Asianet Suvarna News Asianet Suvarna News

Vijayapura: ಜಾಂಡೀಸ್‌ನಿಂದ ಐಆರ್‌ಬಿ ಪೋಲೀಸ ಮುಖ್ಯಪೇದೆ ಸಾವು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಭಾರತೀಯ ರಿಸರ್ವ್ ಬೆಟಾಲಿಯನ್ ವಿಜಯಪುರದಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ ರೋಹಿದಾಸ ಕೊಡತೆ ಇವರು ಕಾಮಾಲೆ ಕಾಯಿಲೆಯಿಂದ ಬಳಲಿ, ಚಿಕಿತ್ಸೆ ಫಲಿಸದೇ  ನಿಧನರಾಗಿದ್ದಾರೆ. ಭಾರತೀಯ ರಿಸರ್ವ್ ಬೆಟಾಲಿಯನ್ ನಲ್ಲಿ 16 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

IRB police chief dies of jaundice Vijayapura gow
Author
First Published Dec 16, 2022, 9:49 PM IST

ವಿಜಯಪುರ (ಡಿ.16) : ಭಾರತೀಯ ರಿಸರ್ವ್ ಬೆಟಾಲಿಯನ್ ವಿಜಯಪುರದಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ ರೋಹಿದಾಸ. ಕೊಡತೆ(38) ಇವರು ಕಾಮಾಲೆ ಕಾಯಿಲೆಯಿಂದ ಬಳಲಿ, ಚಿಕಿತ್ಸೆ ಫಲಿಸದೇ ಗುರುವಾರ ನಿಧನರಾಗಿದ್ದಾರೆ. ಮೃತ ಐ.ಆರ್.ಬಿ ಪೊಲೀಸ್ ಸುರೇಶ ಕೊಡತೆ ಇವರು ಚಡಚಣ ತಾಲೂಕಿನ ಗಡಿಭಾಗದ ದುಳಖೇಡ ಗ್ರಾಮದ ರೋಹಿದಾಸ ಹಾಗೂ ಪದ್ಮಾವತಿ ಕೊಡತೆ ದಂಪತಿಗಳ ಪುತ್ರ ಸುರೇಶ. 2008 ರಿಂದ ಭಾರತೀಯ ರಿಸರ್ವ್ ಬೆಟಾಲಿಯನ್ ನಲ್ಲಿ 16 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ ಪೂರ್ಣಿಮಾ ಹಾಗೂ 12 ವರ್ಷದ ಮಗ, 8 ವರ್ಷ ಮಗಳು ಇದ್ದು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ‌!
ಸ್ವಗ್ರಾಮ ದುಳಖೇಡದಲ್ಲಿ ಶುಕ್ರವಾರ ಐ.ಆರ್.ಬಿ ವಿಜಯಪುರ ಹಾಗೂ ಝಳಕಿ ಪೋಲಿಸ್ ಠಾಣೆಯಿಂದ ಅಗಲಿದ ಮುಖ್ಯಪೇದೆ ಸುರೇಶ ಕೊಡತೆಗೆ ಸರ್ಕಾರಿ ಸಕಲ್ ಗೌರವ ವಂದನೆ ಸಲ್ಲಿಸಿ, ಬಳಿಕ ಹಿಂದೂ ಧರ್ಮದ ಹರಳಯ್ಯ ಸಮುದಾಯದ ವಿಧಿ-ವಿಧಾನಗಳೊಂದಿಗೆ ರುದ್ರುಭೂಮಿಯಲ್ಲಿ ಅಂತ್ಯಕ್ರಿಯೆ ಕುಟುಂಬಸ್ಥರು ನೇರವೇರಿಸಿದರು. ಈ ವೇಳೆ ಕುಟುಂಬಸ್ಥರು, ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನೂರಾರು ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಇದ್ದರು.

ಬೆಂಗಳೂರಿನಲ್ಲಿ ಮೈ ಥರಗುಟ್ಟುವ ಚಳಿ, ಉಸಿರಾಟದ ಸಮಸ್ಯೆ ಕಾಡುತ್ತೆ ಎಚ್ಚರ

10 ಮಂದಿ ರೋಗಿಗಳ ಚಿಕಿತ್ಸೆಗಾಗಿ . 19.31 ಲಕ್ಷ ಬಿಡುಗಡೆ
ಮೈಸೂರು: ವಿವಿಧ ಕಾಯಿಲೆಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಮಂದಿ ರೋಗಿಗಳ ಚಿಕಿತ್ಸೆಗಾಗಿ ಸಂಸದ ಪ್ರತಾಪ್‌ ಸಿಂಹ ಅವರ ಶಿಫಾರಸಿನ ಮೇರೆಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ . 19,31,815 ಬಿಡುಗಡೆ ಆಗಿದೆ.

ವಿವಿಧ ಕಾಯಿಲೆಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಣಕಾಸಿನ ಆಭಾವದಿಂದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಸಂಸದ ಪ್ರತಾಪ್‌ ಸಿಂಹ ಅವರಲ್ಲಿ ಮೊರೆಹೊದರು. ಇದಕ್ಕೆ ಕೂಡಲೆ ಸ್ಪಂದಿಸಿದ ಸಂಸದರು, ಅವರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಭರಿಸುವ ವ್ಯವಸ್ಥೆಯನ್ನು ಮಾಡಿದರು.

Shivamogga: ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ಉಲ್ಬಣ

ಸಂಸದರ ಶಿಫಾರಸಿನ ಮೇರೆಗೆ 10 ರೋಗಿಗಳ ಚಿಕಿತ್ಸೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಯಡಿ ಬಿಡುಗಡೆಯಾದ . 19,31,815 ಅನುದಾನದ ಅನುಮೋದನೆ ಪ್ರತಿಯನ್ನು ಸಂಸದ ಪ್ರತಾಪ್‌ ಸಿಂಹ ಅವರು ರೋಗಿಯ ಮನೆಯವರಿಗೆ ನೀಡಿ, ಆನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬ ರೋಗಿಗಳಿಗೆ ನೇರವಾದರು ಹಾಗೂ ಚಿಕಿತ್ಸೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

Follow Us:
Download App:
  • android
  • ios