ನವದೆಹಲಿ(ಜ.16): ಇ- ವಾಣಿಜ್ಯ ಸಂಸ್ಥೆ ಅಮೆಜಾನ್‌ ಬುಧವಾರ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದು ಸುಮಾರು ಒಂದೂವರೆ ಗಂಟೆ ವಿಳಂಬ ಆಗಿದ್ದಕ್ಕೆ, ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೊಸ್‌ ಅವರ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎರಡು ದಿನಗಳ ಅಮೆಜಾನ್‌ ‘ಸಂಭವ್‌ ಶೃಂಗ’ ನಿಗದಿಗಿಂತಲೂ ವಿಳಂಬವಾಗಿ ಆರಂಭವಾಗಿದ್ದರಿಂದ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದ ನಾರಾಯಣ ಮುರ್ತಿ 20 ನಿಮಿಷಗಳ ತಮ್ಮ ಭಾಷಣವನ್ನು 5 ನಿಮಿಷಕ್ಕೆ ಮುಕ್ತಾಯಗೊಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

‘ನಮಗೆ ಈಗಾಗಲೇ ಒಂದೂವರೆ ಗಂಟೆ ವಿಳಂಬ ಆಗಿದೆ. ನಾನು ನನ್ನ ಭಾಷಣವನ್ನು 11.45ಕ್ಕೆ ಮುಕ್ತಾಯಗೊಳಿಸಬೇಕಿತ್ತು. ಆದರೆ, ಈಗ ಸಮಯ 11.53. ಹೀಗಾಗಿ ನನ್ನ ಭಾಷಣವನ್ನು 5 ನಿಮಿಷಕ್ಕೇ ಮುಕ್ತಾಯಗೊಳಿಸುತ್ತಿದ್ದೇನೆ. ನನ್ನಿಂದ ಇನ್ನಷ್ಟು ವಿಳಂಬ ಆಗಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.