Chikkamagaluru: ಎರಡನೇ ದಿನವೂ ಗಾಯತ್ರಿ ಶಾಂತೇಗೌಡ ನಿವಾಸದಲ್ಲಿ ಮುಂದುವರಿದ ಐಟಿ ದಾಳಿ
ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ನಿವಾಸದಲ್ಲಿ ಮುಂದುವರಿದ ಐಟಿ ಅಧಿಕಾರಿಗಳ ಶೋಧ. ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ಪಕ್ಕದಲ್ಲಿರುವ ಮನೆ. ಇನ್ನೂ ಕೂಡ ಮನೆಗೆ ಬಾರದ ಗಾಯತ್ರಿ ಶಾಂತೇಗೌಡ. ಸದ್ಯ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ. ಮುಂಜಾಗ್ರತೆ ಕ್ರಮವಾಗಿ ರಸ್ತೆ ಬಂದ್ ಮಾಡಿಸಿರುವ ಪೊಲೀಸರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.18): ಮಾಜಿ ಎಂ.ಎಲ್.ಸಿ. ಚಿಕ್ಕಮಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡೆ ಗಾಯತ್ರಿ ಶಾಂತೇಗೌಡ ಮತ್ತು ಅವರ ಅಳಿಯನ ಮನೆ ಮೇಲಿನ ಐಟಿ ದಾಳಿ ಇಂದೂ ಕೂಡ ಮುಂದುವರೆದಿದೆ. ಸತತ ಎರಡನೇ ದಿನವೂ ಐಟಿ ಅಧಿಕಾರಿಗಳ ಶೋಧ ಮುಂದುವರೆದಿದೆ. ನಿನ್ನೆಯಿಂದ ದಾಳಿ ನಡೆಯುತ್ತಿದ್ದರು ಕೂಡ ಗಾಯತ್ರಿ ಶಾಂತೇಗೌಡ ಬೆಂಗಳೂರಿನಲ್ಲಿ ಇದ್ದು, ಈವರೆಗೂ ಮನೆಗೆ ಬಂದಿಲ್ಲ. ನಿನ್ನೆ ಗಾಯತ್ರಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಗಾಯತ್ರಿ ನಿವಾಸದ ಮುಂದಿನ ರಸ್ತೆಯನ್ನ ಪೊಲೀಸರು ಕಂಪ್ಲೀಟ್ ಕ್ಲೋಸ್ ಮಾಡಿದ್ದಾರೆ. ಸಾರ್ವಜನಿಕರು ಓಡಾಡದಂತೆ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಐ ಟಿ ದಾಳಿಯನ್ನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಐ.ಟಿ. ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ ಕಡೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ 10ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ಪೊಲೀಸ್ ಹಾಗೂ ಅಧಿಕಾರಿಗಳನ್ನು ಕೈ ಗೊಂಬೆಗಳಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ನಾಗರಬಾವಿ, ಚಿಕ್ಕಮಗಳೂರಿನಲ್ಲಿರುವ ಮನೆ ಹಾಗೂ ಕಚೇರಿ, ಮರ್ಲೆಯ ಜಲ್ಲಿ ಕ್ರಷರ್, ಬಾಳೆಹೊನ್ನೂರಿನಲ್ಲಿರುವ ತೋಟದ ಮನೆ, ಗಾಯತ್ರಿ ಶಾಂತೇಗೌಡರ ಅಳಿಯ ಸಂತೋಷ್ ವಾಸವಾಗಿರುವ ಬೇಲೂರು ಪಟ್ಟಣದ ಚನ್ನಕೇಶವೇಗೌಡ್ರು ಬೀದಿಯಲ್ಲಿರುವ ಮನೆ, ಶಾಂತೇಗೌಡ ಅವರ ಅಣ್ಣನ ಮಗ ಪರಮೇಶ್ ಹಾಗೂ ಗಾಯತ್ರಿ ಶಾಂತೇಗೌಡರ ಮನೆಯಲ್ಲಿ ಕೆಲಸ ಮಾಡುವವರ ಮನೆ ಸೇರಿ ಒಟ್ಟು 13 ಕಡೆಗಳಲ್ಲಿ ದಾಳಿ ನಡೆದಿದೆ.
100ಕ್ಕೂ ಹೆಚ್ಚು ಅಧಿಕಾರಿಗಳು ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ವಿವಿಧ ಟ್ರಾವೆಲ್ಸ್ ಏಜೆನ್ಸಿಗಳಲ್ಲಿ ಸುಮಾರು 50 ಕಾರುಗಳನ್ನು ಬಾಡಿಗೆ ಪಡೆದಿದ್ದರು. ಕಾರುಗಳ ಮೇಲೆ ಅಭಿನವ್ ವೆಡ್‌್ಸ ದೀಪಿಕಾ ಮದುವೆಯ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು. ಗಾಯತ್ರಿ ಹಾಗೂ ಅವರ ಪತಿ ಶಾಂತೇಗೌಡ ಕಳೆದ ಮೂರು ದಿನಗಳ ಹಿಂದೆ ತಿರುಪತಿಗೆ ಹೋಗಿದ್ದರು. ಬುಧವಾರ ರಾತ್ರಿಯಷ್ಟೇ ವಾಪಸ್ ಆಗಿದ್ದು, ನಾಗರಬಾವಿಯಲ್ಲಿರುವ ತಮ್ಮ ಮನೆಯಲ್ಲಿದ್ದರು. ಸಂಜೆಯ ನಂತರವೂ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು.
Chikkamagaluru: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ
ಪ್ರಕರಣ ಹಿಂಪಡೆಯುವಂತೆ ಒತ್ತಾಯ
ಭ್ರಷ್ಠಾಚಾರ ವಿರೋಧಿಸಿ ಸಂವಿಧಾನಾತ್ಮಕವಾಗಿ ಕಡೂರು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಒತ್ತಾಯಿಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಹಣ ಕೊಡದೆ ಜನ ಸಾಮಾನ್ಯರ ಯಾವುದೇ ಕಾರ್ಯಗಳು ನಡೆಯದಂತ ಸ್ಥಿತಿ ನಿರ್ಮಾಣಗೊಂಡಿದೆ. ಅದಕ್ಕೆ ಉದಾಹರಣೆ, ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿ ದಯಾಮರಣಕ್ಕೆ ಅನುಮತಿ ಕೊಡುವಂತೆ ಗುತ್ತಿಗೆದಾರ ಬಸವರಾಜ್ ಅಮರಗೋಳ ಅವರ ಪ್ರಕರಣ ನಿದರ್ಶನವಾಗಿದೆ ಎಂದು ಹೇಳಿದರು.