ಮಾಜಿ ಸಿಎಂ ಸಿದ್ದರಾಮಯ್ಯ ಮೇಲ್ಜಾತಿಯವರಲ್ಲವೇ? : ಲಕ್ಷ್ಮಣ್

ಬಿಜೆಪಿ ಮೇಲ್ಜಾತಿಯವರ ಪಕ್ಷ. ಅದನ್ನು ಬೆಂಬಲಿಸಬೇಡಿ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಜಾತಿಯವಲ್ಲವೇ ಎಂದು ಜಿಪಂ ಮಾಜಿ ಸದಸ್ಯ ಎಚ್‌.ಸಿ. ಲಕ್ಷ್ಮಣ್‌ ಪ್ರಶ್ನಿಸಿದ್ದಾರೆ.

Is former CM Siddaramaiah not upper caste Lakshman snr

 ಮೈಸೂರು :  ಬಿಜೆಪಿ ಮೇಲ್ಜಾತಿಯವರ ಪಕ್ಷ. ಅದನ್ನು ಬೆಂಬಲಿಸಬೇಡಿ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಜಾತಿಯವಲ್ಲವೇ ಎಂದು ಜಿಪಂ ಮಾಜಿ ಸದಸ್ಯ ಎಚ್‌.ಸಿ. ಲಕ್ಷ್ಮಣ್‌ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರ ಮೇಲ್ಜಾತಿಯ ಮನಸ್ಥಿತಿಯೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ. ಪರಮೇಶ್ವರ್‌ ಅವರ ಸೋಲಿಗೆ ಕಾರಣ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಮೇಶ್ವರ್‌ ಅವರನ್ನು ಡಿಸಿಎಂ ಆಗಿ ಮಾಡಲಿಲ್ಲ. ಈ ಬಾರಿ ಕಾಂಗ್ರೆಸ್‌ ಒಕ್ಕಲಿಗರು ಅಥವಾ ದಲಿತರನ್ನು ಸಿಎಂ ಮಾಡಿದರೆ ಸಿದ್ದರಾಮಯ್ಯ ಪಕ್ಷದಲ್ಲಿ ಉಳಿಯುತ್ತಾರಾ? ಎಂದು ಅವರು ಕೇಳಿದ್ದಾರೆ.

ಸಿದ್ದರಾಮಯ್ಯ ಬಿಜೆಪಿ ಕೋಮುವಾದಿ, ಹಿಂದುತ್ವಪಾದಿ ಎಂದು ಜರಿಯುತ್ತಿದ್ದ ದಲಿತರಲ್ಲೇ ಎಡ- ಬಲದವರನ್ನು ಎತ್ತಿ ಕಟ್ಟುತ್ತಿದ್ದಾರೆ. ನಡುವೆ ಭೋವಿ ಜನಾಂಗದವನ್ನು ಛೂ ಬಿಡುತ್ತಾರೆ. ಈಗ ದಲಿತರು ಹೆಚ್ಚು ಕಲಿತಿದ್ದಾರೆ. ಸ್ವಾಭಿಮಾನಿಗಳಾಗಿದ್ದಾರೆ. ಒಳ್ಳೆಯದು- ಕೆಟ್ಟದ್ದು ನ‚ಡುವಿನ ಗೆರೆ ಕಾಣುವಷ್ಟುಪ್ರಬುದ್ಧರಿದ್ದಾರೆ. ಸಿದ್ದರಾಮಯ್ಯ ಕಾಗೆ ಹಾರಿಸುವ ಮಾತುಗಳನ್ನು ನಂಬುವಷ್ಟುದಡ್ಡರಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಜೆಡಿ​ಎಸ್‌ಗೆ ಕೊಟ್ಟ ಮತ ವೇಸ್ಟ್‌, ದುಡ್ಡಿದೆ ಅಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ: ಸಿದ್ದ​ರಾ​ಮಯ್ಯ

ಎಪ್ಪತ್ತರ ದಶಕದಲ್ಲಿ ಜನತಾಪಕ್ಷವನ್ನು ಗೌಡ- ಲಿಂಗಾಯರ ಪಕ್ಷ. ಅದನ್ನು ಬೆಂಬಲಿಸಬೇಡಿ ಎಂದು ಕಾಂಗ್ರೆಸ್‌ನವರು ಹಪಹಪಿಸುತ್ತಿದ್ದರು. ಈಗ ಅದು ಪುನಾರಾವರ್ತನೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

1983 ರಲ್ಲಿ ಜನತಾಪಕ್ಷ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಜನತಾ ಮನೆಗಳು, ಭಾಗ್ಯಜ್ಯೋತಿ, ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೆಗಸುವುದರ ಮೂಲಕ ಜನಸಾಮಾನ್ಯರು ಹಾಗೂ ರೈತರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ. ಪ್ರಸ್ತುತ ಜೆಡಿಎಸ್‌ಗೆ ಒಕ್ಕಲಿಗರು ಬುನಾದಿಯಂತಿದ್ದರೆ ಪ.ಜಾತಿಯವರು ಬೆಂಬಲಿಸುತ್ತಿದ್ದಾರೆ. ಎಪ್ಪತ್ತರ ದಶಕಕ್ಕೂ ಈಗಿನಿದಕ್ಕೂ ಸಾಕಷ್ಟುಬದಲಾವಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಬದುಕಿರುವವರೆಗೂ ಬಿಜೆಪಿ ವಿರೋಧಿಸುವೆ

ಟಿ.ನರಸೀಪುರ (ಮೈಸೂರು) (ಮಾ.07): ದೇಶದಲ್ಲಿ ಶೋಷಿತರನ್ನು ಮತ್ತಷ್ಟು ಶೋಷಿಸುತ್ತಿರುವ ಹಾಗೂ ಸಂವಿಧಾನವನ್ನು ವಿರೋಧಿಸುತ್ತಿರುವ ಬಿಜೆಪಿಯನ್ನು ನನ್ನ ಕೊನೇ ಉಸಿರಿನ ತನಕ ವಿರೋಧ ಮಾಡುತ್ತಲೇ ಇರುತ್ತೇನೆ. ಇದು ನನ್ನ ಸಿದ್ಧಾಂತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರದಲ್ಲಿ ಮಾತನಾಡಿ, ಬಿಜೆಪಿಯ ಇತಿಹಾಸ ನೋಡಿದಾಗ ಅದೊಂದು ಮೇಲ್ಜಾತಿ ಪಕ್ಷ. ಅವರು ಬಾಬಾ ಸಾಹೇಬರು ಕೊಟ್ಟಸಂವಿಧಾನ ಪರವಾಗಿ ಇಲ್ಲ ಎಂದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಯಾವ ಧರ್ಮದಲ್ಲೂ ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅಸಮಾನತೆ, ದ್ವೇಷ ಮಾಡು ಎಂದು ಹೇಳಿಲ್ಲ. ಆದರೆ ಸನಾತನ ಧರ್ಮವನ್ನು ಆರೆಸ್ಸೆಸ್‌ ಅಜೆಂಡಾದಂತೆ ಪೋಷಿಸುತ್ತಿರುವ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಧರ್ಮ, ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದರು.

ನಾನು ಲೋಕಾ ಬಂದ್‌ ಮಾಡಿದ್ದರೆ ಇಂದೇ ರಾಜೀನಾಮೆ ಕೊಡ್ತೇನೆ: ನಾನು ಲೋಕಾಯುಕ್ತ ಬಂದ್‌ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ. ನಾನು ಲೋಕಾಯುಕ್ತ ಬಂದ್‌ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆ ಅಷ್ಟೆ. ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇದ್ದರು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲೇ ಹೇಳಿತ್ತು. ಆದರೆ, ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ, ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯ. 

Latest Videos
Follow Us:
Download App:
  • android
  • ios