ಸಾಲಿಗ್ರಾಮ, ಮೇಲೂರು, ಹರದನಹಳ್ಳಿ, ತಂದ್ರೆ ಗ್ರಾಮಗಳು ಸೇರಿದಂತೆ ಈ ಭಾಗದ ರೈತರಿಗೆ ನೀರಾವರಿ ಯೋಜನೆ ಕೊಟ್ಟಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಭೇರ್ಯ : ಸಾಲಿಗ್ರಾಮ, ಮೇಲೂರು, ಹರದನಹಳ್ಳಿ, ತಂದ್ರೆ ಗ್ರಾಮಗಳು ಸೇರಿದಂತೆ ಈ ಭಾಗದ ರೈತರಿಗೆ ನೀರಾವರಿ ಯೋಜನೆ ಕೊಟ್ಟಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೊಸ್ಕರ ಏನಾದರು ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಎಂದ ಅವರು, ಅವಳಿ ತಾಲೂಕಿನ ಅಭಿವೃದ್ಧಿಗಾಗಿ ನಿತ್ಯ ಟಿಫನ್‌ ಬಾಕ್ಸ್‌ನಲ್ಲಿ ಊಟ ತಂದು ಜನರ ಸೇವೆ ಮಾಡುತ್ತಿದ್ದೇನೆ. ನೀವೇನೂ ಮಾಡಿರುವುದು ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌ ಅವರನ್ನು ಟೀಕಿಸಿದರು.

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಪ್ರಧಾನಿ ಮೋದಿ ಜೊತೆ ದೇವೇಗೌಡ ಚರ್ಚೆ

ಐದು ವರ್ಷಗಳು ನಿಮ್ಮ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಲ್ಲ ಭೇರ್ಯ, ಸಾಲಿಗ್ರಾಮ ಮುಂತಾದ ಗ್ರಾಮಗಳಿಗೆ ಅನುದಾನ ತಂದು ಏಕೆ ಅಭಿವೃದ್ಧಿ ಮಾಡಲಿಲ್ಲ, ಎರಡು ಬಾರಿ ಸೋತಿದ್ದೇವೆ ಎಂದು ಜನರ ಕಾಲಿಗೆ ಬೀಳುತ್ತಿದ್ದರಲ್ಲ, ಅದಲ್ಲ ಅನುಕಂಪ, ನಿಜವಾಗಲು ಅನುಕಂಪ ಇರುವುದು ಮೊನ್ನೆ ನಿಧನರಾದರಲ್ಲ ಆರ್‌. ಧ್ರುವನಾರಾಯಣ… ಅವರ ಕುಟುಂಬಕ್ಕೆ ಇರುವುದು ಅನುಕಂಪ ಎಂದ ಅವರು, ನಿಮಗೇನಾದರು ಅತಿಸೂಕ್ಷ್ಮಾತಿ ಸೂಕ್ಷ ಸಮಾಜದ ಮೇಲೆ ಗೌರವ ಅಭಿಮಾನ ಇದ್ದರೆ, ಭೇರ್ಯ ಗ್ರಾಪಂ ಅಧ್ಯಕ್ಷೆ ಆಗಬೇಕಿದ್ದ ಮಡಿವಾಳ ಸಮಾಜದ ಮಹಿಳೆಗೆ ಅಧ್ಯಕ್ಷ ಸ್ಥಾನ ತಪ್ಪಿಸಿ ನಿಮ್ಮ ನೆಂಟರಿಗೆ ಅಧ್ಯಕ್ಷ ಸ್ಥಾನ ಕೊಟ್ಟರಲ್ಲ ಅವಾಗ ಸೂಕ್ಷ್ಮಾತಿ ಸೂಕ್ಷ ಸಮಾಜ ಕಾಣಲಿಲ್ವ, ಆ ಸಮಾಜಕ್ಕೆ ಮೋಸ ಮಾಡಿದರಲ್ಲ ಎಂದು ಡಿ. ರವಿಶಂಕರ್‌ ವಿರುದ್ದ ಗುಡುಗಿದರು.

ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ಜಿಪಂ ಮಾಜಿ ಉಪಾಧ್ಯಕ್ಷ ಚೆನ್ನಬಸಪ್ಪ ತಾಲೂಕು ಜೆಡಿಎಸ್‌ ಅಲ್ಪಸಂಖ್ಯಾತ ಅಧ್ಯಕ್ಷ ಮುಶೀರ್‌ ಅಹಮದ್‌ ಮಾತನಾಡಿದರು.

ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಕುಮಾರ್‌, ಎಸ್‌.ಪಿ. ರಾಜಣ್ಣ, ತಾಲೂಕು ಜೆಡಿಎಸ… ಉಪಾಧ್ಯಕ್ಷ ತುಕಾರಂ, ತಾಲೂಕು ದಲಿತ ಮುಖಂಡ ನಾಗರಾಜ…, ಪುರಸಭೆ ಸದಸ್ಯರಾದ ಸಂತೋಷ್‌ಗೌಡ, ಉಮೇಶ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಡಿ.ಎಸ್‌. ಯೋಗೇಶ್‌ ಇದ್ದರು.

ಜೆಡಿಎಸ್‌ ಮೊದಲ ಪಟ್ಟಿ ಶಾಶ್ವತ ಅಲ್ಲ: ದೇವೇಗೌಡ

ಪುಲಕೇಶಿ ಮಾದರಿ ಕಿರೀಟ

ಮೈಸೂರು : ನಗರದಲ್ಲಿ ಭಾನುವಾರ ನಡೆಯುವ ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸಮರ್ಪಿಸಲು ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿಯನ್ನು ತಯಾರಿಸಲಾಗಿದೆ.

ಅಖಂಡ ಭಾರತವನ್ನು ಆಳ್ವಿಕೆ ಮಾಡಿದ ಕರ್ನಾಟಕದ ಮಣ್ಣಿನ ಮಕ್ಕಳೆಂದರೆ ಅದು ಇಮ್ಮಡಿ ಪುಲಕೇಶಿ ಹಾಗೂ ಎಚ್‌.ಡಿ. ದೇವೇಗೌಡರವರು. ಇವರಿಬ್ಬರಿಗೂ ಸಾಮ್ಯತೆ ಇರುವುದರಿಂದ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ವ್‌ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಅವರ ಪರಿಕಲ್ಪನೆಯೊಂದಿಗೆ ಕಲಾವಿದ ನಂದನ್‌ ಅವರ ಕಸೂತಿಯಲ್ಲಿ ಈ ಕಿರೀಟ ಸಿದ್ಧಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ರೈತರ ಮೂಲ ನೇಗಿಲ ಪ್ರತಿಮೆಯನ್ನು ರೈತ ನಾಯಕ ಎನಿಸಿರುವ ದೇವೇಗೌಡರಿಗೆ ಸಮರ್ಪಿಸಲು ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ವೇಳೆ ಯುವ ಮುಖಂಡ ಅಭಿಷೇಕ್‌ ಗೌಡ ಜೊತೆ ಇದ್ದರು.

ಇಂದು ಸಮಾರೋಪ

ಮೈಸೂರು(ಮಾ.26):  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಯ ಇಂದು(ಭಾನುವಾರ) ಸಂಜೆ 4.30ಕ್ಕೆ ನಗರದ ಹೊರ ವಲಯದಲ್ಲಿನ ಉತ್ತನಹಳ್ಳಿ ಸಮೀಪ ನಡೆಯಲಿದೆ.

ಮೂರು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರಥಯಾತ್ರೆಯ ಸಂಪನ್ನವು ಚಾಮುಂಡೇಶ್ವರಿ ಮತ್ತು ಉತ್ತನಹಳ್ಳಿ ತ್ರಿಪುರಸುಂದರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿದೆ. ಪೂರ್ವ ನಿಗದಿಯಂತೆ ಸಂಜೆ 4.30ರ ನಂತರ ಕಾರ್ಯಕ್ರಮ ನಡೆಯಲಿದ್ದು. ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದಲ್ಲದೇ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವಾರು ಮುಖಂಡರು, ಶಾಸಕರು, ಮಾಜಿ ಶಾಸಕರು ಭಾಗವಹಿಸುವರು.