Asianet Suvarna News Asianet Suvarna News

ಕೊರೋನಾ ಭೀತಿ: 'ಕೈ ಮುಗಿದು ಅಲ್ಲ, ಕೈ ತೊಳೆದು ಒಳಗೆ ಬಾ'..!

ಚಪ್ಪಲಿ ಹೊರಗೆ ಬಿಟ್ಟು ಬನ್ನಿ, ಕೈ ಮುಗಿದು ಒಳಗೆ ಬನ್ನಿ, ಕ್ಯಾಪ್ ತೆಗೆದು ಬನ್ನಿ ಎಂಬೆಲ್ಲ ಫಲಕಗಳನ್ನು ನೋಡಿರುತ್ತೇವೆ. ಆದರೆ ಮಂಡ್ಯದ ಪೊಲೀಸ್ ಠಾಣೆಯಲ್ಲಿ ಕೈ ತೊಳೆದು ಒಳಗೆ ಬನ್ನಿ ಎಂಬ ಫಲಕ ಹಾಕಲಾಗಿದೆ. ಕೊರೋನಾ ಬಗ್ಗೆ ಪೊಲೀಸ್ ಸಿಬ್ಬಂದಿ ಜಾಗೃತರಾಗಿದ್ದಾರೆ.

 

instructions to wash hands before entering Police station in Mandya
Author
Bangalore, First Published Mar 21, 2020, 11:06 AM IST

ಮಂಡ್ಯ(ಮಾ.21): ಚಪ್ಪಲಿ ಹೊರಗೆ ಬಿಟ್ಟು ಬನ್ನಿ, ಕೈ ಮುಗಿದು ಒಳಗೆ ಬನ್ನಿ, ಕ್ಯಾಪ್ ತೆಗೆದು ಬನ್ನಿ ಎಂಬೆಲ್ಲ ಫಲಕಗಳನ್ನು ನೋಡಿರುತ್ತೇವೆ. ಆದರೆ ಮಂಡ್ಯದ ಪೊಲೀಸ್ ಠಾಣೆಯಲ್ಲಿ ಕೈ ತೊಳೆದು ಒಳಗೆ ಬನ್ನಿ ಎಂಬ ಫಲಕ ಹಾಕಲಾಗಿದೆ. ಕೊರೋನಾ ಬಗ್ಗೆ ಪೊಲೀಸ್ ಸಿಬ್ಬಂದಿ ಜಾಗೃತರಾಗಿದ್ದಾರೆ.

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ನಗರದ ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ ಸಂಕೀರ್ಣ, ಪೊಲೀಸ್‌ ಠಾಣೆಗಳು, ತಹಸೀಲ್ದಾರ್‌ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊರೋನಾ ಆತಂಕ: ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸ್ಯಾನಿಟೈಸರ್‌ಗೆ ಹಣವಿಲ್ವಂತೆ!

ಕಚೇರಿ, ನ್ಯಾಯಾಲಯಗಳಿಗೆ ಆಗಮಿಸುವ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ತುರ್ತು ಕೆಲಸವಿರುವವರು ಮಾತ್ರ ಭೇಟಿ ನೀಡುವಂತೆ ಸೂಚಿಸಲಾಗಿದೆ. ನ್ಯಾಯಾಲಯದ ಮುಖ್ಯದ್ವಾರದಲ್ಲೇ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡದಂತೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಠಾಣೆ ಪ್ರವೇಶಿಸುವ ಮುನ್ನ ಕೈತೊಳೆದುಕೊಂಡು ಶುಚಿಯಾಗಿ ಬರುವಂತೆ ಸೂಚನಾ ಫಲಕ ಹಾಕಲಾಗಿದೆ.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಮೈಸೂರು- ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ ಎಲ್ಲ ಡಾಬಾ, ಹೋಟೆಲ್‌ಗಳನ್ನು ಬಂದ್‌ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದರಂತೆ ಎಲ್ಲ ಡಾಬಾ ಮತ್ತು ಹೋಟೆಲ್‌ಗÜಳನ್ನು ಬಂದ್‌ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಮಾಂಸಹಾರಿ ಹೋಟೆಲ್‌ಗಳ ಮೇಲೆ ಆರೋಗ್ಯಾಧಿಕಾರಿಗಳು ಶುಕ್ರವಾರ ಬಂದ್ ಮಾಡಿಸಿದರು. ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಸಾಗಾಣಿಕೆ ಮತ್ತುಮಾರಾಟವನ್ನು ನಿಷೇಧಿಸಿದೆ.

Follow Us:
Download App:
  • android
  • ios