ಕನ್ನಡಿಗರ ಮನ ಗೆದ್ದ ಐಪಿಎಸ್‌ ಅಧಿಕಾರಿ ಇಶಾ ಪಂತ್‌| ಕನ್ನಡ ಭಾಷೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಶಾ ಪಂತ್‌|  ಕನ್ನಡ ಬಹಳ ಚಂದದ ಭಾಷೆ, ನಾನು ಕನ್ನಡ ಭಾಷೆ ಕಲಿತಿದ್ದೇನೆ, ನೀವೂ ಕೂಡ ಈ ಭಾಷೆ ಕಲಿಯಿರಿ ಎಂದ ಇಶಾ ಪಂತ್‌|

ಬೆಂಗಳೂರು(ಜ.25): ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಕೆಲವು ದಿನಗಳ ಹಿಂದೆ ಕನ್ನಡ ಚಿತ್ರದ ಗೀತೆ ಹಾಡುವ ಮೂಲಕ ಸುದ್ದಿಯಾಗಿದ್ದರು. ಕನ್ನಡ ಚಿತ್ರರಂಗದ ಮೇರು ನಟ ಶಂಕರ್‌ನಾಗ್‌ ಅಭಿನಯದ ಗೀತಾ ಚಿತ್ರದ ಜೊತೆಯಲಿ ಜೊತೆ ಜೊತೆಯಲಿ ಗೀತೆ ಹಾಡುವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. 

Scroll to load tweet…

ಇದೀಗ ಇಶಾ ಪಂತ್ ಅವರು ಮತ್ತೊಮ್ಮೆ ಕನ್ನಡ ಭಾಷೆಯ ಬಗ್ಗೆ ಮಾತನಾಡುವ ಮೂಲಕ ಕನ್ನಡ ನಾಡಿನ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನು ಮೂಲತಃ ಕರ್ನಾಟಕದವರು ಅಲ್ಲ, ಆದರೆ ನಾನು ಕನ್ನಡ ಭಾಷೆಯನ್ನ ಕಲಿತಿದ್ದೇನೆ. ಕನ್ನಡ ಬಹಳ ಚಂದದ ಭಾಷೆಯಾಗಿದೆ. ನಾನು ಕನ್ನಡ ಭಾಷೆ ಕಲಿತಿದ್ದೇನೆ, ನೀವೂ ಕೂಡ ಈ ಭಾಷೆಯನ್ನ ಕಲಿಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Scroll to load tweet…

ಮಧ್ಯಪ್ರದೇಶ ಮೂಲದ ಇಶಾ ಪಂತ್

2011 ನೇ ಬ್ಯಾಚ್‌ನ IPS ಅಧಿಕಾರಿಯಾಗಿರುವ ಇಶಾ ಪಂತ್ ಅವರು 2016 ರಲ್ಲಿ ಕರ್ನಾಟಕಕ್ಕೆ ಬಂದಿದ್ದಾರೆ. ಬಂದು ನಾಲ್ಕೇ ವರ್ಷದಲ್ಲಿಯೇ ಕನ್ನಡ ಕಲಿತಿದ್ದಾರೆ.ಅಲ್ಲದೆ ಕನ್ನಡಿಗನನ್ನ ಮದುವೆಯಾಗಿದ್ದಾರೆ. ಹೀಗಾಗಿ ಕನ್ನಡ ಭಾಷೆಯನ್ನ ಬಹಳ ಇಷ್ಟ ಪಟ್ಟು ಕಲಿತಿದ್ದಾರೆ. ಜೊತೆ ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವುದರಿಂದ ಕನ್ನಡ ಭಾಷೆಯನ್ನ ಕಲಿತಿದ್ದಾರೆ. 

ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ

ಕನ್ನಡಿಗ ಅನಿರುದ್ಧ್ ಶ್ರವಣ್‌ರನ್ನ ವರಿಸಿದ್ದ ಇಶಾ ಪಂತ್‌

ಐಎಎಸ್‌ ಅಧಿಕಾರಿ ಅನಿರುದ್ಧ್ ಶ್ರವಣ್‌ ಅವರನ್ನ ಇಶಾ ಪಂತ್ ಅವರು ಮದುವೆಯಾಗಿದ್ದಾರೆ. ಇಶಾ ಪಂತ್‌ ಮದುವೆಯಾದ ಬಳಿಕ ಹಾಗೂ ಕರ್ನಾಟಕಕ್ಕೆ ಕರ್ತವ್ಯಕ್ಕೆ ನಿಯೋಜನೆಯಾದಾಗಿನಿಂದ ಕನ್ನಡ ಭಾಷೆ ಕಲಿತಿದ್ದಾರೆ. ಇನ್ನು ಐಎಎಸ್‌ ಅಧಿಕಾರಿ ಅನಿರುದ್ಧ್ ಶ್ರವಣ್‌ 'ಜನರ ಅಧಿಕಾರಿ' ಎಂದೇ ಹೆಸರು ವಾಸಿಯಾಗಿದ್ದಾರೆ. 

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಕನ್ನಡ ಚಿತ್ರಗಳಲ್ಲಿ ಸುಂದರವಾದ ಸಂಗೀತ ಮಾತ್ರವಲ್ಲದೆ ಭಾಷೆಯಲ್ಲಿ ಜೀವಂತಿಕೆಯ ಪ್ರಜ್ಞೆಯೂ ಇದೆ ಎಂದು ಹೇಳಿಕೊಂಡಿದ್ದರು.ಈ ಬಾರಿ ಇಶಾ ಪಂತ್ ಅವರು ಕನ್ನಡ ಭಾಷೆಯ ಬಗ್ಗೆ ಮಾತನಾಡುವ ಮೂಲಕ ಕರುನಾಡಿದ ಜನರ ಹೈದಯಕ್ಕೆ ಲಗ್ಗೆ ಇಟ್ಟಿದ್ದಾರೆ.