Asianet Suvarna News Asianet Suvarna News

ರಾಯಚೂರು: ಹೀರಾ ಗ್ರಾಮದಲ್ಲಿ ಅದ್ದೂರಿ ಜಂಬೂಸವಾರಿ..!

ಜಂಬೂಸವಾರಿ ಮಾಡಬೇಕು ಎಂದು ಈ ಭಾಗದ ಭಕ್ತರ ಬಹುದಿನಗಳ ಬೇಡಿಕೆ ಆಗಿತ್ತು. ಮೈಸೂರಿನಂತೆ ಜಂಬೂಸವಾರಿ ಅದ್ದೂರಿಯಾಗಿ ಜರುಗಿದ್ದು, ಭಕ್ತರ ಭಕ್ತಿ ದೇವಿಯ ಶಕ್ತಿಯ ಎಂದ ಶ್ರೀ ಅಯ್ಯಪ್ಪ ತಾತಾ

Jamboo Savari Held at Hira Village During Dasara Festival in Raichur grg
Author
First Published Oct 26, 2023, 11:25 AM IST

ರಾಯಚೂರು(ಅ.26): ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೀರಾ ಗ್ರಾಮದಲ್ಲಿ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಯ್ತು. ದಸರಾ ಹಬ್ಬದ ಅಂಗವಾಗಿ ಹೀರಾ ಗ್ರಾಮದ ಸಿದ್ದರಾಮೇಶ್ವರ ಮಠದಲ್ಲಿ, ಸಾಮೂಹಿಕ ವಿವಾಹ, ಜಾತ್ರೆ, ಪುರಾಣ ಪ್ರವಚನ, ಕಾರ್ಯಕ್ರಮಗಳು ನಡೆದವು.

ಅದರಲ್ಲೂ ನವರಾತ್ರಿ ದೇವಿಯ ಪುರಾಣ ಪ್ರವಚನ ಮುಕ್ತಾಯ ಕಾರ್ಯಕ್ರಮದ ಶ್ರೀ ರಾಜರಾಜೇಶ್ವರಿಯ ಜಂಬೂಸವಾರಿ ಅದ್ದೂರಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿ ಮಾನ್ವಿ ಶಾಸಕ ಹಂಪಯ್ಯ ನಾಯಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ದೊಡ್ಡ ಕಾರ್ಯ, ಅಯ್ಯಪ್ಪ ತಾತಾ ರಥೋತ್ಸವ, ಜಾತ್ರೆಯ, ದಸರಾ ದೇವಸ್ಥಾನದ ತುಂಬಾ ಇತಿಹಾಸವಿದೆ. ಈ ಮಠದ ಅಭಿವೃದ್ಧಿಗೆ, ಸಚಿವರಾದ ಎನ್.ಎಸ್.ಭೋಸರಾಜು, ನಾನು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ, ಭಕ್ತರಿಗೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದರು.

ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಅಧಿಕೃತ ಚಾಲನೆ ಕೊಟ್ಟ ರಾಜವಂಶಸ್ಥ ಯದುವೀರ್‌: ಸಿಎಂ, ಡಿಸಿಎಂ ಪುಷ್ಪಾರ್ಚನೆ

ನಂತರ ಮಠದ ಅಧ್ಯಕ್ಷತೆ ವಹಿಸಿದ ಶ್ರೀ ಅಯ್ಯಪ್ಪ ತಾತಾ ಮಾತನಾಡಿ, ಜಂಬೂಸವಾರಿ ಮಾಡಬೇಕು ಎಂದು ಈ ಭಾಗದ ಭಕ್ತರ ಬಹುದಿನಗಳ ಬೇಡಿಕೆ ಆಗಿತ್ತು. ಮೈಸೂರಿನಂತೆ ಜಂಬೂಸವಾರಿ ಅದ್ದೂರಿಯಾಗಿ ಜರುಗಿದ್ದು, ಭಕ್ತರ ಭಕ್ತಿ ದೇವಿಯ ಶಕ್ತಿಯ ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ನಾಯಕ ಗುಡ್ಡದಿನ್ನಿ, ಬ್ರಿಜೇಶ್ ಪಾಟೀಲ್, ಶಿವಶರಣ ಸಾಹುಕಾರ್ ಅರಕೆರಿ, ಎಂ, ಶ್ರೀನಿವಾಸ, ಪ.ಪ.ಸದಸ್ಯ ಸೂರಿ ದುರುಗಣ್ಣ ನಾಯಕ, ಮಾಜಿ ಸದಸ್ಯ ನಾಗರಾಜ ಚಿನ್ನಾನ, ಹನುಮಂತ ರಾಯಗೌಡ ಪೂ.ಪಾ, ಅಯ್ಯಪ್ಪ ದೊರೆ, ಬಸವರಾಜ ನಾಯಕ ಜಾಲಪೂರು, ನರಸಣ್ಣ ದೊರೆ, ನರಸಣ್ಣ ತಾತ, ಸಂಗಯ್ಯಸ್ವಾಮಿ ಚಿಂಚರಕಿ, ವೀರಯ್ಯಸ್ವಾಮಿ ಗುಡದಿನ್ನಿ, ಶ್ರೀಧರಗೌಡ, ಶಿವಲಿಂಗಯ್ಯಸ್ವಾಮಿ ಹುಡಾ, ಕೆ.ಚನ್ನಪ್ಪ ಗ್ರಾಮದ ವಿವಿಧ ಗ್ರಾಮಗಳ  ಸಹಾಸ್ರಾರು ಭಕ್ತಾಧಿಗಳು ಭಾಗವಹಿಸಿದ್ದರು.

ಮೆರವಣಿಗೆ: 

ದಸರಾ ಹಬ್ಬದ ಜಂಬೂಸವಾರಿ ಮೆರವಣಿಗೆ ಡೊಳ್ಳು, ಬಾಜಿ, ಭಜನೆ, ಸಕಲ ವಾದ್ಯಗಳೂಂದಿಗೆ, 1008 ಮುತೈಯರಿಗೆ ಹುಡಿತುಂಬಿ, ಕಳಸದ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಅದ್ದೂರಿಯಾಗಿ ಜರುಗಿತು.

Follow Us:
Download App:
  • android
  • ios