ಹುಬ್ಬಳ್ಳಿ, [ಫೆ.26]: ಮಂಗಳೂರಿನಲ್ಲಿ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಶಾಮಿಯಾನ ಸಪ್ಲಾಯರ್ಸ್ ಮೇಲೆ ಐಟಿ ದಾಳಿ ನಡೆದಿದೆ.

ಇಂದು [ಬುಧವಾರ] ಹುಬ್ಬಳ್ಳಿಯ ಮಥುರಾ ಕಾಲೋನಿಯಯಲ್ಲಿರುವ ಪೂರ್ಣಚಂದ್ರ ಮತ್ತು ಶ್ರೀನಿವಾಸ ಘಂಟಸಾಲ್‌ ಸಹೋದರರಿಗೆ ಸೇರಿದ ಮನೆ ಮತ್ತು ಕುಸುಗಲ್ ರಸ್ತೆಯ ಅಂಗಡಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚರಿತ್ರೆ ಸೃಷ್ಟಿಸೋ ಹರಿಪ್ರಿಯಾ ಅವತಾರ, ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಖಾರ; ಫೆ.26ರ ಟಾಪ್ 10 ಸುದ್ದಿ!

ತೆರಿಗೆ ವಚನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟಿನ ಕುರಿತಾದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದೇನಪ್ಪಾ ಇದು ಒಂದು ಶಾಮಿಯಾನ ಸಪ್ಲಾಯರ್ಸ್ಅಂಗಡಿ ಮೇಲೆ ಐಟಿ ದಾಳಿಯಾಗುತ್ತೆ ಅಂದ್ರೆ ಅಚ್ಚರಿಯಾಗುತ್ತೆ. ಆದರೂ ಇದು ಸತ್ಯ ಏಕೆಂದ್ರೆ, ಪೂರ್ಣಚಂದ್ರ ಮತ್ತು ಶ್ರೀನಿವಾಸ ಘಂಟಸಾಲ್‌ ಸಹೋದರರು, ರಾಜ್ಯದ ವಿವಿದೆಡೆ ನಡೆಯುವ ಬೃಹತ್ ಸಭೆ, ಸಮಾರಂಭಗಳಿಗೆ ಶಾಮಿಯಾನಾ ಪೂರೈಸುತ್ತಾರೆ. 

ಇನ್ನು ಬುಧವಾರ ಬೆಳಗ್ಗೆ ಮಂಗಳೂರಿನಲ್ಲಿ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.