ಜಲಜೀವನ್ ಮಿಷನ್ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಕರೆ
ಮನೆಮನೆ ಗಂಗೆ ಯೋಜನೆಯ ಸದುಪಯೋಗಪಡಿಸಿಕೊಂಡು ನೀರನ್ನು ಮಿತವಾಗಿ ಬಳಸುವುದರ ಮೂಲಕ ಜೀವ ಜಲ ಸಂರಕ್ಷಣೆ ಮಾಡುವ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಚಂಗಾವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೊಮ್ಮಕ್ಕ ಪೂಜಾರಪ್ಪ ಹೇಳಿದರು.
ಶಿರಾ : ಜೀವ ಜಲ ದಿನನಿತ್ಯ ಬಳಕೆಯ ಅಮೃತವಿದ್ದಂತೆ, ಗ್ರಾಮೀಣ ಪ್ರದೇಶದ ಪ್ರತಿ ಮನೆಮನೆಗೂ ನೀರು ತಲುಪಿಸಬೇಕು ಎಂಬ ಗುರಿಯೊಂದಿಗೆ ಜಲಜೀವನ್ ಅನುಷ್ಠಾನಗೊಳಿಸಲಾಗಿದೆ. ಮನೆಮನೆ ಗಂಗೆ ಯೋಜನೆಯ ಸದುಪಯೋಗಪಡಿಸಿಕೊಂಡು ನೀರನ್ನು ಮಿತವಾಗಿ ಬಳಸುವುದರ ಮೂಲಕ ಜೀವ ಜಲ ಸಂರಕ್ಷಣೆ ಮಾಡುವ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಚಂಗಾವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೊಮ್ಮಕ್ಕ ಪೂಜಾರಪ್ಪ ಹೇಳಿದರು.
ತಾಲೂಕಿನ ಚಂಗಾವರ ಗ್ರಾಪಂ ವ್ಯಾಪ್ತಿಯ ಬಡಮಂಗನಹಟ್ಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆ ಗಂಗೆ ಕಾಮಗಾರಿ ಭೂಮಿ ಪೂಜೆಯನ್ನು ಬುಧವಾರ ನೆರವೇರಿಸಿ ಮಾತನಾಡಿದರು. ನೀರಿನ ಸಂರಕ್ಷಣೆ ಗುರಿಯೊಂದಿಗೆ ನೂರಾರು ಚೆಕ್ ಡ್ಯಾಮ್‌ಗಳನ್ನು ಟಿ.ಬಿ. ಜಯಚಂದ್ರ ಅವರು ಸಚಿವರಾಗಿದ್ದಾಗ ನಿರ್ಮಾಣ ಮಾಡಿದ ಕಾರಣ ಶಿರಾ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳ ಕಂಡಿದೆ ಎಂದರು.
ಮಾಜಿ ಗ್ರಾಪಂ ಅಧ್ಯಕ್ಷೆ ನಾಗಮ್ಮ ಕಾರನಾಗಪ್ಪ, ಸದಸ್ಯ ಮೂಡಲಗಿರಿಯಪ್ಪ, ಮಾಜಿ ಸದಸ್ಯರಾದ ತಿಮ್ಮಣ್ಣ, ಮಂಜುನಾಥ್, ದೊಡ್ಡಣ್ಣ, ಶಿಕ್ಷಕಿ ಅನುಸೂಯ, ಮುಖಂಡರಾದ ಹರ್ಷವರ್ಧನ್ ಗೌಡ, ಶಿವಣ್ಣ, ಈರಣ್ಣ, ರವಿ, ಮಾರಣ್ಣ, ರಾಮಣ್ಣ , ಕೃಷ್ಣಪ್ಪ ಉಪಸ್ಥಿತರಿದ್ದರು.
ಜಲಜೀವನ್ ಮಿಷನ್ ಪರಿಣಾಮಕಾರಿ ಅನುಷ್ಠಾನ
ಧಾರವಾಡ (ಏ.11): ಧಾರವಾಡ (Dharwad ) ಜಲ ಜೀವನ ಮಿಷನ್ ಯೋಜನೆಯಡಿ (Jal Jeevan Mission Project) ಮನೆ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ಕಾರ್ಯ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯ 103 ಜನವಸತಿಗಳಲ್ಲಿ ಈಗಾಗಲೇ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮಹಾತ್ಮ ಗಾಂಧಿ ನರೇಗಾ ( Mahatma Gandhi NREGA) ಯೋಜನೆಯಡಿ ಜಿಲ್ಲೆಯ 177 ಶಾಲಾ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗುತ್ತಿದೆ. ಎಂದು ಜಿಲ್ಲಾ ಪಂಚಾಯತ್ ( Zilla Panchayath Dharwad) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
ರಾಯಾಪುರದ ಖಾಸಗಿ ಹೋಟೆಲವೊಂದರಲ್ಲಿ ಜಿಲ್ಲಾ ಪಂಚಾಯತ್ , ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನ ಕುರಿತು ತಾಂತ್ರಿಕ ಸಿಬ್ಬಂದಿಗೆ ಹಮ್ಮಿಕೊಳ್ಳಲಾದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು,
ಜಲ ಜೀವನ ಮಿಷನ್ ಯೋಜನೆಯ ಭೌತಿಕ ಅನುಷ್ಠಾನದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ನಿಖರ ಪರಿಹಾರ ಕಂಡುಕೊಳ್ಳಲು ತರಬೇತಿ ಕಾರ್ಯಾಗಾರ ಅಗತ್ಯವಾಗಿದೆ. ಗ್ರಾಮಗಳ ಪ್ರತಿ ಮನೆಗೂ ನಳದ ಸಂಪರ್ಕ ಕಲ್ಪಿಸುವ ಜೊತೆಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡುವುದು ಮುಖ್ಯವಾಗಿದೆ. ಜಲಮೂಲವನ್ನು ಸುಸ್ಥಿರವಾಗಿಟ್ಟು ,ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ತ್ಯಾಜ್ಯ ನೀರಿನ ನಿರ್ವಹಣೆ,ಮರುಬಳಕೆ, ನೀರು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ.ನೀರಿನ ಭದ್ರತೆ,ಶುದ್ಧ ಕುಡಿಯುವ ನೀರಿನ ಪೂರೈಕೆ ನಮ್ಮೆಲ್ಲರ ಹೊಣೆಯಾಗಿದೆ.ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯ ಧಾರವಾಡದಲ್ಲಿದೆ.
ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ CM Basavaraj Bommai
ಗ್ರಾಮೀಣ ನೀರು ನಿರ್ವಹಣಾ ಸಮಿತಿಗಳು ಪ್ರಯೋಗಾಲಯದ ಬಳಕೆ ಮಾಡಿಕೊಳ್ಳಲು ಉತ್ತೇಜಿಸಬೇಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರ ಸಿ.ಜಿ.ಹುಲಮನಿ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿ 2023 ರೊಳಗೆ ಎಲ್ಲಾ ಗ್ರಾಮೀಣ ಮನೆ ಮನೆಗೂ ನೀರು ತಲುಪಿಸುವ ಗುರಿ ಹೊಂದಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ. ಗ್ರಾಮೀಣ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ ಮಸಗುಪ್ಪಿ, ಹಾಗೂ ವೆಂಕಟೇಶ ಅವರು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ.ಮುನವಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.