'ಕುಮಾರಸ್ವಾಮಿ ಸಿಎಂ ಆಗುವುದು ಸೂರ್ಯಚಂದ್ರ ಇರುವಷ್ಟೆಸತ್ಯ'
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಕುಮಾರಸ್ವಾಮಿರವರು ಮುಖ್ಯಮಂತ್ರಿ ಆಗುವುದು ಸೂರ್ಯ ಚಂದ್ರ ಇರುವಷ್ಟೆಸತ್ಯ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಕುಮಾರಸ್ವಾಮಿರವರು ಮುಖ್ಯಮಂತ್ರಿ ಆಗುವುದು ಸೂರ್ಯ ಚಂದ್ರ ಇರುವಷ್ಟೆಸತ್ಯ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಉಮೇಶ್ ಆಟೋ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಯಾರು ಎಷ್ಟೇ ಪ್ರಯತ್ನ ಮಾಡಿದರು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ತಾತ, ತಂದೆ ಹಾಗೂ ತಾಯಿಯವರು ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುದುಡಿದಿದ್ದಾರೆ. ಈಗ ನಾನು ಅವರಂತೆಯೇ ನಿಮ್ಮೆಲ್ಲರ ಸೇವೆಗಾಗಿ ಬಂದಿದ್ದೇನೆ. ಇಲ್ಲಿಯೇ ಕಚೇರಿ ತೆರೆದು ಜನರ ಕಷ್ಟಗಳಿಗೆ ಸ್ಪಂದಿಸಿ ಕೈಲಾದ ನೆರವು ಕಲ್ಪಿಸುತ್ತೇನೆ ಎಂದು ತಿಳಿಸಿದರು.
ಆಟೋ ಚಾಲಕರು ಶ್ರಮ ಜೀವಿಗಳು. ಪ್ರತಿನಿತ್ಯ ಆದಾಯ ಕಡಿಮೆಯಿದ್ದು, ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ನೀವೆಲ್ಲರು ನನ್ನೊಂದಿಗೆ ಸಂಪರ್ಕಕ್ಕೆ ಬಂದಲ್ಲಿ ನೆರವಿಗೆ ನಿಲ್ಲುತ್ತೇನೆ. ಇದೀಗ ಮತ್ತೆ ಕೋವಿಡ್ ಭೀತಿ ಆವರಿಸುತ್ತಿದ್ದು, ಜನರ ದಿನನಿತ್ಯದ ಕಾರ್ಯಚಟುವಟಿಕೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ದೇವರ ಕಾಪಾಡಲೆಂದು ಪ್ರಾರ್ಥಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮತಬ್ಯಾಂಕ್‌ಗಾಗಿ ರಾಮ ಮಂದಿರ ವಿಚಾರ ಪ್ರಸ್ತಾಪ
ರಾಮನಗರ : ಕಳೆದ ಮೂರು ವರ್ಷಗಳಿಂದ ಮೌನವಾಗಿದ್ದ ಬಿಜೆಪಿ ಸರ್ಕಾರ ಚುನಾವಣೆ ಸಮೀಪ ಇರುವ ಕಾರಣ ರಾಮ ಮಂದಿರ ನಿರ್ಮಾಣದ ವಿಚಾರ ಪ್ರಸ್ತಾಪಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಈ ಅವಧಿಯಲ್ಲಿ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ ಉದ್ಘಾಟನೆ ಮಾಡಬಹುದಿತ್ತು. ಆದರೀಗ ಚುನಾವಣೆ ಕಾರಣಕ್ಕೆ ರಾಮ ಮಂದಿರ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದರು.
ಚುನಾವಣೆ ಸಮೀಪ ಇರುವುದರಿಂದ ರಾಮ ಮಂದಿರ ಹೆಸರಿನಲ್ಲಿ ಜನರ ಬಳಿ ಮತ ಪಡೆಯಲು ಬಿಜೆಪಿ ಹೊರಟಿದೆ. ಜತೆಗೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನರ ನಡುವೆ ಸಂಘರ್ಷವನ್ನುಂಟು ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದು ಮತ್ತು ಮುಸ್ಲಿಂರು ಸಹೋದರರಂತೆ ಜೀವನ ಸಾಗಿಸುತ್ತಿದ್ದಾರೆ. ಆದರೆ, ಬಿಜೆಪಿಯು ಹಿಂದುಗಳನ್ನು ಮತ್ತು ಹಿಂದುತ್ವವನ್ನು ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳ ಹೆಸರಿನಲ್ಲಿ ಆಡಳಿತ ಪಕ್ಷವೂ ಜನರನ್ನು ತಾತ್ಕಲಿಕವಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ನೆನ್ನೆ ಮೊನ್ನೆ ರಾಮನಗರದಲ್ಲಿ ಗೊತ್ತಾಗಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಳೆದ 30 ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿಯೇ ಇದ್ದಾರೆ. ಜೊತೆಗೆ, ರಾಮನಗರವನ್ನು ಜಿಲ್ಲೆಯನ್ನಾಗಿಸಿದ್ದೇ ಕುಮಾರಸ್ವಾಮಿ ಅವರು ಎಂಬುದನ್ನು ಮರೆಯಬಾರದು ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾರಯಲಿ ಕುರಿತು ಪ್ರತಿಕ್ರಿಯಿಸಿದ ನಿಖಿಲ… ಕುಮಾರಸ್ವಾಮಿ, ಜನರು ಕಷ್ಟಎಂದಾಗ ಯಾವ ನಾಯಕರು ಸ್ಪಂದಿಸಿದ್ದಾರೆ? ಯಾವ ಪಕ್ಷದ ನಾಯಕರು ಬಂದು ಕ್ಷೇತ್ರದ ಜನರ ಕಷ್ಟಕೇಳಿದ್ದಾರೆ ಎಂಬ ವಿಷಯ ಜನರ ಮನಸ್ಸಿನಲಿದೆ. ಹಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕೈ ಹಿಡಿಯುವ ಕೆಲಸವನ್ನು ಜನರು ಮಾಡಿದ್ದಾರೆ. ಆದರೆ, ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ತಿಳಿದು ಅಮಿತ್ ಶಾ ಮಾತನಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ದೇವೇಗೌಡರನ್ನು ಪ್ರೀತಿಯಿಂದ ಕಾಣುತ್ತಾರೆ. ಅಮಿತ್ ಶಾ ಅವರು ರಾಜಕೀಯ ಮಾಡಲಿ. ಆದರೆ, ಅವರ ವಿರುದ್ಧ ಮಾತನಾಡುವುದನ್ನು ಕರ್ನಾಟಕದ ಜನರು ಒಪ್ಪುವುದಿಲ್ಲ ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ಪ್ರತಿ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಹೋರಾಟ ಮಾಡುತ್ತೇವೆ. ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೆ ಆಸರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಕುಮಾರಸ್ವಾಮಿ ಅವರು ಮತ್ತೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ವಕ್ತಾರ ಉಮೇಶ್, ಮುಖಂಡರಾದ ರೈಡ್ ನಾಗರಾಜ್, ರವಿ, ದೊರೆಸ್ವಾಮಿ, ವಕೀಲ ರಾಜಶೇಖರ್ ,
--------------------
3ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಉಮೇಶ್ ಆಟೋ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದರು.
----------------------