ಪೌರಕಾರ್ಮಿಕರ ನೇಮಕಾತಿಯಲ್ಲಿ ಅಕ್ರಮ: ಪಪಂ ಕಚೇರಿ ಮುತ್ತಿಗೆ
ತಾಲೂಕಿನ ಮಂಕಿ ಪಪಂ ಪೌರ ಕಾರ್ಮಿಕ- ಸ್ಥಳೀಯ ವೃಂದದ ಹುದ್ದೆ ನೇಮಕಾತಿ ಪ್ರಕ್ರಿಯೆ ಅಸಮರ್ಪಕವಾಗಿ ನಡೆದಿದ್ದು, ಜೊತೆಗೆ ರಾಜಕೀಯ ಹಸ್ತಕ್ಷೇಪ ಇದೆ ಎಂದು ಸಾರ್ವಜನಿಕರು ಆರೋಪಿಸಿ ಮಂಗಳವಾರ ಪಪಂ. ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.
ಹೊನ್ನಾವರ (ಫೆ.22) : ತಾಲೂಕಿನ ಮಂಕಿ ಪಪಂ ಪೌರ ಕಾರ್ಮಿಕ- ಸ್ಥಳೀಯ ವೃಂದದ ಹುದ್ದೆ ನೇಮಕಾತಿ ಪ್ರಕ್ರಿಯೆ ಅಸಮರ್ಪಕವಾಗಿ ನಡೆದಿದ್ದು, ಜೊತೆಗೆ ರಾಜಕೀಯ ಹಸ್ತಕ್ಷೇಪ ಇದೆ ಎಂದು ಸಾರ್ವಜನಿಕರು ಆರೋಪಿಸಿ ಮಂಗಳವಾರ ಪಪಂ. ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.
ಶಾಸಕ ಸುನೀಲ ನಾಯ್ಕ(Sunil naik) ಅಧಿಕಾರಿಗಳ ಮೂಲಕ ಹಸ್ತಕ್ಷೇಪ ನಡೆಸಿ ತಮ್ಮ ಬೆಂಬಲರಿಗೆ ಈ ಹುದ್ದೆ ದೊರಕಿಸಲು ಸೂಕ್ತ ರೀತಿಯಲ್ಲಿ ಮಾಹಿತಿ ನೀಡದೇ ನೇಮಕಾತಿ ಮಾಡಿಸಿದ್ದಾರೆ. ಇರುವ 29 ಅರ್ಜಿಗೆ 34 ಅರ್ಜಿ ಮಾತ್ರ ಸ್ವೀಕರಿಸಿ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಈ ನೇಮಕವನ್ನು ಕೂಡಲೇ ರದ್ದುಪಡಿಸಿ ಹೊಸದಾಗಿ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಸಾರ್ವಜನಿಕರು ಬಿಗಿಪಟ್ಟು ಹಿಡಿದರು.
Crab Farming: ಏಡಿ ಕೃಷಿ: ವಿನೂತನ ಪ್ರಯೋಗ ಮಾಡಿ ಗೆದ್ದ ಕಲಘಟಗಿ ರೈತ!
ಪ.ಪಂ. ಅಧಿಕಾರಿಗಳು ಸಾರ್ವಜನಿಕರಿಗೆ ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ಮಾಡುವ ಜೊತೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಅಧಿಕಾರಿಗಳೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನುಕುನುಗ್ಗಲು ನಡೆದು ಅಧಿಕಾರಿಗಳು, ಶಾಸಕರು, ಸರ್ಕಾರದ, ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದುವರೆಗೂ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯದ ಹಿನ್ನೆಲೆ ಸದಸ್ಯರ ಆಯ್ಕೆ ಆಗಿಲ್ಲ. ಸ್ಥಳಿಯ ಶಾಸಕರಿಗೆ ವಿಶೇಷ ಅಧಿಕಾರ ಇದೆ. ಮನೆ ಹಂಚಿಕೆ, ಉದ್ಯೋಗ ನೇಮಕಾತಿ ವಿವಿಧ ಸೌಲಭ್ಯ ಹಂಚಿಕೆಯಲ್ಲಿ ಭೃಷ್ಟಾಚಾರ ನಡೆದಿದೆ. ಸಾರ್ವಜನಿಕರ ಕುಂದು ಕೊರತೆ ಗಮನಿಸುವ ಗೋಜಿಗೆ ಹೋಗದೆ ಕೆಲ ಪ್ರಭಾವಿ ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುವ ಜೊತೆ ಶಾಸಕರ ಬೆಂಬಲಿಗರಿಗೆ ಅನೂಕೂಲ ಮಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಈ ಬಗ್ಗೆ ಸಷ್ಟನೆ ನೀಡಲು ಮುಖ್ಯಾಧಿಕಾರಿ ಅಜಯ್ ಭಂಡಾರಕರ್ ಮುಂದಾಗುತ್ತಿದ್ದಂತೆ ಜನತೆ ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಾ ನಾಯ್ಕ ಮಾತನಾಡಿ, 29 ಅರ್ಜಿ ಪೌರಕಾರ್ಮಿಕರ ನೇಮಕ ಆದವರು ಹಾಗೂ ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ಅಧಿಕಾರಿಗಳು ಕೂಡಲೇ ನೇಮಕವನ್ನು ರದ್ದುಪಡಿಸಿ ಹೊಸದಾಗಿ ಅರ್ಜಿ ಆಹ್ವಾನಿಸಬೇಕು. ಪಪಂಗೆ ಸರಿಯಾದ ಸಿಬ್ಬಂದಿ ಇಲ್ಲ. ಸೂಕ್ತ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಗೌಡ, ಗೋವಿಂದ ನಾಯ್ಕ, ಅಣ್ಣಪ್ಪ ನಾಯ್ಕ, ರಾಜು ನಾಯ್ಕ ಮಂಕಿ, ಗಜಾನನ ನಾಯ್ಕ, ಅಣ್ಣಯ್ಯ ನಾಯ್ಕ, ಬಿಜೆಪಿ ಮುಖಂಡರಾದ ಸುಬ್ರಾಯ ನಾಯ್ಕ, ಆನಂದು ನಾಯ್ಕ, ಶ್ರೀಧರ ನಾಯ್ಕ, ಗಣಪತಿ ಗೌಡ, ಸಂಘಟನೆಯ ಮುಖಂಡರಾದ ಮಂಗಲದಾಸ ನಾಯ್ಕ, ಗಿರೀಶನಾಯ್ಕ ಹಡಿಕಲ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.
ಡಿವೈಎಸ್ಪಿ ಶ್ರೀಕಾಂತ ಕೆ. ಮತ್ತು ಭಟ್ಕಳ ಹಾಗೂ ಹೊನ್ನಾವರ ಸಿಪಿಐ, ಮಂಕಿ ಪಿಎಸೈ ಹಾಗೂ ಸಿಬ್ಬಂದಿಗಳು ಪ್ರತಿಭಟನಾನಿರತರನ್ನು ಮನವೊಲಿಸುವ ಮೂಲಕ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸುವ ಮೂಲಕ ಪರಿಸ್ಥಿತಿ ಸಹಜ ಸ್ಥಿತಿಗೆ ತರುವಲ್ಲಿ ಯಶ್ವಸಿಯಾದರು.
ಹುಬ್ಬಳ್ಳಿ - ಧಾರವಾಡ ಪಾಲಿಕೆಗೆ ಸರ್ಕಾರದಿಂದ ಬರಬೇಕಿದೆ 250 ಕೋಟಿಗೂ ಅಧಿಕ!
ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯುವುದಾಗಲಿ, ಹೊಸ ಆದೇಶಮಾಡುವುದು ನಮ್ಮ ಹಂತದಲ್ಲಿ ಇಲ್ಲ. ಯೋಜನೆಯನ್ನು ಅನುಷ್ಠಾನ ವಿಷಯದ ಗೊಂದಲದ ಕುರಿತು ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಲಾಗಿದೆ. ಕಚೇರಿ ಸಮಯದಲ್ಲಿ ಸರ್ಕಾರದ ಯೋಜನೆಯ ಮಾಹಿತಿ ಪಡೆದು ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳಬೇಕು. ಈಗ ಉದ್ಬವಿಸಿರುವ ನೇಮಕಾತಿ ಗೊಂದಲದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು
- ಉಷಾ ಪಾವಸ್ಕರ್, ಆಡಳಿತಾಧಿಕಾರಿ
ಸರ್ಕಾರದ ಸೌಲಭ್ಯ ಪರಿಶಿಷ್ಟಜಾತಿ ಸಮುದಾಯದವರಿಗೆ ಸರಿಯಾಗಿ ದೊರೆಯುತ್ತಿಲ್ಲ. ಇಲ್ಲಿರುವ ಅಧಿಕಾರಿಗಳ ಕಾರ್ಯದ ಮೇಲೆ ನಮಗೆ ಅನುಮಾನ ಕಾಡುತ್ತಿದೆ. ಸರ್ಕಾರದಿಂದ ಬರುವ ಎಸ್.ಸಿ ಅನುದಾನ ಎಲ್ಲಿ ಕಾಮಗಾರಿ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. ಈ ಎಲ್ಲ ಬೆಳವಣೆಗೆ ಭ್ರಷ್ಟರಾಜಕಾರಣಿಗಳ ಕೈವಾಡವಿದೆ. ಅವರ ಕೃಪಾಕಟಾಕ್ಷದಿಂದ ಈ ರೀತಿ ತಾರತಮ್ಯ ನಡೆಯುತ್ತಿದೆ
- ವಸಂತ ಹಳ್ಳೇರ, ಸ್ಥಳೀಯರು