Asianet Suvarna News Asianet Suvarna News

ಮತಾಂತರಗೊಂಡವರ ಹಿಂದೂ ಧರ್ಮಕ್ಕೆ ಕರೆತರುವ ಹೊಣೆ ಎಲ್ಲರದ್ದು: ಸೂಲಿಬೆಲೆ

ಮತಾಂತರಗೊಂಡ ಎಲ್ಲಾ ಹಿಂದೂಗಳನ್ನು ಮತ್ತೆ ಹಿಂದೂ ಸಮಾಜಕ್ಕೆ ಕರೆ ತರುವ ಜವಾಬ್ದಾರಿ ಎಲ್ಲಾ ಹಿಂದೂಗಳ ಮೇಲಿದೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. 

It is everyones responsibility to convert converts to Hinduism says Chakravarthy Sulibele gvd
Author
First Published Dec 5, 2022, 8:48 PM IST

ನರಸಿಂಹರಾಜಪುರ (ಡಿ.05): ಮತಾಂತರಗೊಂಡ ಎಲ್ಲಾ ಹಿಂದೂಗಳನ್ನು ಮತ್ತೆ ಹಿಂದೂ ಸಮಾಜಕ್ಕೆ ಕರೆ ತರುವ ಜವಾಬ್ದಾರಿ ಎಲ್ಲಾ ಹಿಂದೂಗಳ ಮೇಲಿದೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ರಾತ್ರಿ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದ ವೀರ ಸಾವರ್ಕರ್‌ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ದತ್ತ ಜಯಂತಿ ಪ್ರಯುಕ್ತ ನಡೆದ ಹಿಂದೂ ಸಮ್ಮಿಲನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಮತಾಂತರ ಆದವರನ್ನು ವಾಪಾಸು ಕರೆ ತರುವ ಯುದ್ಧಕ್ಕೆ ಎಲ್ಲರೂ ಸನ್ನದ್ಧರಾಗಿರಬೇಕು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಿಂದೂಗಳಿಗೆ ಉಸಿರಾಡುವ ಪರಿಸ್ಥಿತಿ ಬಂದಿದೆ.500 ವರ್ಷಗಳ ಹೋರಾಟದ ಇತಿಹಾಸವಿದ್ದ ಬಾಬರಿ ಮಸೀದಿ ಜಾಗದಲ್ಲಿ ರಾಮ ಮಂದಿರ ಮತ್ತೆ ಕಟ್ಟಲಾಗುತ್ತಿದೆ.ಈಗ ಎಲ್ಲರ ಹೃದಯದಲ್ಲಿ ರಾಮ ಇದ್ದಾನೆ.ಕಾಶ್ಮೀರದಲ್ಲಿ 370 ನೇ ವಿಧಿ ತೆಗೆದು ಹಾಕಲಾಗಿದ್ದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಕಾನೂನು ಜಾರಿಗೆ ತರಲಾಗಿದೆ.ಕಾಶಿಯಲ್ಲಿ ಭವ್ಯ ಮಂದಿರ ಕಟ್ಟಲಾಗಿದೆ.ಮಧುರದಲ್ಲಿ ಕೃಷ್ಣ ಹುಟ್ಟಿದ ಜಾಗವನ್ನು ಮತ್ತೆ ಪಾಪಾಸು ಪಡೆಯಬೇಕಾಗಿದೆ ಎಂದು ಘೋಷಿಸಿದರು.

ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ

ಭಾರತ ದೇಶದಲ್ಲಿ ಹಿಂದೂ ಸಮಾಜದ ಒಳ ಪಂಗಡ, ಜಾತಿಗಳು ಎಂಬ ಕೆಟ್ಟಆಚರಣೆ ತೆಗೆದು ಹಾಕಿ ಎಲ್ಲಾ ಹಿಂದೂಗಳು ಒಂದೇ ಎಂಬಂತಾಗಬೇಕು.ಇಂದು ಭಾರತದ ಮೇಲೆ ಯು ದ್ಧದ ಯೋಚನೆ ಮಾಡಬೇಕಾದರೆ ಪಾಕಿಸ್ತಾನ ಹಾಗೂ ಚೀನಾ ಹಿಂದೆ ಮುಂದೆ ನೋಡುತ್ತಿದೆ. ಭವ್ಯ ಭಾರತ ಈಗ ಗಟ್ಟಿಯಾಗಿದೆ.ಧರ್ಮ ಹಾಗೂ ಹಿಂದೂ ಸಮಾಜದ ರಕ್ಷಣೆಗಾಗಿ ಎಲ್ಲರೂ ಒಟ್ಟಾಗೋಣ.ದತ್ತ ಪೀಠದ ಮುಕ್ತಿಗಾಗಿ ಹೋರಾಟ ಮುಂದುವರಿಯುತ್ತಿದ್ದು ಹತ್ತಾರು ವರ್ಷಗಳ ಹೋರಾಟದ ಫಲ ಸಿಗಲಿದೆ ಎಂದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಆರ್‌.ಡಿ.ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ,ನ.28 ರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ದತ್ತ ಮಾಲೆ ಹಾಕುತ್ತಿದ್ದೇವೆ.ದತ್ತ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿ 45 ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ನರಸಿಂಹರಾಜಪುರದಲ್ಲಿ ಮೊದಲನೇ ಕಾರ್ಯಕ್ರಮ ನಡೆಯುತ್ತಿದೆ.ಡಿ.6 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಅನುಸೂಯ ಜಯಂತಿಯಲ್ಲಿ 10 ಸಾವಿರ ಮಹಿಳೆಯರು ಸೇರಲಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಶೋಭಾ ಯಾತ್ರೆಯಲ್ಲಿ 70 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

Chikkamagaluru: ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಇದೇ ಸಂದರ್ಭದಲ್ಲಿ ಹಿರಿಯ ಆರ್‌.ಎಸ್‌.ಎಸ್‌.ಮುಖಂಡ ಎಚ್‌.ಎಸ್‌.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಕೆ.ಪಿ.ಸುರೇಶ್‌ ಕುಮಾರ್‌ ವಹಿಸಿದ್ದರು. ಇದಕ್ಕೂ ಮೊದಲು ಬಸ್ತಿಮಠದಿಂದ ಪ್ರವಾಸಿ ಮಂದಿರದವರೆಗೆ ಶೋಭಾ ಯಾತ್ರೆ ನಡೆಯಿತು.ಮಾಜಿ ಸಚಿವ ಡಿ.ಎನ್‌.ಜೀವರಾಜ್‌,ಬಿಜೆಪಿ ತಾಲೂಕು ಅಧ್ಯಕ್ಷ ಅರುಣ್‌ ಕುಮಾರ್‌,ನಗರ ಅಧ್ಯಕ್ಷ ರಾಜೇಂದ್ರಕುಮಾರ್‌, ಮುಖಂಡ ಎಂ.ಆರ್‌.ರವಿಶಂಕರ್‌,ವಿಶ್ವ ಹಿಂದೂ ಪರಿಷತ್‌ ಮುಖಂಡ ಆರ್‌.ಡಿ.ಮಹೇಂದ್ರ, ಸಂಘ ಪರಿವಾರದ ಮುಖಂಡರು, ಬಜರಂಗದಳದ ಕಾರ್ಯಕರ್ತರು ಸೇರಿ ಸಾವಿರಾರು ಜನರು ಶೋಭ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್‌ ಸಿ.ಅಭಿಷೇಕ್‌,ಮುಖಂಡರಾದ ಇಂದು ಶೇಖರ.ಅನೂಪ್‌,ಭಾಗ್ಯ ನಂಜುಂಡಸ್ವಾಮಿ,ದರ್ಶನ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios