ಬೆಂಗಳೂರು(ಫೆ.20): ನಿರ್ಗತಿಕರು ಹಾಗೂ ಹಿಂದು​ಳಿದ ವರ್ಗ​ಗಳ ಶ್ರೇಯೋ​ಭಿ​ವೃದ್ಧಿ ಹಾಗೂ ಸಾಮಾ​ಜಿಕ ಸಮ​ಸ್ಯೆ​ಗಳಿಗೆ ಆವಿಷ್ಕಾರದ ಮೂಲಕ ಪರಿ​ಹಾರ ಶೋಧಿ​ಸಿದ ಹತ್ತು ಮಂದಿಗೆ ಇನ್ಫೋ​ಸಿಸ್‌ ಫೌಂಡೇ​ಶನ್‌ ‘ಆರೋ​ಹಣ’ ಸೋಶಿ​ಯಲ್‌ ಇನ್ನೋ​ವೇ​ಷನ್‌ ಅವಾ​ರ್ಡ್‌ ನೀಡಿ ಗೌರ​ವಿ​ಸಿದೆ.

ಬುಧ​ವಾರ ಬೆಂಗ​ಳೂ​ರಿನ ಇಸ್ಫೋ​ಸಿಸ್‌ ಕ್ಯಾಂಪ​ಸ್‌​ನಲ್ಲಿ ನಡೆದ ಎರ​ಡನೇ ಆವೃ​ತ್ತಿಯ ‘ಆರೋ​ಹಣ’ ಸೋಶಿ​ಯಲ್‌ ಇನ್ನೋ​ವೇ​ಷನ್‌ ಅವಾ​ರ್ಡ್‌ ಸಮಾ​ರಂಭ​ದಲ್ಲಿ ಫೌಂಡೇ​ಶನ್‌ ಅಧ್ಯಕ್ಷೆ ಸುಧಾ​ಮೂ​ರ್ತಿ ಹತ್ತು ಮಂದಿಗೆ ಒಟ್ಟು 1.50 ಕೋಟಿ ಮೊತ್ತದ ಪ್ರಶಸ್ತಿ ಪ್ರದಾನ ಮಾಡಿ​ದರು. ವಿವಿಧ ವಿಭಾ​ಗ​ದ ಐದು ಆವಿ​ಷ್ಕಾ​ರ​ಗ​ಳಿಗೆ 20 ಲಕ್ಷ ಮೊತ್ತದ ಪ್ರಶಸ್ತಿ ಹಾಗೂ ಐದು ಮಂದಿಗೆ 10 ಲಕ್ಷ ಮೊತ್ತದ ಪ್ರಶಸ್ತಿ ನೀಡಿದರು.

ಚಿನ್ನದ ಪ್ರಶಸ್ತಿ (20 ಲಕ್ಷ) ಪುರ​ಸ್ಕೃ​ತ​ರು:

ಆರೋಗ್ಯ ರಕ್ಷಣೆ ವಿಭಾ​ಗದಲ್ಲಿ ರಕ್ತ ಹೊರ ತೆಗೆ​ಯದೇ ಹಿಮೋ​ಗ್ಲೋ​ಬಿನ್‌ ಮಟ್ಟ ಅಳೆ​ಯುವ ಉಪಕರಣ (ನಾನ್‌ ಇನ್‌​ವೇ​ಸಿವ್‌, ನಾನ್‌ ಕಾಂಟ್ಯಾಕ್ಟ್ ರೋಬಸ್ಟ್‌ ಹ್ಯಾಂಡ್‌ ಹೆಲ್ಡ್‌ ಪೋರ್ಟೆ​ಬಲ್‌ ಡಿವೈಸ್‌) ಶೋಧಿಸಿದ ಪಾರ್ಥ ಪ್ರತಿಮ್‌ ದಾಸ್‌ ಮಹಾ​ಪಾತ್ರ (ಕೋಲ್ಕತ್ತ), ಮಲೇ​ರಿಯಾ, ಡೆಂಘಿ, ಚಿಕ​ನ್‌​ಗುನ್ಯಾ ರೋಗ ನಿಯಂತ್ರಿ​ಸುವ ಉಪ​ಕ​ರಣ ಅಭಿ​ವೃ​ದ್ಧಿ​ಪ​ಡಿ​ಸಿದ ಡಾ ಬಿ​ನಿತಾ.ಎಸ್‌.​ತುಂಗಾ ಮತ್ತು ಡಾ ರಾ​ಶ​ಬೆ​ಹರಿ ತುಂಗಾ (ಬೆಂಗಳೂರು), ಮೂತ್ರದ ಮೂಲಕ ಟಿಬಿ ಪತ್ತೆ ಮಾಡುವ ಉಪಕರಣ ಆವಿ​ಷ್ಕ​ರಿ​ಸಿ​ದ ಮುಂಬೈನ ತುಮಾಸ್‌ (ಫೌಂಡೇ​ಶನ್‌ ಫಾರ್‌ ಟ್ಯುಬರ್‌ಕ್ಯುಲೋ​ಸಿ​ಸ್‌ ಮಾಲ್‌​ನ್ಯೂ​ಟ್ರಿ​ಶನ್‌ ಆ್ಯಂಡ್‌ ಏಡ್ಸ್‌)’, ​ಸು​ಸ್ಥಿ​ರತೆ ವಿಭಾ​ಗ​ದಲ್ಲಿ ಮ್ಯಾನ್‌​ಹೋಲ್‌ ಸ್ವಚ್ಛ​ಗೊ​ಳಿ​ಸುವ ‘ಬ್ಯಾಂಡಿ​ಕೊ​ಟ್‌’ ಎಂಬ ವಿಶ್ವದ ಮೊದಲ ರೋಬೋಟ್‌ ಯಂತ್ರ ಶೋಧಿ​ಸಿದ ‘ಕೆ.ರಶೀ​ದ್‌, ಎಂ.ಕೆ.ವಿಮ​ಲ್‌ ​ಗೋ​ವಿಂದ್‌ ಮತ್ತು ಎನ್‌.​ಪಿ.​ನಿಖಿಲ್‌ (ಕೇರ​ಳ)​’, ನಿರ್ಗ​ತಿ​ಕರ ರಕ್ಷಣೆ ವಿಭಾ​ಗ​ದಲ್ಲಿ ಸ್ಟ್ಯಾಂಡಿಂಗ್‌ ವ್ಹೀಲ್‌ಚೇರ್‌ ಆವಿ​ಷ್ಕ​ರಿ​ಸಿದ ‘ಪಿ.ಎಲ್‌ ರಾಮ​ಲಿಂಗಂ (ಚೆನ್ನೈ) ಅ​ವ​ರಿಗೆ ಚಿನ್ನದ ಪ್ರಶ​ಸ್ತಿ ನೀಡ​ಲಾಯಿತು.

ಬೆಳ್ಳಿ ಪ್ರಶಸ್ತಿ (10 ಲಕ್ಷ) ಪುರ​ಸ್ಕೃ​ತ​ರು:

ಆರೋಗ್ಯ ರಕ್ಷಣೆಯಲ್ಲಿ ನವಜಾತ ಶಿಶುಗಳಿಗೆ ಉಸಿರಾಟ ವ್ಯವಸ್ಥೆ ಕಲ್ಪಿಸುವ ‘ಸಾನ್ಸ್‌’ ಯಂತ್ರ ಅಭಿವೃದ್ಧಿಪಡಿಸಿದ ‘ನಿತೇಶ್‌ ಕುಮಾರ್‌ ಜಾಂಗೀರ್‌ (ಬೆಂಗಳೂರು)’, ಹಾಲಿ ಇರುವ ಆರ್ಥೋಟಿಕ್‌ ಕ್ಯಾಲಿಪರ್ಸ್‌ಗೆ ಪರ್ಯಾಯವಾಗಿರುವ ಮೆಕ್ಯಾನಿಕಲಿ ಆ್ಯಕ್ಟುವೇಟೆಡ್‌ ಸ್ಟಾನ್ಸ್‌ ಕಂಟ್ರೋಲ್ಡ್‌ ನೀ ಆ್ಯಂಕಲ್‌ ಫäಟ್‌ ಆರ್ಥೋಟಿಕ್‌ (ಎಂಎಸ್‌ಎಸ್‌ಸಿ-ಕೆಎಎಫ್‌ಒ) ಅಭಿವೃದ್ಧಿ ಪಡಿಸಿದ ‘ಅನೀಶ್‌ ಕರ್ಮ (ನವದೆಹಲಿ)’, ಅಪಸ್ಮಾರವನ್ನು ತಡೆಯುವ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿ ಗುರುತಿಸುವ ‘ಟಿಜಯ್‌’ ಎಂಬ ಇಂಟರ್ನೆಟ್‌ ಆಫ್‌ ತಿಂಗ್ಸ್‌ (ಐಒಟಿ) ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ಎಂಬ ಧರಿಸಬಹುದಾದ ಉಪಕರಣ ಆವಿ​ಷ್ಕ​ರಿ​ಸಿದ ರಾಜಲಕ್ಷ್ಮೇ ಬೊರ್ಥಕೂರು (ಬೆಂಗಳೂರು)’, ಕ್ಯಾನ್ಸ​ರ್‌​ನಿಂದ ಧ್ವನಿ ​ಪೆ​ಟ್ಟಿಗೆ ಕಳೆ​ದು​ಕೊಂಡ​ವ​ವ​ರಿಗೆ ಕೃತಕ ಧ್ವನಿ ಪೆಟ್ಟಿಗೆ (ಔಮ್‌​ವಾಯ್‌್ಸ ಪ್ರೊಸೆಸಿಸ್‌) ಅಭಿವೃದ್ಧಿಪಡಿಸಿದ ಡಾ ವಿಶಾಲ್‌.ಯು.ಎಸ್‌. ರಾವ್‌ ಮತ್ತು ಶಶಾಂಕ್‌ ಮಹೇಶ್‌ (ಬೆಂಗಳೂರು)’ ಹಾಗೂ ಗ್ರಾಮೀ​ಣಾ​ಭಿ​ವೃ​ದ್ಧಿ​ ವಿಭಾ​ಗ​ದಲ್ಲಿ ಕಡಿ​ಮೆ ವೆಚ್ಚ​ದಲ್ಲಿ ಈರುಳ್ಳಿ ಸಂಗ್ರಹ ಮಾಡಲು ಪರಿ​ಹಾರ ಅಭಿ​ವೃ​ದ್ಧಿ​ಪ​ಡಿ​ಸಿದ ‘ರೋಹಿತ್‌ ಪಟೇಲ್‌ (ಮಧ್ಯ​ಪ್ರ​ದೇ​ಶ)’ ಅವರು ಬೆಳ್ಳಿ ಪ್ರಶ​ಸ್ತಿಗೆ ಭಾಜ​ನ​ರಾ​ದರು.

‘ಹೊಸ ಆವಿಷ್ಕಾರಕ್ಕೆ ಸರ್ಕಾರ ಮಾರುಕಟ್ಟೆ ಒದಗಿಸಬೇಕು’

ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಮಾತ​ನಾ​ಡಿ, ಪ್ರಶಸ್ತಿ ನೀಡಿ ಹೊಸ ಆವಿ​ಷ್ಕಾ​ರ ಉತ್ತೇಜಿಸಿ​ದರೇ ಭವಿ​ಷ್ಯ​ದಲ್ಲಿ ಸಾಮಾ​ಜಿಕ ಸಮ​ಸ್ಯೆ​ಗ​ಳಿಗೆ ಮತ್ತಷ್ಟು ಆವಿ​ಷ್ಕಾ​ರ​ಗಳು ಹೊರ​ಬ​ರಲು ಸಾಧ್ಯ​ವಾ​ಗು​ತ್ತದೆ. ಇಂತಹ ಆವಿ​ಷ್ಕಾ​ರ​ಗಳನ್ನು ಸರ್ಕಾ​ರ ಉತ್ತೇ​​ಜಿ​ಸ​ಬೇಕಿದೆ. ಭವಿ​ಷ್ಯದ ಅಭಿ​ವೃ​ದ್ಧಿಗಾಗಿ ಹೊಸ ಆವಿ​ಷ್ಕಾ​ರ​ಗ​ಳಿಗೆ ಸರ್ಕಾ​ರ ಮಾರು​ಕಟ್ಟೆ ಒದ​ಗಿ​ಸ​ಬೇಕು ಎಂದರು.

ಎರಡನೇ ಆವೃ​ತ್ತಿ​ಯ ‘ಆರೋ​ಹ​ಣ’ಪ್ರಶ​ಸ್ತಿಗೆ 1700ಕ್ಕೂ ಅಧಿಕ ಅರ್ಜಿ (ಆವಿ​ಷ್ಕಾ​ರ)​ ​ಸ​ಲ್ಲಿ​ಕೆ​ಯಾ​ಗಿದ್ದು, ಅದ​ರ​ಲ್ಲಿ ಹತ್ತು ಆವಿ​ಷ್ಕಾ​ರ​ ಆಯ್ಕೆ ಮಾಡು​ವುದೇ ಸವಾ​ಲಾ​ಗಿತ್ತು. ಈ ಬಾರಿ ಆರೋಗ್ಯ ರಕ್ಷ​ಣೆ ಸಂಬಂಧಿಸಿದ ಅರ್ಜಿ​ ಹೆಚ್ಚಿ​ದ್ದರಿಂದ ಮೂರನೇ ಆವೃ​ತ್ತಿಯ ತೀರ್ಪು​ಗಾರರಲ್ಲಿ ನುರಿತ ವೈದ್ಯರೊಬ್ಬ​ರಿಗೆ ಅವ​ಕಾಶ ನೀಡ​ಲಾ​ಗು​ವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಸ್ಫೋ​ಸಿಸ್‌ ಕಂಪನಿ ಅಧ್ಯಕ್ಷ ನಂದನ್‌ ನಿಲೇ​ಕಣಿ ಮಾತನಾಡಿ, ವಿದ್ಯಾ​ರ್ಥಿ ಹಂತ​ದಿಂದಲೇ ಆವಿ​ಷ್ಕಾ​ರಕ್ಕೆ ಮುಂದಾ​ದರೆ ಅಭಿ​ವೃದ್ಧಿ ಹೆಚ್ಚು. ಆವಿ​ಷ್ಕರಿ​ಸಿದ ಉಪ​ಕ​ರಣ ಇನ್ನಷ್ಟು ಅಭಿ​ವೃದ್ಧಿ ಪಡಿಸಿ, ಸ್ಮಾರ್ಟ್‌ ಮಾಡಿ ಜನ​ರಿಗೆ ತಲು​ಪಿ​ಸು​ವಂತೆ ಮಾಡಬೇಕೆಂದರು.

ವಿಶ್ವದ ಮೊದಲ ಮ್ಯಾನ್‌​ಹೋಲ್‌ ರೋಬೋಟ್‌ ಯಂತ್ರ: ರಶೀದ್‌

ಮ್ಯಾನ್‌​ಹೋಲ್‌ ದುರಂತ ಹೆಚ್ಚಾ​ಗು​ತ್ತಿ​ರುವ ಹಿನ್ನೆಲೆ ಪರಿ​ಹಾ​ರಾ​ರ್ಥ​ವಾಗಿ ಜಗ​ತ್ತಿ​ನಲ್ಲೇ ಮೊದಲ ಬಾರಿ​ಗೆ ‘ಮ್ಯಾನ್‌​ಹೋಲ್‌ ರೋಬೋಟ್‌ ಯಂತ್ರ’ ಆವಿ​ಷ್ಕ​ರಿ​ಸ​ಲಾ​ಗಿದೆ. ಕ್ಯಾಮೆರಾ ಹೊಂದಿ​ರುವ ಯಂತ್ರವನ್ನು ಮ್ಯಾನ್‌​ಹೋ​ಲ್‌​ನಲ್ಲಿ ಇಳಿಸಿ ಮೇಲಿಂದಲೇ ಕಂಪ್ಯೂ​ಟರ್‌ ಮೂಲಕ ಒಬ್ಬ​ರೇ ನಿಯಂತ್ರಿ​ಸ​ಬ​ಹು​ದು. ಸಂಪೂರ್ಣ ಮೆಟ​ಲ್‌​ನಿಂದ ತಯಾ​ರಿ​ಸ​ಲಾ​ಗಿದ್ದು, ಜಲ​ನಿ​ರೋ​ಧ​ಕ​ವಾ​ಗಿದೆ. ಒಟ್ಟು 1.5 ಕೋಟಿ ವೆಚ್ಚ​ ತಗು​ಲಿದೆ ಎಂದು ಕೇರ​ಳದ ಬ್ಯಾಂಡಿ​ಕೊ​ಟ್‌ ಸಂಶೋಧಿಸಿದ ಕೆ.ರ​ಶೀದ್‌ ತಿಳಿ​ಸಿ​ದರು.