Asianet Suvarna News Asianet Suvarna News

ಟಿಕೆಟ್‌ ನೀಡುವುದು ಹೈಕಮಾಂಡ್‌ನ ನಿರ್ಧಾರ : ಸೋಮಣ್ಣ

ನಾನು ಹೈಕಮಾಂಡ್‌ ಅಲ್ಲ. ಟಿಕೆಟ್‌ ಕೊಡೋದು, ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಷಯ. ತಮ್ಮ ಮಗನಿಗೆ ಎಂಎಲ್‌ಎ ಟಿಕೆಟ್‌ ಕೊಟ್ಟರೂ ಸಂತೋಷ. ಕೊಡದಿದ್ದರೂ ಸಂತೋಷ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

Issuance of tickets is the High Commands decision Somanna snr
Author
First Published Apr 11, 2023, 5:51 AM IST | Last Updated Apr 11, 2023, 5:51 AM IST

 ತುಮಕೂರು  : ನಾನು ಹೈಕಮಾಂಡ್‌ ಅಲ್ಲ. ಟಿಕೆಟ್‌ ಕೊಡೋದು, ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಷಯ. ತಮ್ಮ ಮಗನಿಗೆ ಎಂಎಲ್‌ಎ ಟಿಕೆಟ್‌ ಕೊಟ್ಟರೂ ಸಂತೋಷ. ಕೊಡದಿದ್ದರೂ ಸಂತೋಷ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾರಿಗಾದರೂ ಟಿಕೆಟ್‌ ಕೊಡಲೇಬೇಕು. ಅರ್ಹತೆ ಇರುವವಿಗೆ ಟಿಕೆಟ್‌ ಕೊಡುತ್ತಾರೆ. ನಮ್ಮ ಮಗನಿಗೆ ಕೊಟ್ಟರೆ ಕೆಲಸ ಮಾಡುತ್ತೇನೆ. ಹೋರಾಟ ಮಾಡುತ್ತೇನೆ. ಕಾರ್ಯಕರ್ತರು ಪಕ್ಷದ ಮುಖಂಡರೆಲ್ಲಾ ಸೇರಿ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.

ವರುಣ ಕ್ಷೇತ್ರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿದ ಸೋಮಣ್ಣ, ಯಾರು ಹಾಗೆ ಹೇಳಿದ್ದು, ನನಗೆ ಆ ತರಹ ಯಾವುದೇ ಒತ್ತಡ ಇಲ್ಲ. ನನ್ನನ್ನು ವರುಣಾ ಕ್ಷೇತ್ರಕ್ಕೆ ಹೋಗು ಎಂದು ಯಾರು ಇದುವರೆಗೂ ಕೇಳಿಲ್ಲ. ಇದೆಲ್ಲಾ ಊಹಾಪೋಹ ಎಂದು ಅಲ್ಲಗಳೆದರು.

ವರಿಷ್ಠರಿಗೆ ಈ ಚುನಾವಣೆ ಒಂದು ಪ್ರತಿಷ್ಠೆಯ ಚುನಾವಣೆ. ರಾಜ್ಯ ರಾಜಕಾರಣದಲ್ಲಿ ಡಬಲ… ಇಂಜಿನ್‌ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ಅದರಿಂದ ಉಪಯೋಗ ಏನಾಗಿದೆ ಎಂದು ಜನರಿಗೆ ಗೊತ್ತಿದೆ ಎಂದರು. ಎಲ್ಲೆಲ್ಲಿ ಏನೇನು ಆಗಬೇಕೋ ಅದು ಆಗುತ್ತದೆ. ತಮಗೂ ಒಂದೊಂದು ಸಾರಿ ಅನುಮಾನ ಕಾಡುತ್ತದೆ. ಹಾಗಾಗಿ ಯಾರನ್ನು ಎಲ್ಲೆಲ್ಲಿ ನಿಲ್ಲಿಸಬೇಕು ಎಂಬದು ವರಿಷ್ಠರಿಗೆ ಗೊತ್ತಿದೆ. ಎಲ್ಲಾ ವರಿಷ್ಠರಿಗೆ ಬಿಟ್ಟಿದ್ದು ಎಂದರು.

ಗುಬ್ಬಿ ವಿಧಾನಸಭಾ ಕ್ಷೇತ್ರದ ಬಗ್ಗೆ ಶನಿವಾರ ಸಂಸದ ಬಸವರಾಜ್‌ ಅವರನ್ನ ಭೇಟಿ ಮಾಡಿ ಮಾತಾಡಿದೆ. ಒಂದು ಕುಟುಂಬಕ್ಕೆ ಎರಡು ಟಿಕೆಟ್‌ ಕೊಡುವುದಿಲ್ಲ. ಯಡಿಯೂರಪ್ಪ ಅವರು ಮಗನಿಗೆ ಟಿಕೆಟ್‌ ಬಿಟ್ಟು ಕೊಟ್ಟಿದ್ದಾರೆ. ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ… ಸೇರಿದಂತೆ ಐದಾರು ಜನ ಎಂಎಲ್‌ಎಗಳು ಮಕ್ಕಳಿಗೆ ಟಿಕೆಟ್‌ ಸಿಗಬಹುದು ಎಂಬ ಆಶಾವಾದ ಇಟ್ಟುಕೊಂಡಿದ್ದಾರೆ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೆಲ್ಲುವ ಸಾಧ್ಯತೆ ಇರೋ ಕ್ಷೇತ್ರಗಳೆಲ್ಲಾ ಕಾಂಗ್ರೆಸ್‌ ತೆಕ್ಕೆಯಲ್ಲಿ ಇವೆ. ಹಾಗಾಗಿ ಮಕ್ಕಳಿಗೆ ಟಿಕೆಟ್‌ ಕೊಟ್ಟರೆ ನಿಲ್ಲಿಸುತ್ತೇವೆ. ಇಲ್ಲ ಅಂದರೆ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಎಲ್ಲೆಲ್ಲಿ ಹೇಳಬೇಕೋ ಎಲ್ಲಾ ಹೇಳಿದ್ದೀನಿ. ಕೇಳಿದ್ದು ಆಯ್ತು. ಎಲ್ಲಾ ಆಯ್ತು. ಅವರು ಹೇಳಿದ್ದನ್ನ ನಾನು ಹೇಳಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ. ಬೇರೆಯವರ ಮಕ್ಕಳು ಯಾರು ಯಾರು ಯೋಚನೆ ಮಾಡಿದ್ದಾರೆ ಅವರನ್ನು ಪರಿಗಣಿಸಿ ಎಂದು ಹೇಳಿದ್ದೇನೆ. ಅದು ಮುಗಿದ ಅಧ್ಯಾಯ ಎಂದರು.

ನೀತಿ ಸಂಹಿತೆ ಕಾರಣವಲ್ಲ: ಶಿವಕುಮಾರ ಮಹಾಸ್ವಾಮಿಗಳು ರಾಷ್ಟ್ರ ಕಂಡ ಮಹಾ ತಪಸ್ವಿಗರು. ಅನ್ನದಾತರು, ವಿದ್ಯಾದಾನಿಗಳು. ನಮಗೂ ಪ್ಯೂಜ್ಯರಿಗೂ ಅವಿನಾಭಾವ ಸಂಬಂಧ ಇದೆ. ನಾವು ಯಾವುದೇ ಶುಭ ಕಾರ್ಯ ನಡೆಸುವ ಮುನ್ನ, ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಅಶಿರ್ವಾದ ಪಡೆಯುತ್ತೇವೆ. ಏಪ್ರಿಲ… 1 ಕ್ಕೆ ಬರಬೇಕಿತ್ತು. ನೀತಿ ಸಹಿತೆ ಜಾರಿ ಇದ್ದ ಕಾರಣ ಬರುವುದಕ್ಕೆ ಆಗಲಿಲ್ಲ. ಚುಂಚನಗಿರಿ ಹಾಗೂ ಸಿದ್ದಗಂಗಾ ಮಠ ನಮ್ಮ ಆರಾಧ್ಯದೈವ. ಮಠಕ್ಕೂ ನಮಗೂ ಅವಿನಾಭಾವ ಸಂಬಂಧ. ಭಕ್ತನಿಗೂ ಗುರುವಿಗೆ ಇರುವ ಅವಿನಾಭಾವ ಸಂಬಂಧವಿದೆ ಎಂದು ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್‌, ಸಂಸದ ಜಿ.ಎಸ್‌. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್‌ ಹೆಬ್ಬಾಕ, ಬಾವಿಕಟ್ಟೆನಾಗೇಶ್‌, ನಗರ ಮಂಡಳ ಅಧ್ಯಕ್ಷ ಹನುಮಂತರಾಜು, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ,ರಮೇಶ್‌ ಇತರರಿದ್ದರು.

ನಿರೀಕ್ಷೆಯೊಂದಿಗೆ ಕಾರ್ಯೋನ್ಮುಖ

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ನಾನು ಆಶಾವಾದಿ. ಯಾವತ್ತು ಕೂಡಾ ಚುನಾವಣಾ ಅಂತ ಕೆಲಸ ಮಾಡಿದವನಲ್ಲ. ಏನಾದರೂ ಕೆಲಸ ಮಾಡಿದರೆ ನಿರೀಕ್ಷೆ ಇಟ್ಟುಕೊಂಡೇ ಕೆಲಸ ಮಾಡುತ್ತೇನೆ. ಮಠದ ಭೇಟಿಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios