Chitradurga: ಕಳಪೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ

ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದೆ ಎಂದು ಆರೋಪಿಸಿ ಗ್ರಾಮಸ್ಥರು  ಕಾಂಟ್ರ್ಯಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

village people anger against the contractor about Poor road construction in Chitradurga gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.23): ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡಿರೋ ಘಟನೆ ನಡೆದಿದೆ ಕಾಂಟ್ರ್ಯಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ಗ್ರಾಮಸ್ಥರು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸೋದಾದ್ರೆ ಮಾಡಿ ಇಲ್ಲ ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ. ಕಳಪೆ ಗುಣಮಟ್ಟದ ಆರೋಪ ಹಿನ್ನೆಲೆ ಪಿಕಾಸಿ, ಸಲಾಕೆ ಹಿಡಿದು ರಸ್ತೆ ಪರೀಕ್ಷೆ ಮಾಡುತ್ತಿರುವ ಗ್ರಾಮಸ್ಥರು. ರಸ್ತೆ ಕಾಮಗಾರಿ ಬಂದ್ ಮಾಡಿಸಿ ಆಕ್ರೋಶ ಹೊರಹಾಕುತ್ತಿರುವ ಜನತೆ. ಈ ದೃಶ್ಯಗಳು ಕಂಡುಬಂದಿದ್ದು, ಚಿತ್ರದುರ್ಗ ತಾಲೂಕಿನ ಗೊಡಬನಾಳ ಗ್ರಾಮದಲ್ಲಿ. ಗೊಡಬನಾಳ ಹಾಗೂ ಸೊಂಡೇಕೊಳ ಗ್ರಾಮಗಳ ಮಧ್ಯೆ ಸುಮಾರು 3 ಕೋಟಿ 17 ಲಕ್ಷ ರೂ ವೆಚ್ಚದಲ್ಲಿ ಪಿಎಂಜಿಎಸ್ ವೈ ಯೋಜನೆಯಡಿ 8 ಕಿಮಿ ರಸ್ತೆ ಕಾಮಗಾರಿ ನಡೀತಿದೆ.  ರಶ್ಮೀ ಕನ್ ಸ್ಟ್ರಕ್ನ್ ಕಂಪನಿಯಿಂದ  ರಸ್ತೆ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಖುದ್ದು ಗ್ರಾಮಸ್ಥರೇ ಮುಂದಾಗಿ ರಸ್ತೆ ಪರೀಕ್ಷೆ‌ ನಡೆಸಿದ್ದಾರೆ. ಈ ವೇಳೆ ಅಳತೆ ಪ್ರಕಾರ 35ಕೆಜಿ ಎಷ್ಟು ಬರಬೇಕಿದ್ದ ಜಲ್ಲಿ ಕಲ್ಲಿನ ತೂಕ 24 kg ಯಿಂದ 29 kg ವರೆಗೆ ಬಂದಿದೆ. ಈ ಕಾಮಗಾರಿ ಟೆಂಡರ್  ಪಡೆದ ಗುತ್ತಿಗೆದಾರರೇ ಬೇರೆ. ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರೇ ಬೇರೆ ಅಂತಾ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಬಂದ್ ಮಾಡಿಸಿ, ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Karnataka Budget 2023: ರಸ್ತೆ, ಹೆದ್ದಾರಿ ಅಭಿವೃದ್ಧಿಗೆ ಬೊಮ್ಮಾಯಿ ಅದ್ಯತೆ!

ಇನ್ನು ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರು ಸೈಟ್ ಇಂಜನೀಯರ್ ಚನ್ನೇಗೌಡ, ಕಾಮಗಾರಿಯನ್ನು  ಗುಣಮಟ್ಟ ಕಾಪಾಡಿಕೊಂಡೇ ಮಾಡಲಾಗುತ್ತದೆ. ಇಲ್ಲಿನ ಜನರು ಸಹಕಾರ ನೀಡುತ್ತಿಲ್ಲ. ಇನ್ನು ತೂಕದ ವಿಚಾರದಲ್ಲಿ ಇನ್ನೂ ಸರಿಯಾಗಿ ರಸ್ತೆ ಅಗೆದು ಜಲ್ಲಿ ತೂಕ ಮಾಡ್ಬೇಕು.ಆದ್ರೆ ಇಲ್ಲಿನ ಜನ ಸಗಕರಿಸುತ್ತಿಲ್ಲ. ಹಾಗಾಗಿ ಜಲ್ಲಿಕಲ್ಲಿನ ತೂಕ ಸರಿಯಾಗಿ ಬರ್ತಿಲ್ಲ. ಗ್ರಾಮಸ್ಥರ ಮಾತು ಕೇಳಿ ಕಾಮಗಾರಿಯನ್ನು ಅರ್ಧಕ್ಕೆ  ನಿಲ್ಲಿಸಲಾಗಲ್ಲ. ಆದ್ರೆ ಬಿಡಬ್ಲುಡಿ ಇಲಾಖೆಯ ಅಧಿಕಾರಿಗಳೇ ಬಂದು ಇದನ್ನು ಪರೀಕ್ಷೆ ಮಾಡ್ಲಿ . ಈ ವ್ಯಾಜ್ಯ ಬಗೆಹರಿಸಲಿ ಅಂದಿದ್ದಾರೆ.

 

Karnataka Budget 2023: ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರು. ವಿಶೇಷ ಪ್ಯಾಕೇಜ್‌!

ಈ ರಸ್ತೆ, ಸುತ್ತಮುತ್ತಲಿನ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ತೆರೆದು ನೋಡಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಡಬೇಕು ಸ್ಥಳೀಯರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios