ಮಂಗಳೂರು(ಜ.23): ಕೆಲಸ ನೀಡೋ ವಿಚಾರದಲ್ಲಿ ಭಾರೀ ಕಿರುಕುಳ ಕೊಟ್ಟಿದ್ದಾರೆ. ಹಾಗಾಗಿ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ಗಳೇ ನನ್ನ ಟಾರ್ಗೆಟ್‌ ಎಂದು ಮಂಗಳೂರಿನ ಬಾಂಬರ್ ಆದಿತ್ಯ ರಾವ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಕಾರಣ ಬಯಲಾಗಿದ್ದು ಪೊಲೀಸ್ ತನಿಖೆ ವೇಳೆ ಯಾಕಾಗಿ ಬಾಂಬ್ ಇಟ್ಟೆ ಎಂಬುದನ್ನು ಆದಿತ್ಯರಾವ್ ಬಾಯ್ಬಿಟ್ಟಿದ್ದಾನೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೇ ಈತನ ಟಾರ್ಗೆಟ್ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ರಾತ್ರಿ 2 ಗಂಟೆಯ ತನಕ ನಡೆದಿದ್ದ ಆದಿತ್ಯ ರಾವ್ ವಿಚಾರಣೆ

ಕೆಲಸ ನೀಡುವ ವಿಚಾರದಲ್ಲಿ ನನಗೆ ಭಾರೀ ಕಿರುಕುಳ ಕೊಟ್ಟಿದ್ದಾರೆ ಎಂದು ಆದಿತ್ಯರಾವ್ ಬಹಳ ಬೇಜಾರಿನಲ್ಲಿ ಹೇಳಿಕೊಂಡಿದ್ದಾನೆ. ಹಾಗಾಗಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕಿರುಕುಳ ನೀಡಬೇಕೆಂದು ಬಾಂಬ್ ಇಟ್ಟಿರೋದಾಗಿ ಹೇಳಿದ್ದಾನೆ.

ನನಗೆ ಕಿರುಕುಳ ಕೊಟ್ಟವರಿಗೆಲ್ಲಾ ತೊಂದರೆ ಕೊಡೋ ಉದ್ದೇಶದಿಂದ ಬಾಂಬ್ ಇಟ್ಟಿದ್ದೇನೆ. ಒಂದೇ ಬಾಂಬ್ ತಯಾರು ಮಾಡಿ ತಂದಿದ್ದಾಗಿ ಮಾಹಿತಿ ಆದಿತ್ಯ ರಾವ್ ತಿಳಿಸಿದ್ದಾನೆ.

ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಆದಿತ್ಯ ರಾವ್