Asianet Suvarna News Asianet Suvarna News

ಇನ್ಪೋಸಿಸ್‌ ಮೂವರು ಟೆಕ್ಕಿಗಳ ಬಂಧನ

ವಂಚನೆ ಆರೋಪದ ಅಡಿಯಲ್ಲಿ ಇನ್ಫೋಸಿಸ್ನ ಮೂವರು ಟೆಕ್ಕಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಮೂವರ ಬಂಧನವಾಗಿದೆ. 

Infosys Employee Arrested in Bengaluru
Author
Bengaluru, First Published Mar 9, 2020, 8:19 AM IST

 ಬೆಂಗಳೂರು [ಮಾ.09]:  ಆದಾಯ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಸಾಫ್ಟ್‌ವೇರ್‌ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಇಸ್ಫೋಸಿಸ್‌ ಕಂಪನಿಯ ಕಲ್ಯಾಣ್‌ಕುಮಾರ್‌, ಪ್ರಕಾಶ್‌ ಹಾಗೂ ದೇವೇಶ್ವರ್‌ ರೆಡ್ಡಿ ಬಂಧಿತರಾಗಿದ್ದು, ಆರೋಪಿಗಳಿಂದ .3 ಲಕ್ಷ ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ ಸೆಂಟ್ರಲ್‌ ಪ್ರೊಸೆಸಿಂಗ್‌ ಸೆಂಟರ್‌ನಲ್ಲಿ (ಸಿಪಿಸಿ) ಈ ಮೂವರು ಕೆಲಸ ಮಾಡುತ್ತಿದ್ದರು.

ಈ ಮೂವರು ತೆರಿಗೆದಾರರಿಂದ ಹಣ ಪಡೆದು ತೆರಿಗೆ ವಂಚನೆಗೆ ನೆರವಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಐಟಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಆರೋಪಿಗಳು, ಹಲವು ದಿನಗಳಿಂದ ಇಸ್ಫೋಸಿಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತೆರಿಗೆ ಇಲಾಖೆಯ ಸಿಪಿಸಿ ಪ್ರಾಜೆಕ್ಟ್ಗೆ ಇಸ್ಫೋಸಿಸ್‌ ಸಂಸ್ಥೆಯ ನೆರವನ್ನು ಐಟಿ ಇಲಾಖೆ ಪಡೆದಿದೆ. ಆಗ ಕಲ್ಯಾಣ್‌, ಪ್ರಕಾಶ್‌ ಹಾಗೂ ದೇವೇಶ್ವರ್‌ ಅವರನ್ನು ಸಿಪಿಸಿ ಪ್ರಾಜೆಕ್ಟ್ಗೆ ಕಂಪನಿ ನಿಯೋಜಿಸಿತ್ತು. ವಾರ್ಷಿಕ ತೆರಿಗೆ ಪಾವತಿ (ಐಟಿ ರಿಟನ್ಸ್‌ರ್‍) ಕುರಿತು ಇಲಾಖೆಗೆ ಸಾರ್ವಜನಿಕರು ದಾಖಲೆ ಸಲ್ಲಿಸುತ್ತಾರೆ. ಆಗ ತೆರಿಗೆ ಮರುಪಾವತಿ ಮಾಡಿಕೊಳ್ಳುವವರಿಗೆ ಏಳು ದಿನಗಳಲ್ಲಿ ಹಣ ಪಡೆಯಲು ಅವಕಾಶವಿರುತ್ತದೆ. ಇದನ್ನೇ ಬಳಸಿಕೊಂಡ ಆರೋಪಿಗಳು, ತೆರಿಗೆದಾರರಿಂದ ಹಣ ಪಡೆದು ಸುಳ್ಳು ಮಾಹಿತಿ ನೀಡಿ ಇಲಾಖೆಗೆ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಹಿಳಾ ದಿನಾಚರಣೆಯೆಂದೇ ಡೆತ್ ನೋಟ್ ಬರೆದಿಟ್ಟು ಪ್ರಾಧ್ಯಾಪಕಿ ಆತ್ಮಹತ್ಯೆ: ಕಾರಣ ?.

ಈ ಬಗ್ಗೆ ಪಡೆದ ಐಟಿ ನಿರ್ದೇಶಕ ಸಿಬಿಚೆನ್‌ ಮ್ಯಾಥ್ಯೂ, ಶಂಕೆ ಮೇರೆಗೆ ಆರೋಪಿಗಳ ವಿರುದ್ಧ ಮೊದಲು ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದರು. ಆಗ ಕಮಿಷನ್‌ ಪಡೆದು ತೆರಿಗೆ ವಂಚನೆಗೆ ಆರೋಪಿಗಳು ಸಹಕರಿಸಿರುವುದು ಖಚಿತವಾಯಿತು. ಈ ವರದಿ ಆಧರಿಸಿ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಐಟಿ ನಿರ್ದೇಶಕರು ದೂರು ಸಲ್ಲಿಸಿದರು. ವಂಚನೆ (ಐಪಿಸಿ 420) ಸೇರಿದಂತೆ ವಿವಿಧ ಪರಿಚ್ಛೆದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿ 15 ಲಕ್ಷ ಸಂಪಾದನೆ

ಐಟಿ ರಿಟನ್ಸ್‌ರ್‍ ಬಗ್ಗೆ ತೆರಿಗೆದಾರರು ದಾಖಲೆಗಳನ್ನು ಸಲ್ಲಿಸುತ್ತಿದ್ದರು. ಆಗ ಕಲ್ಯಾಣಕುಮಾರ್‌, ತೆರಿಗೆದಾರರ ಮೊಬೈಲ್‌ ಸಂಖ್ಯೆ ಸೇರಿದಂತೆ ಸ್ವವಿವರ ಪಡೆದು ರೆಡ್ಡಿ ಮತ್ತು ಪ್ರಕಾಶ್‌ಗೆ ಕಳುಹಿಸುತ್ತಿದ್ದ. ತರುವಾಯ ಪ್ರಕಾಶ್‌ ಹಾಗೂ ರೆಡ್ಡಿ, ಸದರಿ ತೆರಿಗೆದಾರರಿಗೆ ಕರೆ ಮಾಡಿ ನಿಮ್ಮ ಐಟಿ ರಿಟನ್ಸ್‌ರ್‍ ತಪ್ಪಿಸಲು ಸಹಕರಿಸುತ್ತೇವೆ. ಇದಕ್ಕೆ ಶೇ.4ರಷ್ಟುಕಮಿಷನ್‌ ಕೊಡಬೇಕು ಎನ್ನುತ್ತಿದ್ದರು. ಈ ಬೇಡಿಕೆಗೆ ಒಪ್ಪಿದ ತೆರಿಗೆದಾರರಿಂದ ಹಣ ಪಡೆದು ಇಲಾಖೆಗೆ ಸುಳ್ಳು ಮಾಹಿತಿ ಕೊಟ್ಟು ವಂಚನೆಗೆ ಸಹಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ರೀತಿ ಸುಮಾರು .15 ಲಕ್ಷ ಹಣವನ್ನು ಆರೋಪಿಗಳು ಸಂಪಾದಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿಗಳಿಂದ ಮೂರು ಲಕ್ಷ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios