ದತ್ತಾಂಶ ವಿಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ದತ್ತಾಂಶ ವಿಜ್ಞಾನ (ಡಾಟ ಸೈನ್ಸ್) ಮತ್ತು ಅಂತರ್ಜಾಲ ಭದ್ರತೆ (ನೆಟ್‌ವರ್ಕ್ ಸೆಕ್ಯೂರಿಟಿ) ವಿಷಯ ಕುರಿತ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ತಿಪಟೂರು : ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ದತ್ತಾಂಶ ವಿಜ್ಞಾನ (ಡಾಟ ಸೈನ್ಸ್) ಮತ್ತು ಅಂತರ್ಜಾಲ ಭದ್ರತೆ (ನೆಟ್‌ವರ್ಕ್ ಸೆಕ್ಯೂರಿಟಿ) ವಿಷಯ ಕುರಿತ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ ವಿಷಯಗಳ ಅಂತಾರಾಷ್ಟ್ರೀಯ ಮಟ್ಟದ ಪರಿಣಿತರು, ರಾಷ್ಟ್ರೀಯ ಮಟ್ಟದ ತಜ್ಞರು ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ಕಲ್ಪತರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಕಲ್ಪತರು ತಾಂತ್ರಿಕ ಮಹಾವಿದ್ಯಾಲಯವು ಸ್ಥಾಪನೆಯಾದಂದಿನಿಂದ ಇಂದಿನವರೆವಿಗೂ ನಡೆದಿರುವ ವಿವಿಧ ಸಮ್ಮೇಳನಗಳಲ್ಲಿ ಪ್ರಥಮ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವೆಂಬ ಹೆಗ್ಗಳಿಕೆಗೆ ಪಾತ್ರವಾದ ಸಮ್ಮೇಳನವಾಯಿತು.
ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಸ್ಪೆ ೖನ್ ದೇಶದ ಡಾ.ಮೈಗಲ್ ಗಾರ್ಸಿಯಾ ಟಾರಸ್, ದಕ್ಷಿಣ ಕೊರಿಯಾ ದೇಶದ ಡಾ.ಕಲ್ಯಾಣ ಸಿ.ವೇಲುವೋಲುರವರು ರೋಬೋಟಿಕ್ ಇನ್ ಸರ್ಜರಿ ಎಂಬ ವಿಷಯ ಗಳ ಕುರಿತು ವಿದ್ವತ್‌ಪೂರ್ಣ ಮಾಹಿತಿಗಳನ್ನು ಹಂಚಿಕೊಂಡರು. ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ತಾಲೂಕು ಕೇಂದ್ರವೊಂದರ ತಾಂತ್ರಿಕ ವಿದ್ಯಾಲಯದಲ್ಲಿ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸಮ್ಮೇ ಳನದ ಯಶಸ್ಸಿಗೆ ಶುಭ ಕೋರಿದರು.
ಸಿಎಸ್‌ಐಆರ್-ಎನ್‌ಎಎಲ್ ಬೆಂಗಳೂರಿನ ತಾಂತ್ರಿಕ ಅಧಿಕಾರಿ ಡಾ.ಅಭಿನ್ ಜಾಜ್‌ರ್ ಮತ್ತು ಸಮ್ಮೇಳನಕ್ಕೆ ಸಹಯೋಗ ನೀಡಿದ ಐಇಇಇ ಸ್ಯಾಕ್ ಕೋ ಛೇರ್ ಬೆಂಗಳೂರಿನ ಡಾ.ಬಿ.ಡಿ.ಪರಮೇಶಾಚಾರಿ ಹಾಗೂ ಎಸ್‌ಕೆಐಟಿ ತಾಂತ್ರಿಕ ಮಹಾ ವಿದ್ಯಾಲಯ ಬೆಂಗಳೂರಿನ ಡಾ.ಕೆ.ಎಲ್.ಹೇಮಲತಾ ಭಾಗವಹಿಸಿದ್ದರು.
ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿ ಇಂತಹ ಸಮ್ಮೇಳನಗಳ ಆಯೋಜನೆಗೆ ನಮ್ಮ ಸಂಸ್ಥೆಯು ಎಂದಿಗೂ ಸಹಕಾರ ನೀಡಲಿದ್ದು, ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸಲಿದೆ ಎಂದರು.
ಕೆವಿಎಸ್ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್ ಮತ್ತು ಬಿ.ಎಸ್.ಉಮೇಶ್‌ರವರು ನಮ್ಮ ತಾಂತ್ರಿಕ ವಿದ್ಯಾಲಯದ ವತಿಯಿಂದ ಇಂತಹ ಸಮ್ಮೇಳನವನ್ನು ಆಯೋಜಿಸುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್ ಮಾತನಾಡಿ, ನಮ್ಮ ಸಂಸ್ಥೆಯು ಇಂತಹ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜನೆಗೊಂಡಿರುವುದು ಕಲ್ಪತರು ನಾಡಿಗೆ ಹಿರಿಮೆ ತಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುತ್ತಿರುವ ಇಲ್ಲಿ ತಾಂತ್ರಿಕತೆ, ಸಂಶೋಧನೆಗೆ ಹೆಚ್ಚು ಒತ್ತು ನೀಡಿ ಉದ್ಯೋಗವಕಾಶಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ, ತಾಂತ್ರಿಕ ವಿದ್ಯಾಲಯಗಳ ಮೂಲಕ ಹೆಚ್ಚು ಹೆಚ್ಚು ವೈಜ್ಞಾನಿಕ ಲೇಖನಗಳು ಮತ್ತು ಉಪನ್ಯಾಸಗಳು ನಡೆಯುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವೃತ್ತಿದಕ್ಷತೆಗೆ ಸಹಕಾರಿಯಾಗಲಿದೆ ಎಂದರು.
ಉಪಾಧ್ಯಕ್ಷರಾದ ಜಿ.ಪಿ.ದೀಪಕ್, ಟಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಟಿ.ಯು. ಜಗದೀಶ್ ಮೂರ್ತಿ, ಹೆಚ್.ಜಿ.ಸುಧಾಕರ್ ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು. ಕೆಐಟಿಯ ಎಲ್ಲಾ ವಿಭಾಗ ಗಳ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ಕೆಐಟಿ ಪ್ರಾಂಶುಪಾಲರಾದ ಡಾ. ಜಿ.ಡಿ.ಗುರುಮೂರ್ತಿ, ಸಿಎಸ್‌ಇ ವಿಭಾಗದ ಮುಖ್ಯಸ್ಥ ಪೊ›.ಎಂ.ಎಸ್.ಶಶಿಧರ, ಸಹ ಪ್ರಾಧ್ಯಾಪಕ ಡಾ.ಎಂ.ಎಲ್.ರವಿಪ್ರಕಾಶ್ ವಹಿಸಿಕೊಂಡಿದ್ದರು. ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಹೊರದೇಶಗಳ ಮತ್ತು ದೇಶೀಯ ತಾಂತ್ರಿಕ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿ ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ ವಿಷಯಗಳ ಕುರಿತಾದ ವಿದ್ವತ್ ವಿಚಾರ ಮಂಡನೆಗಳ ಪ್ರಯೋಜನ ಪಡೆದುಕೊಂಡರು.