ಮಂಗಳೂರು(ಜ.29): ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿ ನಡೆಸಿದ ಪೌರತ್ವ ಜಾಗೃತಿ ಸಮಾವೇಶದಂದು ಶಾಲೆಗೆ ರಜೆ ನೀಡಲಾಗಿತ್ತು. ಯಾವ ಆಧಾರದ ಮೇಲೆ ಶಾಲೆಗಳಿಗೆ ರಜೆ ನೀಡಿದ್ದು? ಯಾವ ಉದ್ದೇಶಕ್ಕೆ? ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ಪರವಾಗಿ ನಡೆದ ಸಮಾವೇಶದ ಸಂದರ್ಭ ಶಾಲೆಗಳಿಗೆ ಮಧ್ಯಾಹ್ನದ ಬಳಿಕ ಅನಧಿಕೃತವಾಗಿ ರಜೆ ನೀಡಲಾಗಿತ್ತು. ಈ ಕುರಿತು ಶಿಕ್ಷಣ ಇಲಾಖೆ ಉತ್ತರ ನೀಡಬೇಕು ಎಂದು ವಿಧಾನ ಪರಿಷತ್‌ ಶಾಸಕ ಆಗ್ರಹಿಸಿದ್ದಾರೆ.

ಲಕ್ಷಕ್ಕೂ ಹೆಚ್ಚು ಜನ ಸೇರಿದ BJP ಜನಜಾಗೃತಿ ಸಮಾವೇಶ ಹೀಗಿತ್ತು..!

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಮಾವೇಶದ ಸಂದರ್ಭ ಯಾವ ಆಧಾರದ ಮೇಲೆ ಶಾಲೆಗಳಿಗೆ ರಜೆ ನೀಡಿದ್ದು? ಯಾವ ಉದ್ದೇಶಕ್ಕೆ? ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ರಜೆ ನೀಡುವಂತೆ ಯಾರು ಹೇಳಿದ್ದು ಎನ್ನುವುದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.