ಬಾಗಲಕೋಟೆಯಲ್ಲಿ ವಿನೂತನ ಪ್ರಯೋಗ: ಮತದಾನ ಹೆಚ್ಚಿಸಲು ಕರೆಯೋಲೆ

ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ​ಧಿಕಾರಿ ಪಿ.ಸುನೀಲ್‌ಕುಮಾರ, ಜಿಪಂ ಸಿಇಒ ಟಿ.ಬೂಬಾಲನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಜಯಪ್ರಕಾಶ ಸಾರಥ್ಯದಲ್ಲಿ ನಿತ್ಯ ಒಂದಿಲ್ಲೊಂದು ಮತದಾನ ಜಾಗೃತಿಗಾಗಿ ವಿನೂತನ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗದ ಮುಂದುವರೆದ ಭಾಗವಾಗಿ ಮತದಾರರಿಗೆ ಮದುವೆಯ ಆಮಂತ್ರಣದ ರೂಪದಲ್ಲಿ ಮತದಾನದ ಮಮತೆಯ ಕರೆಯೋಲೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

Innovative Experiment in Bagalkot to Increase Voting grg

ಬಾಗಲಕೋಟೆ(ಏ.21):  ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಆಕರ್ಷಿಸಲು ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ಪತ್ರಿಕೆ ನೀಡಲು ಜಿಲ್ಲಾ ಸ್ವೀಪ್‌ ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ​ಧಿಕಾರಿ ಪಿ.ಸುನೀಲ್‌ಕುಮಾರ, ಜಿಪಂ ಸಿಇಒ ಟಿ.ಬೂಬಾಲನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಜಯಪ್ರಕಾಶ ಸಾರಥ್ಯದಲ್ಲಿ ನಿತ್ಯ ಒಂದಿಲ್ಲೊಂದು ಮತದಾನ ಜಾಗೃತಿಗಾಗಿ ವಿನೂತನ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗದ ಮುಂದುವರೆದ ಭಾಗವಾಗಿ ಮತದಾರರಿಗೆ ಮದುವೆಯ ಆಮಂತ್ರಣದ ರೂಪದಲ್ಲಿ ಮತದಾನದ ಮಮತೆಯ ಕರೆಯೋಲೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಲಿಂಗಾಯತರನ್ನು ಸಿಎಂ ಆಗಿ ಘೋಷಿಸುವ ತಾಕತ್ತು ಕೈಗಿದೆಯೇ?: ಮುರುಗೇಶ ನಿರಾಣಿ

ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ವಿತರಣೆ ಕಾರ್ಯಕ್ಕೆ ರಾಜ್ಯ ನೋಡಲ್‌ ಸ್ವೀಪ್‌ ಅ​ಧಿಕಾರಿಗಳು ಬುಧವಾರ ಚಾಲನೆ ನೀಡಿದ್ದಾರೆ. ಈ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಜಿಲ್ಲಾ ಸ್ವೀಪ್‌ ಸಮಿತಿಯು ಮತದಾರರ ಮಮತೆಯ ಕರೆಯೋಲೆ ಎಂಬ ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಮತದಾನದ ದಿನ ಮೇ 10, ಮುಹೂರ್ತ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ, ನಮ್ಮ ಮತ ನಮ್ಮ ಭವಿಷ್ಯ, ನಿಮ್ಮ ಹೆಸರು ನಮ್ಮ ಚುನಾವಣಾ ಮತದಾರರ ಪಟ್ಟಿಯಲ್ಲಿದೆ. ತಪ್ಪದೇ ಬಂದು ಮತದಾನ ಮಾಡಬೇಕಾಗಿ ವಿನಂತಿ. ಕೊನೆಗೆ ನಿಮ್ಮ ಆಗಮನವೇ ಆಶೀರ್ವಾದ, ಮತದಾನವೇ ಉಡುಗೊರೆ ಎಂದು ಬರೆಯಲಾಗಿದೆ.

ಎರಡನೇ ಪುಟದಲ್ಲಿ ಮೇ 10 ರಂದು ಬುಧವಾರ ದಿನ ಸಮಯ ಬೆ.7 ರಿಂದ ಸಂಜೆ 6 ರಂದು ಸಲ್ಲುವ ಶುಭಲಗ್ನದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ತೀರ್ಮಾನಿಸಿರುತ್ತದೆ. ಆದ್ದರಿಂದ ತಾವುಗಳು ತಮ್ಮ ಕುಟುಂಬದ ಅರ್ಹ ಮತದಾರರೊಂದಿಗೆ ನಿಮ್ಮ ಮತದಾನವಿರುವ ಮತಗಟ್ಟೆಗೆ ಆಗಮಿಸಿ, ನ್ಯಾಯಿಕ ಮತ ಚಲಾಯಿಸಬೇಕಾಗಿ ವಿನಂತಿಸಲಾಗಿದೆ. ತಮ್ಮ ಸುಖಾಗಮನ ಬಯಸುವವರು ಜಿಲ್ಲಾಧಿ​ಕಾರಿಗಳು ಹಾಗೂ ಜಿಲ್ಲಾ ಚುನಾವಣಾ​ಧಿಕಾರಿಗಳು, ಬಾಗಲಕೋಟೆ, ಮುಖ್ಯ ಕಾರ್ಯನಿರ್ವಹಣಾ​ಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಸ್ವೀಪ್‌ ಸಮಿತಿ, ಬಾಗಲಕೋಟೆ ಹಾಗೂ ಸಮಸ್ತ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗಳು ಎಂದು ಬರೆಯಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios