Breaking: ಧಾರವಾಡದ ಬಸವರಾಜ್ ದತ್ತುನವರ ಮನೆ ಮೇಲೆ ಐಟಿ ರೇಡ್; 18 ಕೋಟಿ ರೂ. ನಗದು ಜಪ್ತಿ
ಧಾರವಾಡ ನಗರದಲ್ಲಿ ಬಸವರಾಜ ದತ್ತುನವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ಮಾಡಿ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಧಾರವಾಡ (ಏ.16): ಧಾರವಾಡ ನಗರದಲ್ಲಿ ಬಸವರಾಜ ದತ್ತುನವರ ಮನೆಯ ಮೇಲೆ ಸಂಜೆ ವೇಳೆ ಸುಮಾರು 10 ಕಾರುಗಳಲ್ಲಿ ಬಂದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ವೇಳೆ ಬಸವರಾಜು ದತ್ತುನವರ ಒಂದು ಫ್ಲ್ಯಾಟ್‌ನಲ್ಲಿ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ಣ ರೇಸಿಡೆನ್ಸಿಯ ಬದವರಾಜ ದತ್ತುನವರ ಮನೆಯ ಮೇಲೆ ಸಂಜೆ 6 ಗಂಟೆ ವೇಳೆಗೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಸವರಾಜ ದತ್ತುನವರ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಹಣವನ್ನು ಯಾವ ಉದ್ದೇಶಕ್ಕೆ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಜೊತೆಗೆ, ಯಾವ ಮೂಲದಿಂದ ಹಣ ಬಂದಿದೆ, ಯಾವ ಉದ್ದೇಶಕ್ಕೆ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿಯನ್ನು ಐಟಿ ಇಲಾಖೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಇನ್ನು ಯಾವ ಪಕ್ಷಕ್ಕೆ ಸೇರಿದವರು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಡಿಕೆ ಬ್ರದರ್ಸ್ ಆಪ್ತ ಕನಕಪುರ ಕೆಂಪರಾಜು ಬೆಂಗಳೂರು ಮನೆ ಮೇಲೆ ಐಟಿ ದಾಳಿ
ಇನ್ನು ಲೋಕಸಭಾ ಚುನಾವಣೆಯ ಅವಧಿಯಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾಕೆ ಸಂಗ್ರಹ ಮಾಡಿದ್ದಾರೆ. ಚುನಾವಣೆ ವೇಳೆ ಜನರಿಗೆ ಹಂಚಲು ಕಪ್ಪು ಹಣವನ್ನು ಸಂಗ್ರಹ ಮಾಡಲಾಗಿತ್ತೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ. ಇನ್ನು ಕಪ್ಪು ಹಣ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದು, 2 ಗಂಟೆಗಳಿಂದ 20 ಜನ ಅಧಿಕಾರಿಗಳು ಫ್ಲ್ಯಾಟ್‌ನಲ್ಲಿ ಹಣ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈಗ ಒಂದೇ ಒಂದು ಫ್ಲ್ಯಾಟ್‌ನಲ್ಲಿಯೇ 18 ಕೋಟಿ ರೂ. ಹಣ ಲಭ್ಯವಾಗಿದ್ದು, ಇಡೀ ಅಪಾರ್ಟ್‌ಮೆಂಟ್ ಹಾಗೂ ಇತರೆಡೆ ದಾಳಿ ಮಾಡಿ ಶೋಧನೆ ಮಾಡುವ ಸಾಧ್ಯತೆಯಿದೆ.