ತುಮಕೂರು(ಆ.26): ಜಲಜೀವನ್‌ ಮಿಷನ್‌ ಯೋಜನೆಗೆ ತುಮಕೂರು ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ. ಸಂಸದ ಜಿ.ಎಸ್‌.ಬಸವರಾಜ್‌ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್‌ ಅವರಿಗೆ ಆದೇಶ ನೀಡಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಅವರ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅತೀಕ್‌ ಅವರೊಂದಿಗೆ ಜಿ.ಎಸ್‌.ಬಸವರಾಜ್‌ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಇದ್ದರು. ಈ ಯೋಜನೆಗೆ ಪೂರಕವಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ಯೋಜನೆಯಿಂದ ಕುಡಿಯುವ ನೀರಿಗೆ 6.237 ಟಿಎಂಸಿ ನೀರು, ಭದ್ರಾ ಮೇಲ್ದಂಡೆಯಿಂದ ಕೆರೆಗಳಿಗೆ/ಕುಡಿಯುವ ನೀರಿಗೆ 3.025 ಟಿಎಂಸಿ ನೀರು, ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿಗೆ 2.43 ಟಿಎಂಸಿ ನೀರು, ಕೆರೆಗಳಿಗೆ 2.16 ಟಿಎಂಸಿ ನೀರು, ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 0.745 ಎಂಸಿಎಫ್‌ಟಿ (0.75 ಟಿಎಂಸಿ) ಒಟ್ಟು ಕುಡಿಯುವ ನೀರಿಗಾಗಿಯೇ 14.602 ಟಿಎಂಸಿ ನೀರು ನಿಗದಿ ಮಾಡಲಾಗಿದೆ.

'ರೈತ ಯುವಕನ ವರಿಸಿದ ಹುಡುಗಿಗೆ ನೆರವು ' ...

ಇಷ್ಟುನೀರು ಕುಡಿಯುವ ನೀರಿಗಾಗಿಯೇ ಅಲೋಕೇಷನ್‌ ಇದ್ದರೂ, ತುಮಕೂರು ಜಿಲ್ಲೆಗೆ ನದಿ ನೀರು ಅಲೋಕೇಷನ್‌ ಇಲ್ಲ ಎಂದು ಯೋಜನೆಯ ವ್ಯಾಪ್ತಿಯಿಂದ ಕೈಬಿಟ್ಟಿರುವ ಕಾರಣಗಳ ಬಗ್ಗೆ ಚರ್ಚಿಸಿದರು. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಬೇಕಾಗಿರುವ ನೀರು ಕೇವಲ 2.85 ಟಿಂಎಂಸಿ ಎಂದು ಅಂದಾಜಿಸಿದ್ದಾರೆ. ಆದ್ದರಿಂದ, ಜಲಜೀವನ್‌ ಮಿಷನ್‌ ಯೋಜನೆಗೆ ತುಮಕೂರು ಜಿಲ್ಲೆಯನ್ನು ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅತೀಕ್‌ ಹೇಳಿದರು.

ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ದ ಮುನಿದ್ರಾ ಬಿಜೆಪಿ ಶಾಸಕ?...

ಈ ವರ್ಷವೇ ಸಂಸದರ ಆದರ್ಶ ಗ್ರಾಮಗಳು ಸೇರಿದಂತೆ ಹೇಮಾವತಿ ನೀರು ತುಂಬುವ ಕೆರೆಗಳ ಸುತ್ತಮತ್ತಲ ಗ್ರಾಮ ಪಂಚಾಯಿತಿಗಳಿಗೆ ಯೋಜನೆ ಜಾರಿ ಮಾಡುವುದಾಗಿ ಹೇಳಿದರು. ಇದೂವರೆಗೂ ಜಿಲ್ಲೆಯಲ್ಲಿ ಅನುಷ್ಠಾನ ಮಾಡಿರುವ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಫಲವಾಗದೇ ಇರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2023ರೊಳಗೆ ದೇಶದ ಎಲ್ಲಾ ಮನೆಗೂ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ವಿಧಾನಸಭಾ ಕ್ಷೇತ್ರಗಳ ಶಾಸಕರು ವಿಶೇಷ ಗಮನಹರಿಸುವುದು ಅಗತ್ಯವಾಗಿದೆ.

ರಾಮದುರ್ಗಕ್ಕೆ ಭೇಟಿ ನೀಡದ ಸಿಎಂ: ನೆರೆ ಸಂತ್ರಸ್ತರಿಂದ ಪ್ರತಿಭಟನೆ

"