ಬೆಳಗಾವಿ: ಅಮ್ಮಾಜೇಶ್ವರಿ ಏತ ನೀರಾವರಿಗೂ ಬಿದ್ದಿದೆ ಬ್ರೇಕ್‌!

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದರೂ ಅನೇಕ ಮಹತ್ವದ ಯೋಜನೆಗಳಿಗೆ ಬ್ರೇಕ್‌ ಬಿದ್ದಿದೆ. ಬಿಜೆಪಿ ಬಣ ರಾಜಕೀಯದಿಂದಾಗಿ ವಿವಿಧ ಕಾಮಗಾರಿಗಳು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗಿದ್ದು, ಈಗ ಕಾಂಗ್ರೆಸ್‌ ಆಡಳಿತದಲ್ಲಾದರೂ ವೇಗ ಪಡೆಯುವ ನಿರೀಕ್ಷೆಯಿತ್ತು. ಆದರೀಗ ಮುಖ್ಯಮಂತ್ರಿಗಳ ಆದೇಶದಿಂದ ಮತ್ತೆ ಅಡ್ಡಿಯಾದಂತೆ ಕಂಡುಬಂದಿದೆ.

Irrigation department orders to stop lift irrigation at Ammajeshwari at athani belgum rav

ವಿಶೇಷ ವರದಿ

ಅಥಣಿ (ಮೇ.25) : ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದರೂ ಅನೇಕ ಮಹತ್ವದ ಯೋಜನೆಗಳಿಗೆ ಬ್ರೇಕ್‌ ಬಿದ್ದಿದೆ. ಬಿಜೆಪಿ ಬಣ ರಾಜಕೀಯದಿಂದಾಗಿ ವಿವಿಧ ಕಾಮಗಾರಿಗಳು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗಿದ್ದು, ಈಗ ಕಾಂಗ್ರೆಸ್‌ ಆಡಳಿತದಲ್ಲಾದರೂ ವೇಗ ಪಡೆಯುವ ನಿರೀಕ್ಷೆಯಿತ್ತು. ಆದರೀಗ ಮುಖ್ಯಮಂತ್ರಿಗಳ ಆದೇಶದಿಂದ ಮತ್ತೆ ಅಡ್ಡಿಯಾದಂತೆ ಕಂಡುಬಂದಿದೆ.

ಹಿಂದಿನ ಸರ್ಕಾರದಲ್ಲಿ ಇನ್ನೂ ಪ್ರಾರಂಭವಾದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಸದ್ಯ ತಡೆವೊಡ್ಡಿದ್ದಾರೆ. ಆದರೆ, ಕ್ಷೇತ್ರದಲ್ಲೂ ಈಗ ಕಾಂಗ್ರೆಸ್‌ ಶಾಸಕರೇ ಇರುವುದರಿಂದ ಸಿಎಂ ಮನವೊಲಿಸಿ ವಿವಿಧ ಮಹತ್ವದ ಯೋಜನೆಗಳಿಗೆ ಚಾಲನೆ ನೀಡುವರೇ ಎಂಬ ನಿರೀಕ್ಷೆಯೂ ಕ್ಷೇತ್ರದಲ್ಲಿದೆ.

ಹುಕ್ಕೇರಿ ಮಹತ್ವದ ಯೋಜನೆಗಳ ಮೇಲೆ ಕರಿನೆರಳು?

ಕೃಷಿ ಕಾಲೇಜು:

ಈ ಹಿಂದೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮ ಪ್ರಭಾವ ಬೀರಿ ಅಥಣಿಗೆ ಕೃಷಿ ಕಾಲೇಜು ಮಂಜೂರು ಮಾಡಿಸಿಕೊಂಡ ಬಂದಿದ್ದರು. ಬಜೆಟ್‌ನಲ್ಲಿ .100 ಕೋಟಿ ಅನುದಾನ ಸಹ ಮಂಜೂರವಾಗಿತ್ತು. ಶಂಕುಸ್ಥಾಪನೆಗೆ ಸಿದ್ಧತೆ ನಡೆದಿರುವಾಗಲೇ ಬಿಜೆಪಿಯ ಕೆಲವರು ಅಡಿಗಲ್ಲು ಸಮಾರಂಭ ಮುಂದೂಡುವಂತೆ ಮಾಡಿದರು.

ಇನ್ನು, ಅಥಣಿ ಪಟ್ಟಣದಲ್ಲಿ ಪ್ರತಿ ಮನೆ ಮನೆಗೆ 24 ತಾಸು ಕುಡಿಯುವ ನೀರು ಪೂರೈಸುವ ಯೋಜನೆಗೆ ಸುಮಾರು .80 ಕೋಟಿ ಅನುದಾನ ಮಂಜೂರಾಗಿದೆ. ಸರ್ವೆ ಕೆಲಸ ಮುಗಿದು ಇನ್ನೇನು ಕಾರ್ಯಾರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಅಡ್ಡಿಯಾಗಿತ್ತು.

ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ .780 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಟೆಂಡರ್‌ ಅವಧಿ ಮುಗಿಯುವ ಮುನ್ನವೇ ಚುನಾವಣೆ ನೀತಿ ಸಂಹಿತೆ ಎದುರಾಗುವ ಆತಂಕದಲ್ಲಿ ಗಡಬಿಡಿಯಲ್ಲೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಕಾಕ ನಗರದಲ್ಲಿ ಅಥಣಿ ಯೋಜನೆಗೆ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಇದಕ್ಕೆ ಸಾಕಷ್ಟುಪರ-ವಿರೋಧ ವ್ಯಕ್ತವಾಯಿತು.

ಬಿಜಾಪೂರದ ಮುರುNೕಂದ್ರ ದಾನಪ್ಪ ಅರ್ಜುಣಗಿ ಅವರು ಮಾಹಿತಿ ಹಕ್ಕಿನಡಿ ವಾಸ್ತವಿಕ ಸ್ಥಿತಿ ಹೊರಗೆಡವಿದ್ದು, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು ಈ ಯೋಜನೆ ಟೆಂಡರ್‌ ಪ್ರತಿಕ್ರಿಯೆ ಮುಗಿದಿಲ್ಲ. ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿದೆ. ಇದರ ಟೆಂಡರ್‌ ಸ್ಥಗಿತವಾಗಿದೆ. ಕಾಮಗಾರಿ ಆರಂಭವಾಗಿಲ್ಲ ಎಂದು ಸ್ಪಷ್ಟವಾಗಿ ಲಿಖಿತ ಪತ್ರ ನೀಡಿದ್ದಾರೆ. ಈಗ ಸರ್ಕಾರದ ತಡೆ ಆದೇಶದಿಂದಾಗಿ ಅಮ್ಮಾಜೇಶ್ವರ ಯೋಜನೆ ಸಹ ಕನಸಿನ ಕೂಸಾಗಿದೆ.

ಸುಮಾರು 25 ಶಾಲೆಗಳಿಗೆ ಸ್ಮಾರ್ಚ್‌ಕ್ಲಾಸ್‌ ನಿರ್ಮಾಣಕ್ಕೆ ತಲಾ .4 ಲಕ್ಷದಂತೆ ಅನುದಾನ ಬಂದು ಒಂದು ವರ್ಷವೇ ಗತಿಸಿದೆಯಾದರೂ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಇದರ ಹೊರತಾಗಿ ಚುನಾವಣೆ ಪೂರ್ವದಲ್ಲಿ ಟೆಂಡರ್‌ ಆಗದೇ ಗಡಿಬಿಡಿಯಲ್ಲಿ ಹರ್‌ ಘರ್‌ ಜಲ್‌ ಯೋಜನೆ ಮತ್ತು ಜಿಪಂ ವ್ಯಾಪ್ತಿಯ ಕೆಲವು ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ಮಾಡಿದ್ದಾರೆ. ಆದರೆ, ಈಗ ಸಿಎಂ ಆದೇಶ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

Chitradurga: ಕಳಪೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅಪ್ಪ-ಅವ್ವನ ಜಗಳದಲ್ಲಿ ಕೂಸು ಬಡವಾದಂತೆ ಬಿಜೆಪಿ ಒಳ ಜಗಳದಲ್ಲಿ ಸಾಕಷ್ಟುಮಹತ್ವದ ಯೋಜನೆಗಳು ಹಣಕಾಸು ಮತ್ತು ಆಡಳಿತಾತ್ಮಕ ಮಂಜೂರು ಇದ್ದರೂ ಕಾರ್ಯ ರೂಪಕ್ಕೆ ಬರದೆ ಬಿಕೋ ಎನ್ನುತ್ತಿವೆ. ಆಡಳಿತಾತ್ಮಕ ಹಣಕಾಸು ಇಲಾಖೆ ಮಂಜೂರಾತಿ ನೀಡಿದ್ದ ಯೋಜನೆಗಳಿಗೆ ರಾಜಕೀಯ ಗ್ರಹಣ ಹಿಡಿದಿದ್ದು, ಈಗ ಅಥಣಿ ಕ್ಷೇತ್ರಕ್ಕೆ ಅಭಿವೃದ್ಧಿ ಶಕೆ ಆರಂಭವಾಗಲಿ ಎಂದು ಎದುರು ನೋಡುತ್ತಿದ್ದಾರೆ ಕ್ಷೇತ್ರದ ಜನತೆ.

Latest Videos
Follow Us:
Download App:
  • android
  • ios