Asianet Suvarna News Asianet Suvarna News

.ಜೆಡಿಎಸ್‌ ಗೆಲುವು ತಡೆಯುವುದು ಅಸಾಧ್ಯ : ಹೆಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಪಕ್ಷದ ಮಹತ್ವಪೂರ್ಣ ಯೋಜನೆಗಳಾದ 5 ಪಂಚರತ್ನ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತಂದು ರಾಜ್ಯದ ಪ್ರತಿ ಕುಟುಂಬಗಳನ್ನು ನೆಮ್ಮದಿಯಾಗಿರುವಂತೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

It is impossible to prevent the victory of JDS: HD Kumaraswamy snr
Author
First Published May 5, 2023, 5:57 AM IST | Last Updated May 5, 2023, 5:56 AM IST

  ಶಿರಾ :  ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಪಕ್ಷದ ಮಹತ್ವಪೂರ್ಣ ಯೋಜನೆಗಳಾದ 5 ಪಂಚರತ್ನ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತಂದು ರಾಜ್ಯದ ಪ್ರತಿ ಕುಟುಂಬಗಳನ್ನು ನೆಮ್ಮದಿಯಾಗಿರುವಂತೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಆವರಣದಲ್ಲಿ ನಡೆದ ಜೆಡಿಎಸ್‌ ಪಕ್ಷದ ಬೃಹತ್‌ ಸಮಾವೇಶದಲ್ಲಿ ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಪರ ಮತಯಾಚನೆ ಮಾಡಿ ಮಾತನಾಡಿದರು. ಮತದಾರರು ಜೆಡಿಎಸ್‌ ಪಕ್ಷಕ್ಕೆ ಹೆಚ್ಚಿನ ಮತ ನೀಡುವ ಮೂಲಕ ಬಹುಮತ ಸರ್ಕಾರ ತರಲು ಅವಕಾಶ ನೀಡಿ ರೈತರು, ದಲಿತರು, ಹಿಂದುಳಿದ ಸಮುದಾಯದ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಉತ್ತಮವಾದ ಶಿಕ್ಷಣ ನೀಡಲು ಯಾವುದೇ ರೀತಿಯ ಸಾಲ ಮಾಡದೆ ಉತ್ತಮ ಶಿಕ್ಷಣ ಒದಗಿಸಲು ಹೈಟೆಕ್‌ ಶಾಲೆಗಳನ್ನು ನಿರ್ಮಿಸಲಾಗುವುದು. ಆರೊಗ್ಯದ ಕಾರಣಕ್ಕಾಗಿ 50 ಲಕ್ಷ ರೂ. ವೆಚ್ಚವಾದರೆ ಅದನ್ನು ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸುವ ಯೋಜನೆ ತರುತ್ತೇನೆ. ಅಭ್ಯರ್ಥಿ ಉಗ್ರೇಶ್‌ರನ್ನು ಗೆಲ್ಲಿಸಿ ಎಂದರು.

ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಹಾಗೂ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿದರು. ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಸತ್ಯಪ್ರಕಾಶ್‌, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಮಾಜಿ ಸದಸ್ಯ ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹೇಗೌಡ, ಮುಖಂಡರಾದ ಕಲ್ಕೆರೆ ರವಿಕುಮಾರ್‌, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ರೆಹಮತ್‌ ಉಲ್ಲಾ ಖಾನ್‌, ಲಿಂಗದಹಳ್ಳಿ ಚೇತನ್‌ಕುಮಾರ್‌, ನಿಸರ್ಗ ಸುರೇಶ್‌, ಎಸ್‌.ಎಸ್‌.ನಾಗಭೂಷಣ್‌, ಬ್ಯಾಡಗೆರೆ ಕೊಲ್ಲಾರಪ್ಪ, ಅಂಬಿಕಾ.ಟಿ.ಎಂ. ಸೇರಿದಂತೆ ಹಲವರು ಹಾಜರಿದ್ದರು.

 ಪಾವಗಡ :  ಪ್ರತಿ ಬಾರಿ ತಾಲೂಕಿಗೆ ಭೇಟಿ ಕೊಟ್ಟವೇಳೆ ನಿಮ್ಮ ಮನೆ ಮಗನಂತೆ ಕಂಡಿದ್ದು,ನಾನು ಮಣ್ಣಿಗೆ ಹೋಗುವವರೆವಿಗೂ ನಿಮ್ಮ ಪ್ರೀತಿ ಅಭಿಮಾನ ಮರೆಯಲಾರೆ. ತಾಲೂಕಿನ ಸರ್ವತ್ತೊಭಿವೃದ್ಧಿಗೆ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪರನ್ನ ಹೆಚ್ಚಿನ ಮತಗಳಿಂದ ಗೆಲ್ಲಿಸಿ ನನ್ನ ಕೈಬಲಪಡಿಸಿರಿ. ತಿಮ್ಮರಾಯಪ್ಪರನ್ನು ಸರ್ಕಾರದಲ್ಲಿ ಸಚಿವರನ್ನಾಗಿ ಮಾಡುವೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ಗುರುವಾರ ಪಟ್ಟಣದ ಗುರುಭವನ ಸಮೀಪ ಸರ್ಕಾರಿ ಪ್ರಾಥಮಿಕ ಪಾಠಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಬೃಹತ್‌ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ನಾನು ಪಾವಗಡಕ್ಕೆ ಆಗಮಿಸುವ ನಿರೀಕ್ಷೆ ಹಿನ್ನಲೆಯಲ್ಲಿ ತಾಲೂಕಿನದ್ಯಂತ ಸುನಾಮಿಯಂತೆ ಜನ ಸಾಗರ ಹರಿದು ಬಂದಿದ್ದು, ನಿಮ್ಮ ಪ್ರೀತಿ ಅಭಿಮಾನಕ್ಕೆ ಋುಣಿಯಾಗಿದ್ದೇನೆ. ಪ್ರಣಾಳಿಕೆಯ ಕಾರ್ಯಕ್ರಮ ಅನುಷ್ಟಾನದ ಮೇರೆಗೆ,ರಾಜ್ಯದಲ್ಲಿ ಸ್ಪಷ್ಟಬಹುಮತದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಜನಪರ ನಾಯಕ ಹಾಗೂ ಉತಮ ವ್ಯಕ್ತಿತ್ವದ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪರನ್ನ ಹೆಚ್ಚಿನ ಮತಗಳಿಂದ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿ ಕೊಡಿ. ತಾಲೂಕಿನ ಜ್ವಲಂತ ಸಮಸ್ಯೆ ನಿವಾರಣೆ ಹಿನ್ನಲೆಯಲ್ಲಿ ಅವರನ್ನ ಸರ್ಕಾರದಲ್ಲಿ ಸಚಿವರನ್ನಾಗಿ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದರು.

ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಅಂಜಿನಪ್ಪ, ಜೆಡಿಎಸ್‌ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ, ತಾ,ಜೆಡಿಎಸ್‌ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ ಮಾತನಾಡಿದರು. ಕಾಂಗ್ರೆಸ್‌ ಬಿಜೆಪಿ ತೊರೆದು ಆನೇಕ ಮಂದಿ ಜೆಡಿಎಸ್‌ ಸೇರ್ಪಡೆಯಾಗಿದ್ದು, ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು,ಗೌರವಾಧ್ಯಕ್ಷ ರಾಜಶೇಖರಪ್ಪ,ವಕ್ತಾರ ಅಕ್ಕಲಪ್ಪನಾಯ್ಡ… ಸ್ಥಳೀಯ ಮುಖಂಡರಾದ ಶಿವಪ್ಪನಾಯಕ,ಎನ್‌.ಕೆ.ರಾಮಕೃಷ್ಣರೆಡ್ಡಿ,ಲಿಂಗದಹಳ್ಳಿ ಸಣ್ಣಾರೆಡ್ಡಿ, ವಕೀಲ ಗುಜ್ಜನಡು ಹನುಮಂತರಾಯಪ್ಪ, ಮಾಜಿ ಜಿಪಂ ಅಧ್ಯಕ್ಷ ನರಸಿಂಹಪ್ಪ, ಎಂ.ಕೆ.ನಾರಾಯಣಪ್ಪ, ಶಿವಪ್ಪ, ಅಂಜನ್‌ಕುಮಾರ್‌, ನಂಜುಂಡಸ್ವಾಮಿ, ಮಾಜಿ ಪುರಸಭೆ ಸದಸ್ಯ ಮನುಮಹೇಶ್‌, ಜಿ.ಎ.ವೆಂಕಟೇಶ್‌, ಬನಶಂಕರಿಯ ಲಕ್ಷ್ಮೀನರಸಪ್ಪ, ವೈ.ಆರ್‌.ಚೌದರಿ, ಸೊಸೈಟಿ ನಾರಾಯಣಮೂರ್ತಿ, ವಸಂತ್‌ಕುಮಾರ್‌, ಗೋಪಾಲ್‌, ನಾಗರತ್ನಮ್ಮ ತಿಮ್ಮರಾಯಪ್ಪ, ಮಹಿಳಾ ಘಟಕಾ ಅಂಬಿಕಾರಮೇಶ್‌, ಶಂಕುತಲಬಾಯಿ, ರಂಗಮ್ಮ ಶಿವಕುಮಾರ್‌, ಯುವಮುಖಂಡರಾದ ಅಪ್‌ಬಂಡೆ ಗೋಪಾಲ್‌, ಟಿ.ಎನ್‌.ಪೇಟೆ ರಮೇಶ್‌, ವಡ್ರೇವು ಮೂರ್ತಿ ಶಾಂತಿ ನಗರ ಹನುಮಂತ್‌, ಸುಬ್ಬರಾಯಪ್ಪ, ಇತರೆ ಆನೇಕ ಮಂದಿ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

ರಾಜ್ಯದ ಜನತೆಯ ಹಿತಕಾಯಲು ನನ್ನ ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ನನ್ನ ರಾಜ್ಯದ ರೈತರ, ಬಡವರ, ಮಹಿಳೆಯರ ನೆಮ್ಮದಿಯ ಬದುಕಿಗಾಗಿ ಹೋರಾಡುತ್ತಿದ್ದೇನೆ. ನನ್ನನ್ನು ಪಾವಗಡ ತಾಲೂಕಿನ ಜನತೆ ನಿಮ್ಮ ಕುಟುಂಬದ ಮಗನಾಗಿ ಸ್ವೀಕರಿಸಿದ್ದೀರಿ. ನಿಮ್ಮ ಋುಣವನ್ನು ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಎಚ್‌.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಎಚ್ಡಿಕೆಯಿಂದ ಹಲವು ಭರವಸೆ

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಶಾಲಾ ಕಾಲೇಜಿಗೆ ಹೋಗಲು ಎಲೆಕ್ಟ್ರಿಕಲ್‌ ಸ್ಕೂಟಿ ನೀಡಲಾಗುವುದು. ರೈತರು ಪ್ರತಿ ಮಳೆಗಾಲದಲ್ಲಿ ಬೇಸಾಯಕ್ಕೆ ಎಕರೆಗೆ 10 ಸಾವಿರ ರೂಗಳನ್ನು 10 ಎಕರೆಗೆ 1 ಲಕ್ಷ ರೂ.ಗಳನ್ನು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರಿದಿಗೆ ಉಚಿತವಾಗಿ ನೀಡಲಾಗುವುದು. ಭೂರಹಿತರಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಕಾರ್ಮಿಕರಿಗೆ 2000 ಮಾಸಿಕ ಧನ ಸಹಾಯ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. 65 ವರ್ಷ ವಯಸ್ಸಿನ ಎಲ್ಲ ವಯೋವೃದ್ಧರಿಗೂ 5000 ಗೌರವ ಧನ ನೀಡಲಾಗುವುದು. ಗ್ಯಾಸ್‌ ಸಿಲಿಂಡರ್‌ 5 ಸಿಲಿಂಡರ್‌ ವರ್ಷಕ್ಕೆ ಉಚಿತವಾಗಿ ನೀಡಲಾಗುವುದು. ಯುವಕರಿಗೆ ಉದ್ಯೋಗಕ್ಕಾಗಿ ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಿದ್ದೇನೆ ಎಂದರು....

Latest Videos
Follow Us:
Download App:
  • android
  • ios