Tumakur : 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯ. ಷಿ.ವಿ.ಮಹಲಿಂಗಯ್ಯ

ಜಿಲ್ಲೆಯಲ್ಲಿ 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.

Insurance facility for 2 lakh cows. Shiv Mahalingaiah snr

 , ತುರುವೇಕೆರೆ :  ಜಿಲ್ಲೆಯಲ್ಲಿ 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.

ಮಾದಿಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂಭಾಗ ಹಮ್ಮಿಕೊಂಡಿದ್ದ ರಾಸುಗಳಿಗೆ ವಿಮೆ ಮಾಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ರಾಸುಗಳ ವಿಮೆ ಮಾಡಿಸುವ ಸಲುವಾಗಿ ಹಾಲು ಒಕ್ಕೂಟದಿಂದ ೨೪ ಕೋಟಿ ರು. ಮೀಸಲಿರಿಸಲಾಗಿದೆ. ಪ್ರತಿ ರಾಸುವಿಗೆ ಕನಿಷ್ಠ 10 ಸಾವಿರದಿಂದ 60 ಸಾವಿರ ರು.ವರೆಗೂ ವಿಮೆ ಮಾಡಿಸಲಾಗುತ್ತಿದೆ. ಸರಾಸರಿ 40 ಸಾವಿರ ರು.ವರೆಗೂ ವಿಮೆ ಸೌಲಭ್ಯವಿದೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ೧೩ ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. ಆದರೆ, ಈ ಬಾರಿ ೨೦ ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. ರಾಸುಗಳ ವಿಮೆಯ ಹಣವನ್ನು ರೈತರಿಗೆ ಉಚಿತವಾಗಿ ತಮ್ಮ ಸಂಸ್ಥೆಯಿಂದಲೇ ಮಾಡಿಸಲಾಗುವುದು. ಸರಾಸರಿ ಪ್ರತಿ ರಾಸುವಿಗೆ ೧೮೦೦ ರು. ವಿಮೆ ಹಣ ಕಟ್ಟಬೇಕಾಗುತ್ತದೆ. ಆ ಎಲ್ಲಾ ಹಣವನ್ನು ಹಾಲಿನ ಒಕ್ಕೂಟ, ಟ್ರಸ್ಟ್ ಮತ್ತು ಹಾಲು ಸಹಕಾರ ಸಂಘದ ಮೂಲಕ ಕಟ್ಟಲಾಗುವುದು. ಒಟ್ಟಾರೆ ರೈತರಿಗೆ ಉಚಿತವಾಗಿ ವಿಮೆ ಸೌಲಭ್ಯ ನೀಡಲಾಗುತ್ತಿದೆ ಎಂದು ಸಿ.ವಿ.ಮಹಲಿಂಗಯ್ಯ ತಿಳಿಸಿದರು.

ಖಾಸಗಿಗೆ ಇಲ್ಲ: ಹಾಲು ಒಕ್ಕೂಟಕ್ಕೆ ಯಾರು ಹಾಲು ಸರಬರಾಜು ಮಾಡುತ್ತಿರುವರೋ ಅವರಿಗೆ ಮಾತ್ರ ವಿಮಾ ಸೌಲಭ್ಯವನ್ನು ನೀಡಲಾಗುವುದು. ಕೆಲವರು ಖಾಸಗಿ ಡೈರಿಗೆ ಹಾಲು ಹಾಕುತ್ತಿದ್ದಾರೆ. ಅಂತಹವರಿಗೆ ಈ ವಿಮೆ ಸೌಲಭ್ಯ ನೀಡಲಾಗುವುದಿಲ್ಲ ಎಂದು ಸಿ.ವಿ.ಮಹಲಿಂಗಯ್ಯ ಸ್ವಷ್ಟಪಡಿಸಿದರು.

ಕೆಲವು ರೋಗಗಳ ಕಾರಣ ಹಾಗೂ ಅಕಾಲಿಕ ರಾಸುಗಳು ಮೃತಪಟ್ಟಲ್ಲಿ ಹಾಲು ಒಕ್ಕೂಟದಿಂದ ಬರುವ ಪರಿಹಾರ ಧನ ಪಡೆದು ಬೇರೊಂದು ಹಸು ತಂದು ಆರ್ಥಿಕ ಸಂಕಷ್ಠದಿಂದ ಪಾರಾಗಬೇಕೆಂದು ಮಹಲಿಂಗಯ್ಯ ರೈತಾಪಿಗಳಿಗೆ ಕರೆ ನೀಡಿದರು.

ವಿಸ್ತರಣಾಧಿಕಾರಿಗಳಾದ ಮಂಜುನಾಥ್, ದಿವಾಕರ್, ಮಾದಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕರಾದ ಸುಶೀಲಮ್ಮ, ನೀಲಮ್ಮ, ಕವಿತಾ, ಮಹಾಲಕ್ಷ್ಮಮ್ಮ, ಕೆಂಪದೇವಮ್ಮ, ಕಲಾವತಿ, ರೂಪಶ್ರೀ, ರತ್ನಮ್ಮ, ಜ್ಯೋತಿ, ಗ್ರಾಮದ ಮುಖಂಡರಾದ ಕುಮಾರ್, ಕಾರ್ಯದರ್ಶಿ ವಿಶಾಲಾಕ್ಷಿ, ನರೇಂದ್ರ ಇದ್ದರು.

Latest Videos
Follow Us:
Download App:
  • android
  • ios