ಜೀವನ ನಡೆಸಲು ಪರದಾಟ: ವೇತನಕ್ಕಾಗಿ ಐಟಿಐ ಅತಿಥಿ ಬೋಧಕರಿಂದ ಆನ್‌ಲೈನ್‌ ಪ್ರತಿಭಟನೆ

* ಅತಿಥಿ ಬೋಧಕರ ಜೀವನ ಶೋಚನೀಯ
* ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುವ ಅತಿಥಿ ಬೋಧಕರ ಸಮಸ್ಯೆ ಪರಿಹರಿಸಲು ಒತ್ತಾಯ
* ಕಳೆದ ಮೂರು ತಿಂಗಳ ವೇತನವಿಲ್ಲದ ಸಂಸಾರ ನಡೆಸುವುದು ಕಷ್ಟ

ITI Guest Lectures Held Online Protest for Salary in Dharwad grg

ಧಾರವಾಡ(ಜೂ.12): ಲಾಕ್‌ಡೌನ್‌ ಅವಧಿಯ ವೇತನ ಬಿಡುಗಡೆ ಮಾಡುವುದು ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಐಟಿಐ ಅತಿಥಿ ಬೋಧಕರ ಹೋರಾಟ ಸಮಿತಿಯಿಂದ ರಾಜ್ಯವ್ಯಾಪಿ ಆನ್‌ಲೈನ್‌ ಪ್ರತಿಭಟನೆ ಮಾಡಲಾಯಿತು.

ಜಿಲ್ಲೆಯ ವಿವಿಧ ಸರ್ಕಾರಿ ಐಟಿಐಗಳ ಅತಿಥಿ ಬೋಧಕರು ಆನ್‌ಲೈನ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಜ್ಯಾದ್ಯಂತ ಐಟಿಐಗಳಲ್ಲಿ 900ಕ್ಕೂ ಹೆಚ್ಚು ಅತಿಥಿ ಬೋಧಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಬಂದ ಕೊರೋನಾದಿಂದ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು, ಇದೀಗ ಎರಡನೇ ಅಲೆಯಿಂದಾಗಿ ಜೀವನ ನಡೆಸಲು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ವೇತನವಿಲ್ಲದ ಸಂಸಾರಗಳನ್ನು ನಡೆಸುವುದು ಕಷ್ಟವಾಗಿದೆ. 10- 15 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದವರ ಎಷ್ಟೋ ಜನರ ಸೇವೆ ಕಡಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿದರು.

ಪ್ರವೇಶ ಶುಲ್ಕಕ್ಕಾಗಿ ಮತ್ತೆ ಖಾಸಗಿ ಶಾಲೆಗಳ ಒತ್ತಡ

ಒಟ್ಟಾರೆ ಅತಿಥಿ ಬೋಧಕರ ಜೀವನ ಶೋಚನೀಯವಾಗಿದೆ. ಹೀಗಾಗಿ ಕೂಡಲೇ ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುವ ಅತಿಥಿ ಬೋಧಕರ ಸಮಸ್ಯೆಯನ್ನು ಪರಿಹರಿಸಬೇಕೆಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಕಳುಹಿಸಲಾಯಿತು. ಆನ್‌ಲೈನ್‌ ಪ್ರತಿಭಟನೆಯಲ್ಲಿ ಯಲಬುರ್ಗಿ ಸಿ.ಎಚ್‌., ಮಂಜುನಾಥ್‌ ಸಿ. ಪಾಟೀಲ್‌ ಇದ್ದರು.
 

Latest Videos
Follow Us:
Download App:
  • android
  • ios