ಅಂತರಾಷ್ಟ್ರೀಯ ಕೋಕೋ ಟೆಕ್ ಸಮಾವೇಶ, ರಾಜ್ಯ ಪ್ರತಿನಿಧಿಯಾಗಿ ಮುದ್ದು ಕುಮಾರ್ ಭಾಗಿ

ಕೃಷಿ ಸಂಸ್ಥೆ ವತಿಯಿಂದ  ನವಂಬರ್ 7 ರಿಂದ 11ರ ವರೆಗೆ ಮಲೇಷಿಯಾ ದೇಶದ ಕೋಲಾಲಂಪುರ ನಗರದಲ್ಲಿ ಆಯೋಜಿಸಲಾಗಿದ್ದ 50 ನೇ ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನ ದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಸಿ ಟಿ ಮುದ್ದುಕುಮಾರ್ ಮತ್ತು ತಂಡ ಭಾಗವಹಿಸಿತ್ತು.  

International Cocoa Tech Conference Muddu Kumar participated as karnataka  Representative gow

ವರದಿ : ಮಹಂತೇಶ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು (ನ.14): ಅಂತರಾಷ್ಟ್ರೀಯ ಕೊಕೊನಟ್ ಕಮ್ಯೂನಿಟಿ (ಕೃಷಿ ಸಂಸ್ಥೆ) ವತಿಯಿಂದ  ನವಂಬರ್ 7 ರಿಂದ 11ರ ವರೆಗೆ ಮಲೇಷಿಯಾ ದೇಶದ ಕೋಲಾಲಂಪುರ ನಗರದಲ್ಲಿ ಆಯೋಜಿಸಲಾಗಿದ್ದ 50 ನೇ ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನ ದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಸಿ ಟಿ ಮುದ್ದುಕುಮಾರ್ ಮತ್ತು ತಂಡ ಭಾಗವಹಿಸಿತ್ತು.  ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ದೊಡ್ಡಮನಿ, ತಾಂತ್ರಿಕ ಕೋಶ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ  ಜಂಟಿ ನಿರ್ದೇಶಕ ಜೈ ಕುಮಾರ್  ತಂಡದಲ್ಲಿದ್ದರು. ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನವು ಪ್ರತಿ 2 ವರ್ಷಕ್ಕೊಮ್ಮೆ ಜರುಗುವ ಸಮಾವೇಶವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಏಷ್ಯ ಖಂಡದ 8 ದೇಶಗಳು ಒಳಗೊಂಡಂತೆ ಒಟ್ಟು 20 ತೆಂಗು ಬೆಳೆಯುವ ದೇಶಗಳು ಈ ಅಂತರಾಷ್ಟ್ರೀಯ ಒಕ್ಕೂಟಕ್ಕೆ ಒಳಪಟ್ಟಿದ್ದು, ಈ ಎಲ್ಲಾ ದೇಶಗಳು ಸಮಾವೇಶದಲ್ಲಿ ಭಾಗವಹಿಸಿವೆ.

ಈ ಸಮಾವೇಶದಲ್ಲಿ ತೆಂಗು ಬೆಳೆಯುವ ರೈತರಿಗೆ ಮತ್ತು ತೆಂಗಿನ ಕೈಗಾರಿಕೊದ್ಯಮಿಗಳಿಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅಗತ್ಯ ಮಾಹಿತಿ ತಾಂತ್ರಿಕ ಸಲಹೆಗಳು ಪ್ರಾತ್ಯಕ್ಷಿಕೆ ಒಳಗೊಂಡ ತರಬೇತಿಯನ್ನುನೀಡಲಾಗಿದೆ.  ಈ ಸಮಾವೇಶದಲ್ಲಿ ವಿಜ್ಞಾನಿ, ಸಂಶೋಧಕರಿಂದ ತೆಂಗು ಬೆಳೆ ಸಮಗ್ರ ಅಭಿವೃದ್ಧಿ, ರೋಗನಿವಾರಣೆ ಕುರಿತ ವರದಿ ಮಂಡನೆಯಾಗಿದೆ, ಅಂತಿಮವಾಗಿ ಹಲವು ಉಪಯುಕ್ತ ನಿರ್ಣಯಗಳು ಮತ್ತು ಶಿಫಾರಸ್ಸುಗಳೊಂದಿಗೆ ಸಮಾವೇಶ ಮುಕ್ತಾಯಗೊಂಡಿದೆ. ಈ ಸಮಾವೇಶದಲ್ಲಿ  ತಾಂತ್ರಿಕ ಕೋಶ ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ಇತರೆ ದೇಶಗಳಿಂದ  ನೂರಾರು ಸಂಖ್ಯೆಯಲ್ಲಿ ಅಧಿಕಾರಿಗಳು ವಿಜ್ಞಾನಿ ಗಳು ಪ್ರದರ್ಶಕರು ಭಾಗವಹಿಸಿದ್ದರು.

ನರೇಗಾ ಕೂಲಿ ಹೆಚ್ಚಿಸದಿದ್ದರೆ ಬಿಜೆಪಿ ಸಮಾಧಿ: ಬಿ.ವೆಂಕಟ್‌

ಮಡಿಕೇರಿಯಲ್ಲಿ 20ರಂದು ಪರಿಸರ ಸಮಾವೇಶ: ಯುನಿವರ್ಸಲ್‌ ನಾಲೆಡ್ಜ್‌ ಟ್ರಸ್ಟ್‌ ಇದರ ವತಿಯಿಂದ ನ.20ರಂದು ಮಡಿಕೇರಿಯಲ್ಲಿ ಪರಿಸರ ಸಮಾವೇಶ ಆಯೋಜಿಸಿದೆ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ತನಕ ಸಮಾವೇಶ ನಡೆಯಲಿದೆ. ಸಂವಾದಾತ್ಮಕ ಅವಧಿಗಳು, ಮಾತುಕತೆಗಳು, ಯೋಚನೆಗಳು, ಹಂಚಿಕೆ ಮತ್ತು ಪ್ರಶಸ್ತಿಗಳನ್ನು ಒಳಗೊಂಡಿದೆ ಎಂದು ಸಂಯೋಜಕಿ ಶಮ್ಮಿ ಶಿರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Mandya : ಯಾಂತ್ರೀಕರಣದಿಂದ ಕೃಷಿಕರ ಬದುಕು ಅತಂತ್ರ

ಡೇವಿಡ್‌ ಕುಮಾರ್‌ ಕೆರೆ ಪುನರುಜ್ಜೀವನ, ಸಮ್ಮಿಲನ್‌ ಶೆಟ್ಟಿಚಿಟ್ಟೆಗಳ ಜೀವನ, ದಿವ್ಯಾ ಹೆಗ್ಡೆ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ, ರಂಜನ್‌ ಬೆಳ್ಳಾರಪಾಡಿ ತ್ಯಾಜ್ಯ ನಿರ್ವಹಣೆ ಮತ್ತು ನಗರ ಅರಣ್ಯ, ಮಧುಚಂದನ್‌ ಸಾವಯವ ಕೃಷಿ, ಡಾ.ಜಯಕರ್‌ ಭಂಡಾರಿ ಮ್ಯಾಂಗ್ರೋವ್‌್ಸ ಸಂರಕ್ಷಣೆ, ಡಾ.ಶಿವಕುಮಾರ್‌ ಮಗಧ ಸಾಗರ ಮತ್ತು ಜಲವಾಸಿ ಆವಾಸಸ್ಥಾನಗಳು, ನಿತಿನ್‌ ವಾಜ್‌ ಸುಸ್ಥಿರ ಪರಿಸರ ಸ್ನೇಹಿ ನಿರ್ಮಾಣ, ರಾಜೇಂದ್ರ ಕಲ್ಬಾವಿ, ರೋಹನ್‌ ಶಿರಿ ಆಧ್ಯಾತ್ಮಿಕತೆ ಮತ್ತು ಪ್ರಕೃತಿ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದವರು ಹೇಳಿದರು. ಟ್ರಸ್ಟ್‌ ಸ್ಥಾಪಕ ರೋಹಣ್‌ ಶಿರಿ, ಖಜಾಂಚಿ ಗಣೇಶ್‌ ಪ್ರಸಾದ್‌, ತಿಮ್ಮಯ್ಯ, ವಿದ್ಯಾ ಶಂಕರ್‌ ಇದ್ದರು.

Latest Videos
Follow Us:
Download App:
  • android
  • ios