿದರು.

ಮಾ.21 ರಂದು ತಾಪಂ ಆವರಣದಲ್ಲಿ ಮತ್ತು 23ರಂದು ಬಸ್‌ ನಿಲ್ದಾಣದಲ್ಲಿ ಮತದಾನದ ಜಾಗೃತಿ ಪೋಸ್ಟರ್‌ ಬಿಡುಗಡೆ ಮಾ 25 ರಂದು ತಾಲೂಕಿನ ಎಲ್ಲ ಶಾಲೆಗಳಲ್ಲಿ ಸಂಕಲ್ಪ ಪತ್ರ ಅಭಿಯಾನ, ಮಾ.27ರಂದು ಅಧಿಕಾರಿಗಳು ನೌಕರರ ಜೊತೆ ಪಟ್ಟಣದಲ್ಲಿ ಮಾ.30ರಂದು ಪಟ್ಟಣದ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ದೇಗುಲದಲ್ಲಿ ಸಹಿ ಸಂಗ್ರಹ ಅಭಿಯಾನ, ಏ.2ರಂದು ಮಹಾತ್ಮ ಗಾಂಧಿ ವೃತ್ತ, ಡೂಂಲೈಟ್‌ ಸರ್ಕಲ್‌ನಿಂದ ನೃಪತುಂಗ ರಸ್ತೆ ವರೆಗೆ ನೌಕರರು, ವಸತಿ ಶಾಲೆ ವಿದ್ಯಾರ್ಥಿಗಳಿಂದ ಮೇಣದ ಬತ್ತಿ ಅಭಿಯಾನ. ಏ.4ರಂದು ದಂಡಿಮಾರಮ್ಮ ಜಾತ್ರೆಯಲ್ಲಿ ಮತದಾನದ ಜಾಗೃತಿ ಮೂಡಿಸುವ ಕಿರು ನಾಟಕ ನಡೆಯಲಿದೆ.

ಏ.6 ರಂದು ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮ, ಏ.8ರಂದು ಸಂತೆ ಮೈದಾನದಲ್ಲಿ ಏ.13ರಂದು ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ ರಾಷ್ಟ್ರಧ್ವಜ ಹಾರಿಸಿ ಜಾಗೃತಿ ಮೂಡಿಸಲಾಗುವುದು. ಏ.15ರಂದು ಪಟ್ಟಣದಲ್ಲಿ ವಾಕ್‌ವಿತ್‌ ಮೊಬೈಲ್‌ ಟಾರ್ಚ್‌, ಏ.18ರಂದು ವಿಕಲ ಚೇತನ ಮೂಲಕ ಪಟ್ಟಣದಲ್ಲಿ ಬೈಕ್‌ ಜಾಥಾ, ಏ.20ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ, ಏ.22ರಂದು ತಾಪಂನಿಂದ ದಂಡಿಮಾರಮ್ಮ ದೇವಸ್ಥಾನದವರೆಗೆ ಮ್ಯಾರಥಾನ್‌, ಏ.24ರಂದು ಇಲ್ಲಿನ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ ಯೋಗ ನಡೆಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಇಓ ಶಶಿಧರ ಮನವಿ ಮಾಡಿದರು.

Follow Us:
Download App:
  • android
  • ios