* ಮಂಡ್ಯದಲ್ಲಿ ಬೆಳ್ಳಂ ಬೆಳ್ಳಿಗ್ಗೆ ಐಟಿ ಶಾಕ್.* ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆ ಮೇಲೆ ಅಧಿಕಾರಿಗಳ ದಾಳಿ.* ಉದ್ಯಮಿ ಸಹೋದರರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ.* ಉದ್ಯಮಿ ಅಮಿರುಲ್ ಮುರ್ತುಜಾ ಸೇರಿ ಸಹೋದರ ಮನೆ ಮೇಲೆ ದಾಳಿ.
ಮಂಡ್ಯ(ಫೆ.23):
ಮಂಡ್ಯದಲ್ಲಿ ಬೆಳ್ಳಂ ಬೆಳ್ಳಿಗ್ಗೆ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಟಾರ್ ಗ್ರೂಪ್ಸ್ ಮಾಲೀಕ ಉದ್ಯಮಿ ಅಮಿರುಲ್ ಮುರ್ತುಜಾ ಸೇರಿ ಸಹೋದರ ಮನೆ ಮೇಲೆ ದಾಳಿ ನಡೆದಿದೆ. ಸದ್ಯ ಅಮಿರುಲ್, ಅಮ್ಜಾ, ಶಹಬಾಜ್, ಶಿರೋಜ್ ನಿವಾಸಗಳಲ್ಲಿ ಹುಡುಕಾಟ ಮುಂದುವರೆದಿದೆ.
ಅಮಿರುಲ್ ಮುರ್ತುಜಾ ಸಹೋದರರು ನಾಗಮಂಗಲದ ಪ್ರಖ್ಯಾತ ಉದ್ಯಮಿಗಳಾಗಿದ್ದು, ಸ್ಟಾರ್ ಗ್ರೂಪ್ಸ್ ಹೆಸರಿನಲ್ಲಿ ಹಲವು ಉದ್ಯಮ ನಡೆಸುತ್ತಿದ್ದಾರೆ. ಸಹೋದರರು ಪೌಲ್ಟ್ರಿ ಫಾರಂ, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಆಸ್ತಿ ಹೊಂದಿದ್ದಾರೆ. ನಾಗಮಂಗಲ, ಮೈಸೂರು, ಮಂಡ್ಯ, ಬೆಂಗಳೂರಿನ ಹಲವೆಡೆ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಆಸ್ತಿ ವಿವರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಬೆಳಿಗಿನ ಜಾವ 4 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆದಿದ್ದು, 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳಿಂದ ರೇಡ್ ನಡೆದಿದೆ. 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಆಸ್ತಿ-ಪಾಸ್ತಿ, ಕಡತ, ಹಣ, ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದೆ.

3 ರಿಯಲ್ ಎಸ್ಟೇಟ್ ಕಂಪನಿಗಳಿಗೆ ಐಟಿ ಬಿಸಿ
ಕರ್ನಾಟಕದ ಬಳ್ಳಾರಿ ಸೇರಿದಂತೆ ಕರ್ನೂಲು, ಕಡಪ, ಅನಂತಪುರ, ನಂದ್ಯಾಲ್‌ಗಳಲ್ಲಿ ಭೂ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡ 3 ರಿಯಲ್ ಎಸ್ಟೇಟ್ ಗುಂಪುಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯಲ್ಲಿ ಅಘೋಷಿತ 800 ಕೋಟಿ ರು. ಮೊತ್ತದ ಹಣಕಾಸು ವ್ಯವಹಾರ ನಡೆದಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ಜ.5ರಂದುಈ ಸಂಸ್ಥೆಗಳಿಗೆ ಸೇರಿದ 20ಕ್ಕೂ ಹೆಚ್ಚು ಕಚೇರಿಗಳಮೇಲೆ ದಾಳಿ ನಡೆಸಿದ ವೇಳೆ, ದಾಳಿ ನಡೆದ ಸ್ಥಳದಿಂದ ಕೈಬರಹದಿಂದ ಕೂಡಿರುವ ದಾಖಲೆಗಳು, ಖರಾರುಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. \
ಇವರಲ್ಲಿ ಒಂದು ಗುಂಪು ಅಕ್ರಮ ಹಣ ವರ್ಗಾವಣೆ ಮಾಡಲು ವಿಶೇಷವಾಗಿ ಮಾರ್ಪಡಿಸಿದ ಸಾಫ್ಟ್‌ವೇರ್ ಅನ್ನು ಬಳಸುತ್ತಿತ್ತು. ಮೂರೂ ಸಂಸ್ಥೆಗಳು ಆಸ್ತಿಯ ನೊಂದಾಯಿತ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುತ್ತಿತ್ತು, ಮತ್ತು ಹೀಗೆ ಪಡೆದ ಹಣವನ್ನು ಭೂಮಿ ಖರೀದಿ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಬಳಸುತ್ತಿತ್ತು. ಇಲ್ಲಿಯವರೆಗೂ ಮೂರು ಸಂಸ್ಥೆಗಳಿಂದ 1.64 ಕೋಟಿ ಅಕ್ರಮ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.