Asianet Suvarna News Asianet Suvarna News

ಹೆರಿಗೆ ಬೇಡ, ಹೊರಗೆ ಬರಲ್ಲ.. ಗರ್ಭಿಣಿಯರಿಗೆ ಗ್ರಹಣ ಕಂಟಕವಾ?

ಇದು ನಂಬಿಕೆಯೋ, ಮೂಢ ನಂಬಿಕೆಯೋ ಗೊತ್ತಿಲ್ಲ. ಆದರೆ ಖಗ್ರಾಸ ಚಂದ್ರ ಗ್ರಹಣ ಗರ್ಭಿಣಿಯರಿಗೆ ಅಪಾಯ ತಂದೊಡ್ಡಲಿದೆ ಎಂಬ ಸುದ್ದಿಯನ್ನು ಗಂಭಿರವಾಗಿ ತೆಗೆದುಕೊಂಡಿರುವ ವಿಜಯಪುರದ ಮಹಿಳೆಯರು ಜ್ಯೋತಿಷಿಗಳ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ.

Is Lunar Eclipse really harmful during pregnancy
Author
Bengaluru, First Published Jul 27, 2018, 5:49 PM IST

ವಿಜಯಪುರ[ಜು.27] ಖಗ್ರಾಸ ಚಂದ್ರಗ್ರಹಣ ಕಾರಣಕ್ಕೆ  ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿವೆ.  ಸಿಜೇರಿಯನ್ ಗೆ ಡೇಟ್ ನೀಡಿದ್ದದರೂ ಆಸ್ಪತ್ರೆಯತ್ತ ತುಂಬು ಗರ್ಭಿಣಿಯರು ತಲೆ ಹಾಕಿಲ್ಲ.

ಹಾಗಾಗಿ ನಿಗದಿ ಪಡಿಸಿದ್ದ ಸಿಜೆರಿಯನ್ ರದ್ದು ಮಾಡಲಾಗಿದೆ.  ಗ್ರಹಣದ ಕಾರಣಕ್ಕೆ ಗರ್ಭಿಣಿಯರು ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ. ಜ್ಯೋತಿಷಿಗಳ ಮಾತಿಗೆ ಕಟ್ಟು ಬಿದ್ದು ಗರ್ಭಿಣಿಯರು ಉಪವಾಸ ವ್ರತ ಕೈಗೊಂಡಿದ್ದಾರೆ. 

ದೇವರ ನಾಮಾವಳಿ, ಪುಸ್ತಕಗಳನ್ನ ಓದುತ್ತ ಕುಳಿತಿದ್ದಾರೆ.ಮೈ-ಕೈ ಕೆರೆದುಕೊಳ್ಳುವಂತಿಲ್ಲ, ಉಪಹಾರ ಸೇವಿಸುವಂತಿಲ್ಲ, ಬೆಳಕಿನಲ್ಲಿ‌ ಓಡಾಡುವಂತಿಲ್ಲ ಎಂಬ ಕಟ್ಟುಪಾಡುಗಳು ಒಂದು ಅರ್ಥದಲ್ಲಿ ಶಿಕ್ಷೆಯಾಗಿ ಪರಿಣಮಿಸಿದೆ. ಮಧ್ಯಾಹ್ನ 12 ಗಂಟೆಯಿಂದಲೆ‌ ಗ್ರಹಣದ ವ್ರತ ಆರಂಭಿಸಿದ್ದಾರೆ.

Follow Us:
Download App:
  • android
  • ios