ಕಾಂಗ್ರೆಸ್‌ ಪ್ರಭಾವಿ ನಾಯಕ ಬಂಡಾಯ,  'ಕೈ' ತಪ್ಪುತ್ತಾ ಜಮಖಂಡಿ?

ಕಾಂಗ್ರೆಸ್ ಬಂಡಾಯ ಮುಖಂಡನಿಗೆ ಬಿಜೆಪಿ ಗಾಳ ಹಾಕಿದೆ. ಈ ವಿಷಯವನ್ನು ಸ್ವತಃ ಕಾಂಗ್ರೆಸ್ ಮುಖಂಡರೇ ಬಹಿರಂಗ ಮಾಡಿದ್ದಾರೆ. ಜಮಖಂಡಿಯಿಂದ ಬಂದ ಸುದ್ದಿ ಮತ್ತೆ ರಾಜ್ಯ ರಾಜಕಾರಣದ ಬುಡ ಅಲಗಾಡಿಸುವುದೆ?

Jamkhandi Legislative assembly bypoll update

ಬಾಗಲಕೋಟೆ[ಅ.13] ಜಮಖಂಡಿಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ವಂಚಿತ ಸುಶೀಲಕುಮಾರ ಬೆಳಗಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಗೆ ಬರುವಂತೆ ಅಹ್ವಾನ  ಬಂದಿದೆ ಎಂದು ಹೇಳಿದ್ದಾರೆ. ಟಿಕೆಟ್ ದೊರೆಯದ ಮೇಲೆ ಕರೆದಿದ್ದ ಬಂಡಾಯ ಸಭೆಯಲ್ಲಿಯೇ ಈ ವಿಚಾರ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ನಮಗೂ  ಬಿಜೆಪಿಗೂ ಹೊಂದಾಣಿಕೆಯಾಗುವುದಿಲ್ಲ. ಈಗ ನಾನು ಕಾಂಗ್ರೆಸ್ ನಲ್ಲಿದ್ದೇನೆ, ಬಿಟ್ಟು ಬರೋಕೆ ಆಗಲ್ಲ ಅಂತ ಹೇಳಿದ್ದೇನೆ ಎಂತಲೂ ವಿವರಣೆ ನೀಡಿದ್ದಾರೆ.

ಆದರೆ ಬಿಜೆಪಿ ರಾಜ್ಯ ನಾಯಕರು ನನ್ನನ್ನು ಬಿಟ್ಟಿಲ್ಲ. ಬಿಜೆಪಿಯವರಿಗೂ ನಾನು ಬಂದ್ರೆ ನಾಲ್ಕು ಓಟ್ ಬಂದಾವು ಅನ್ನೋ ಆಸೆಯಲ್ಲಿದ್ದಾರೆ. ಹೀಗಾಗಿ ನನಗೂ ಬಿಜೆಪಿಯವರು ಪಕ್ಷ ಸೇರುವಂತೆ ಬೆನ್ನು ಬಿದ್ದಿದ್ದಾರೆ ಎಂದು ಸಾವಳಗಿಯ ಸಭೆಯಲ್ಲಿ ಹೇಳಿದ್ದಾರೆ.  ಅಕ್ಟೋಬರ್ 15 ರವರೆಗೆ ಕಾಯ್ದು ನೋಡುವ ತಂತ್ರಕ್ಕೆ ಈ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios