ಬಳ್ಳಾರಿ (ಜ.04): ದೇಶದಲ್ಲಿ ಶೇ 80ರಷ್ಟು ಹಿಂದೂಗಳಿದ್ದರೆ, ಅಲ್ಪಸಂಖ್ಯಾತರ ಸಂಖ್ಯೆ ಕೇವಲ 17 ರಷ್ಟು ಮಾತ್ರ. ಹಾಗಾಗಿ ಯಾವುದೇ ಹೆಜ್ಜೆ ಮುಂದಿಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಧಮ್ಕಿ ಹಾಕಿದ್ದ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ.

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ಪ್ರಚೋದನಾಕಾರಿ ಭಾಷಣ ವಿರೋಧಿಸಿ ಇಂದು (ಶನಿವಾರ) ಕೋಟೆನಾಡು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು, ಈ ಪ್ರತಿಭಟನೆಯಲ್ಲಿ ಜನಾರ್ದನ ರೆಡ್ಡಿ ಬಂಟ  ಅಲಿಖಾನ್ ಪ್ರತ್ಯಕ್ಷವಾಗಿರುವುದು ಅಚ್ಚರಿ ಮೂಡಿಸಿದೆ.

ಪ್ರಚೋದನಕಾರಿ ಭಾಷಣ: ರೆಡ್ಡಿ ವಿರುದ್ಧ ಬಳ್ಳಾರಿ, ಗದಗನಲ್ಲಿ ಬೃಹತ್ ಪ್ರತಿಭಟನೆ

ಯಾಕಂದ್ರೆ ಅಲಿಖಾನ್ ಕೇವಲ ಜನಾರ್ದನ ರೆಡ್ಡಿ ಆಪ್ತ ಮಾತ್ರವಲ್ಲದೇ ಒಂದು ಕಾಲದಲ್ಲಿ ಸೋಮಶೇಖರ್ ರೆಡ್ಡಿಗೂ ಆಪ್ತರಾಗಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರತಿಯೊಂದು ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜತೆಗೆ ಅಲಿಖಾನ್ ಹೆಸರು ಸಹ ತಳುಕು ಹಾಕಿಕೊಂಡಿದೆ.

ಪ್ರಚೋದನಾಕಾರಿ ಭಾಷಣ: ಸೋಮಶೇಖರ್ ರೆಡ್ಡಿ ವಿರುದ್ಧ ದೂರು

ಇದೀಗ ಅಲಿಖಾನ್ ಸೋಮಶೇಖರ್ ರೆಡ್ಡಿ ವಿರುದ್ಧದ ಬೀದಿಗಿಳಿದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಷ್ಟೇ ಅಲ್ಲದೇ ಅಲಿಖಾನ್ ಹಾಗೂ ರೆಡ್ಡಿ ಬ್ರದರ್ಸ್ ನಡುವೆ ಗೆಳೆತನ ಹಳಸಿದ್ಯಾ ಎನ್ನುವ ಪ್ರಶ್ನೆಗಳು ಸಹ ಉದ್ಭವಿಸಿವೆ.